ಎಲ್ಲವೂ ಚೆನ್ನಾಗಿಯೇ ಇತ್ತು.. ಯಜುವೇಂದ್ರ ಚಹಲ್‌, ಧನಶ್ರೀ ದೂರಾಗಲು ಈ ಮೂರೇ ಕಾರಣ! ಏನದು?

author-image
Gopal Kulkarni
Updated On
ಎಲ್ಲವೂ ಚೆನ್ನಾಗಿಯೇ ಇತ್ತು.. ಯಜುವೇಂದ್ರ ಚಹಲ್‌, ಧನಶ್ರೀ ದೂರಾಗಲು ಈ ಮೂರೇ ಕಾರಣ! ಏನದು?
Advertisment
  • ಕೊನೆಗೂ ಮುರಿದು ಬಿದ್ದ ಚಹಲ್ ಧನಶ್ರೀ ಮದುವೆಯ ಬಂಧನ
  • ಕೋರ್ಟ್ ಸಮಯಾವಕಾಶ ಕೊಟ್ಟರು ಕೂಡಿಕೊಳ್ಳಲಿಲ್ಲ ಜೋಡಿ
  • ಧನಶ್ರೀ-ಚಹಲ್ ದಾಂಪತ್ಯದ ಅಂತ್ಯಕ್ಕೆ ಅಸಲಿ ಕಾರಣಗಳೇನು ಗೊತ್ತಾ?

ಹಿಂದೊಂದ್‌ ಕಾಲವಿತ್ತು. ಮದುವೆ ಅನ್ನೋದ್‌ ಸ್ವರ್ಗದಲ್ಲಿ ನಿರ್ಧಾರವಾಗುತ್ತೆ. ಭೂಲೋಕದಲ್ಲಿ ಕಲ್ಯಾಣ ಮಂಟಪಗಳು ಮಾತ್ರ ಅನ್ನೋ ಕಾಲ ಅದಾಗಿತ್ತು. ಆದ್ರೆ, ಇತ್ತೀಚಿನ ವರ್ಷಗಳಲ್ಲಿ ಪತಿ ಪತ್ನಿ ಸಂಬಂಧ ಅನ್ನೋದ್‌ ನೀರಿನ ಮೇಲಿನ ಗುಳ್ಳೆಯಂತಾಬಿ ಬಿಟ್ಟಿದೆ. ಯಾಕಂದ್ರೆ, ಯಾವಾಗ ಜೊತೆಯಾಗಿ ಇರ್ತಾರೆ? ಯಾವಾಗ ಡಿವೋರ್ಸ್‌ ಮೊರೆ ಹೋಗ್ತಾರೆ ಅಂತಾ ಊಹಿಸೋದಕ್ಕೂ ಸಾಧ್ಯವಿಲ್ಲ. ನೋಡೋದಕ್ಕೆ ಇನ್‌ಸ್ಟಾದಲ್ಲಿ ರೀಲ್ಸ್‌ ಮಾಡ್ತಾ, ಡ್ಯಾನ್ಸ್‌ ಮಾಡ್ತಾ ಚೆನ್ನಾಗಿಯೇ ಇರ್ತಾರೆ. ನೋಡೋರಿಗೆ ವಾವ್ಹ್‌! ಅದ್ಭುತ ಜೋಡಿ ಅನಿಸುತ್ತೆ. ಬಟ್‌, ದಿಢೀರ್‌ ಅಂತಾ ಒಂದ್‌ ದಿನ ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡ್ತಾರೆ. ಅಲ್ಲಿಗೆ ಏನೋ ಆಗ್ತಿದೆ ಅನ್ನೋ ಗುಸು ಗುಸು ಹುಟ್ಟಿಕೊಳ್ಳುತ್ತೆ. ನೋಡ್ತಾ ನೋಡ್ತಾ ಇರುವಂತೆ ಕೋರ್ಟ್‌ ಮೊರೆ ಹೋಗಿ ವಿಚ್ಛೇಧನವನ್ನ ಪಡೆದು ಬಿಡ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್‌ ದಂಪತಿಗಳಲ್ಲಿ ಇಂತಾ ಡಿವೋರ್ಸ್‌ಗಳನ್ನು ಬೇಕಾದಷ್ಟು ನೋಡಿದ್ದೇವೆ. ಇದೀಗ ಆ ಸಾಲಿಗೆ ಭಾರತದ ತಂಡದ ಖ್ಯಾತ ಸ್ಪಿನ್ನರ್‌ ಯಜುವೇಂದ್ರ ಚಹಲ್‌-ಧನಶ್ರೀ ಸೇರ್ಪಡೆಯಾಗಿದ್ದಾರೆ.

ದಾಂಪತ್ಯ ಪಂದ್ಯದಲ್ಲಿ ರನೌಟ್‌ ಆದ್ರು ಚಹಲ್‌-ಧನಶ್ರೀ!
ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮತ್ತು ಧನಶ್ರೀ ಸ್ಟಾರ್‌ ದಂಪತಿ ಅಂತಾನೇ ಗುರುತಿಸಿಕೊಂಡಿದ್ದರು. ಇನ್‌ಸ್ಟಾದಲ್ಲಿ ಆಗಾಗ ರೀಲ್ಸ್‌ ಮಾಡ್ತಾ ಗಂಡ ಹೆಂಡ್ತಿ ಅಂದ್ರೆ ಹೀಗೀರಬೇಕು ಅಂತಾ ತೋರಿಸಿ ಕೊಡ್ತಿದ್ರು. ಆದ್ರೆ, ಇತ್ತೀಚಿಗೆ ಯಾವಾಗ ಚಹಲ್‌ ತನ್ನ ಇನ್‌ಸ್ಟಾದಲ್ಲಿರೋ ಧನಶ್ರೀ ಫೋಟೋಗಳನ್ನು ಡಿಲೀಟ್‌ ಮಾಡಿದ್ರೋ? ಹಾಗೇ ಧನಶ್ರೀಯನ್ನ ಅನ್‌ಫಾಲೋ ಮಾಡಿದ್ರೋ? ಆವಾಗ್ಲೇ ಸಂದೇಹ ಹುಟ್ಟಿಕೊಂಡಿತ್ತು. ಇಬ್ಬರ ಬಾಂಧವ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಮಾತುಗಳು ಕೇಳಿ ಬರೋದಕ್ಕೆ ಶುರುವಾಗಿದ್ವು. ಬಟ್‌, ಅದು ಸತ್ಯ ಅನ್ನೋದ್‌ ಅವರಿಬ್ಬರು ಕೋರ್ಟ್‌ ಮೆಟ್ಟಿಲು ಏರಿದ್ಮೇಲೆ ಕನ್ಫರ್ಮ್‌ ಆಯ್ತು.

ಗುರುವಾರ ಅಂದ್ರೆ ಫೆಬ್ರವರಿ 20ನೇ ತಾರೀಖೆಗೆ ಮುಂಬೈನ ಬಾಂದ್ರಾದ ಫ್ಯಾಮಿಲಿ ಕೋರ್ಟ್‌ನಲ್ಲಿ ಅಂತಿಮ ವಾಚಾರಣೆ ಇತ್ತು. ಇಬ್ಬರು ಬೆಳಗ್ಗೆ 11 ಗಂಟೆಯ ವೇಳೆಗೆ ಕೋರ್ಟ್‌ ಮುಂದೆ ಹಾಜರಾಗಿದ್ರು. ಈ ಸಂದರ್ಭದಲ್ಲಿ ಕೋರ್ಟ್‌ 45 ನಿಮಿಷದ ಕಾಲಾವಕಾಶ ನೀಡಿತ್ತು. ಅದೊಂದ್‌ ರೀತಿಯಲ್ಲಿ ಇಬ್ಬರು ಪತಿ ಪತ್ನಿಯಾಗಿ ಮುಂದುವರಿಯೋ ತೀರ್ಮಾನ ತೆಗೆದ್ಕೊಳ್ಳೋದಕ್ಕೆ ಇದ್ದಂತಹ ಫೈನಲ್‌ ಅವಕಾಶವಾಗಿತ್ತು. ಆಮೇಲೆ ಇಬ್ಬರ ಅಭಿಪ್ರಾಯಗಳನ್ನ ಆಲಿಸಿದ ನ್ಯಾಯಾಧೀಶರು ಇನ್ಮೇಲೆ ಚಹಲ್‌ ಮತ್ತು ಧನಶ್ರೀ ಪತಿ ಪತ್ನಿ ಅಲ್ಲ ಅನ್ನೋ ತೀರ್ಪು ಕೊಡ್ತು. ಅಂದ್ರೆ ಡೈವೋರ್ಟ್‌ ತೀರ್ಪು ಪ್ರಕಟವಾಯ್ತು. ಆದ್ರೆ, ಕೋರ್ಟ್‌ ಕೊಟ್ಟಿದ್ದ ಅಂತಿಮ 45 ನಿಮಿಷದಲ್ಲಿ ಚೆನ್ನಾಗಿಯೇ ಇದ್ದ ಸ್ಟಾರ್‌ ಜೋಡಿಯಲ್ಲಿ ವಿಚ್ಛೇಧನಕ್ಕೆ ಕಾರಣ ಏನು ಅನ್ನೋದ್‌ ರಿವೀಲ್‌ ಆಗಿದೆ. ಡಿವೋರ್ಸ್‌ ಸತ್ಯ ಹೊರಬಂದಿದೆ.

publive-image

ಕಾರಣ1: ಮದುವೆ ಆರಂಭದಲ್ಲಿ ಚೆನ್ನಾಗಿತ್ತು, ಆಮೇಲೆ ದಿನನಿತ್ಯ ಜಗಳ!
ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಚಹಲ್‌ ಮತ್ತು ಧನಶ್ರೀ ಪ್ರೀತಿಸಿ ಮದುವೆಯಾದವರು. ಲಾಕ್‌ಡೌನ್‌ ಟೈಮ್‌ನಲ್ಲಿ ಚಹಲ್‌ ಡ್ಯಾನ್ಸ್‌ ಕಲಿಯಲು ಧನಶ್ರೀ ಬಳಿ ಹೋದಾಗ ಪ್ರೀತಿ ಅರಳಿತ್ತು. ಅದೇ ಪ್ರೀತಿ ಮದುವೆಯ ಬಂಧನಕ್ಕೂ ತಂದು ನಿಲ್ಲಿಸಿತ್ತು. ಆದ್ರೆ. ಮದುವೆಯಾಗಿ 4 ವರ್ಷದಲ್ಲಿಯೇ ಡಿವೋರ್ಸ್‌ ತೆಗೆದ್ಕೊಂಡಿದ್ದಾರೆ. ಕಾರಣ ಏನು ಅನ್ನೋದ್‌ ಕೋರ್ಟ್‌ನಲ್ಲಿ ಹೊರಬಂದಿದೆ. ಅದ್ರಲ್ಲಿ ಪ್ರಮುಖವಾಗಿ ಇಬ್ಬರು ಹೇಳಿದ್ದೇನು ಅಂದ್ರೆ, ಮದುವೆಯಾದಾಗ ಇಬ್ಬರು ನಡುವೆ ಸಂಬಂಧ ಅನ್ನೋದ್‌ ಚೆನ್ನಾಗಿಯೇ ಇತ್ತು. ತುಂಬಾ ಅನ್ಯೂನ್ಯವಾಗಿಯೇ ಜೀವನದ ಬಂಡಿ ಸಾಗ್ತಾನೇ ಇತ್ತು. ಆದರೆ ಬರು ಬರುತ್ತಿದ್ದಂತೆ ಇಬ್ಬರ ನಡುವೆ ಮುನಿಸು ಶುರುವಾಯ್ತು. ಅದು ಪ್ರತಿ ನಿತ್ಯದ ಜಗಳಕ್ಕೆ ತಂದು ನಿಲ್ಲಿಸಿತ್ತು. ಪ್ರತಿ ದಿನ ಒಂದಿಲ್ಲ ಒಂದ್‌ ಕಾರಣಕ್ಕೆ ಇಬ್ಬರು ಜಗಳ ಆಡ್ತಾ ಇದ್ದರಂತೆ. ಹೀಗಾಗಿ ಹೊಂದಾಣಿಗೆ ಸಾಧ್ಯವೇ ಇಲ್ಲ. ತಾವಿಬ್ಬರು ಜೊತೆಯಾಗಿ ಜೀವನ ಮಾಡೋದಕ್ಕೆ ಸಾಧ್ಯವಿಲ್ಲ ಅಂತಾ ಕೋರ್ಟ್‌ಗೆ ತಿಳಿಸಿದ್ದಾರೆ. ಅದ್ಕೆ ಕೋರ್ಟ್‌ ಅಸ್ತು ಅಂತಾ ಹೇಳಿದೆ ಅನ್ನೋದ್‌ ತೀರ್ಪಿನಲ್ಲಿಯೇ ಕಾಣಿಸ್ತಿದೆ.

publive-image

ಕಾರಣ2: ಜಗಳ ನಿಯಂತ್ರಣಕ್ಕೆ ಸಿಕ್ಕಿಲ್ಲ, ಮಿತಿಮೀರಿತ್ತು!
ಪತಿ ಪತ್ನಿ ಅಂದ್ರೆ ಮುನಿಸು, ಕೋಪ, ಜಗಳ ಅನ್ನೋದ್‌ ಇದ್ದೇ ಇರುತ್ತೆ. ಅದು ಇದ್ರೇನೆ ಚೆಂದ. ಆದ್ರೆ, ಮಿತಿ ಮೀರಿದ್ರೂ ಅಪಾಯ ಗ್ಯಾರಂಟಿ. ಚಹಲ್‌ ಮತ್ತು ಧನಶ್ರೀ ಬಾಂಧವ್ಯದಲ್ಲಿ ಆಗಿದ್ದು ಅದೇ ನೋಡಿ. ಆರಂಭದಲ್ಲಿ ಈ ಜೋಡಿ ಚೆನ್ನಾಗಿ ಹೊಂದಾಣಿಕೆ ಮಾಡ್ಕೊಂಡ್‌ ಸಾಗ್ತಾ ಇತ್ತು. ಅದ್ರಲ್ಲಿಯೂ ಪ್ರೀತಿಸಿ ಮದುವೆಯಾದ ಜೋಡಿಯಾಗಿರೋ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಮೊದಲೆ ಅರಿತ್ಕೊಂಡಿದ್ರು. ಬಟ್‌, ಮದುವೆಯಾದ್ಮೇಲೆ ಸಂಸಾರದಲ್ಲಿ ಬಿರುಗಾಳಿ ಶುರುವಾಯ್ತು. ಇಬ್ಬರ ನಡುವೆ ಜಗಳ ನಿಯಂತ್ರಣಕ್ಕೆ ಸಿಗದ ಮಟ್ಟಕ್ಕೆ ಹೋಯ್ತು. ಇದು ಇಬ್ಬರಿಗೂ ಮಾನಸಿಕ ನೆಮ್ಮದಿಯನ್ನ ಹಾಳು ಮಾಡ್ತು. ಎರಡೂ ಕುಟುಂಬದವ್ರಿಗೂ ಕಿರಿಕಿರಿ ಮಾಡ್ತಾ ಇತ್ತು. ಅಂತಿಮವಾಗಿ ತಮ್ಮಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಅನ್ನೋದ್‌ ಇಬ್ಬರಿಗೂ ಅರ್ಥವಾಯ್ತು. ಇದೇ ಹಿನ್ನೆಲೆಯಲ್ಲಿ ತಾವು ಡಿವೋರ್ಸ್‌ ತೆಗೆದ್ಕೊಳ್ಳುವುದೇ ಸೂಕ್ತ ಅಂತಾ ಕೋರ್ಟ್‌ ಮೊರೆ ಹೋಗಿದ್ರು.

publive-image

ಕಾರಣ3: ಕಳೆದ 18 ತಿಂಗಳಿಂದ ಬೇರೆ ಬೇರೆ ವಾಸ!
ಚಹಲ್‌-ಧನಶ್ರೀ ಬಂಧನ ಹಳಿ ತಪ್ಪಿದೆ. ಇಬ್ಬರು ಡಿವೋರ್ಸ್‌ ಮೊರೆ ಹೋಗಲಿದ್ದಾರೆ ಅನ್ನೋ ಸುದ್ದಿ ಸ್ಫೋಟವಾಗಿದ್ದು ಜನವರಿಯಲ್ಲಿ. ಆದ್ರೆ, ಅವ್ರಿಬ್ಬರು ತಮ್ಮ ನಡುವೆ ಹೊಂದಾಣಿಕೆ ಇಲ್ಲ ಅಂತಾ ಬೇರೆ ಬೇರೆ ವಾಸ ಮಾಡಲು ಶುರು ಮಾಡಿದ್ದು ಕಳೆದ 18 ತಿಂಗಳ ಹಿಂದೆ. ಹೌದು, ಮನೆಯಲ್ಲಿ ಪ್ರತಿನಿತ್ಯ ಜಗಳ ಆಗ್ತಾ ಇತ್ತಂತೆ. ಪ್ರತಿಯೊಂದ್‌ ವಿಚಾರದಲ್ಲಿಯೂ ಇಬ್ಬರಿಗೂ ಮುನಿಸು ಅನ್ನೋದ್‌ ಇತ್ತಂತೆ. ಅದನ್ನ ಸರಿ ಪಡಿಸ್ಕೋಬೇಕು ಅಂತಾ ಪ್ರಯತ್ನಿಸಿದ್ದಾರೆ. ಆದ್ರೂ ಸಾಧ್ಯವಾಗಿಲ್ಲ. ಸುಮ್ಮನೇ ತಾವು ಜೊತೆಯಾಗಿ ವಾಸ ಮಾಡೋದ್ರಿಂದ ಇಬ್ಬರಿಗೂ ಮಾನಸಿಕ ನೆಮ್ಮದಿ ಇರೋದಿಲ್ಲ ಅಂತಾ ಡಿವೋರ್ಸ್‌ ಮೊರೆ ಹೋಗೋ ತೀರ್ಮಾನ ಮಾಡಿದ್ದಾರೆ. ಹೀಗಾಗಿಯೇ ಇಬ್ಬರು ಕಳೆದ 18 ತಿಂಗಳಿಂದ ನಾನೊಂದು ತೀರಾ ನೀನೊಂದು ತೀರಾ ಅಂತಾ ಬೇರೆ ಬೇರೆಯಾಗಿಯೇ ವಾಸವಾಗಿದ್ರು. ಇದೀಗ ಕೋರ್ಟ್‌ ಅಂತಿಮ ತೀರ್ಪು ಕೊಡೋದಕ್ಕೂ ಮುನ್ನ ಇಬ್ಬರೂ ನೀಡಿದ್ದ 45 ನಿಮಿಷದ ಕಾಲಾವಕಾಶದಲ್ಲಿ ಸತ್ಯ ಹೊರಬಂದಿದೆ.

ಡಿವೋರ್ಸ್‌ ಬೆನ್ನಲ್ಲಿಯೇ ಧನಶ್ರೀ ಪೋಸ್ಟ್‌ ವೈರಲ್‌!
ಇಂದು ಸೆಲೆಬ್ರಿಟಿಗಳು ಹೇಗಿದ್ದಾರೆ? ಅವ್ರು ಪತಿ ಪತ್ನಿ ಜೊತೆ ಹೇಗೆ ಇರ್ತಾರೆ ಅನ್ನೋದ್‌ ಎಲ್ಲವೂ ಇನ್‌ಸ್ಟಾಗ್ರಾಮ್‌ನಲ್ಲಿಯೇ ಗೊತ್ತಾಗಿ ಬಿಡುತ್ತೆ. ಯಾಕಂದ್ರೆ, ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಲೈಫ್‌ನಲ್ಲಿ ಎದುರಾಗೋ ಸಂತೋಷವನ್ನು ಹೇಗೆ ಹಂಚಿಕೊಳ್ತಾರೋ? ಹಾಗೇ ದುಃಖದ ಸುದ್ದಿಯನ್ನೂ ಹಂಚಿಕೊಂಡ್ತಾರೆ. ಈ ಮಾತು ಏಕೆ ಅಂದ್ರೆ, ಚಹಲ್ ಮತ್ತು ಧನಶ್ರೀ ನಡುವೆ ಡಿವೋರ್ಸ್ಟ್‌ ಅಧಿಕೃತ ಆಗ್ತಾ ಇದ್ದಂತೆ ಧನಶ್ರೀ ಇನ್‌ಸ್ಟಾದಲ್ಲಿ ಒಂದು ಪೋಸ್ಟ್‌ ಮಾಡಿದ್ದಾರೆ. ಆ ಪೋಸ್ಟ್‌ ವೈರಲ್‌ ಆಗಿದೆ.

ಇದನ್ನೂ ಓದಿ:

ದೇವರು ನಮ್ಮ ಚಿಂತೆಗಳನ್ನು ಹೇಗೆ ಆಶೀರ್ವಾದವಾಗಿ ಪರಿವರ್ತಿಸುತ್ತಾನೆ ಅನ್ನೋದು ನಿಜಕ್ಕೂ ಅದ್ಭುತ ಅಲ್ವಾ? ನಿಮ್ಮನ್ನ ಯಾವುದಾದರೂ ಒಂದು ವಿಷಯ ಬಿಡದೇ ಕಾಡುತ್ತಿದೆ ಅಂದ್ರೆ, ಮುಂದೆ ನಿಮಗಾಗಿ ಒಂದು ಆಯ್ಕೆ ಇದ್ದೇ ಇರುತ್ತೆ ಅಂತಾ ಅರ್ಥ. ನೀವು ಚಿಂತಿಸುತ್ತಲೇ ಇರಬಹುದು ಅಥವಾ ಎಲ್ಲವನ್ನೂ ದೇವರಿಗೆ ಒಪ್ಪಿಸಿ ಎಲ್ಲದರ ಬಗ್ಗೆಯೂ ಪ್ರಾರ್ಥಿಸಲು ಆಯ್ಕೆ ಮಾಡಿಕೊಳ್ಳಬಹುದು. ದೇವರು ಎಲ್ಲವನ್ನೂಸ ಒಳಿತಿಗಾಗಿ ಮಾಡ್ತಾನೆ ಅನ್ನೋದನ್ನ ನಂಬುವುದರಲ್ಲಿ ಅರ್ಥವಿದೆ ಎಂದು ಧನಶ್ರೀ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

publive-image

ಈ ಪೋಸ್ಟ್‌ ನೋಡ್ತಾ ಇದ್ರೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡು ಮಾಡಲಿಕ್ಕೆ  ಸಾಧ್ಯವೇ ಇಲ್ಲ ಅನ್ನೋದನ್ನ ತೋರಿಸ್ತಿದೆ. ಆದ್ರೆ, ಇಬ್ಬರು ಸಹ ಜೀವನ ಮಾಡಬೇಕೋ? ಇಲ್ಲವೋ ಡಿವೋರ್ಸ್‌ ತೆಗೆದ್ಕೊಳ್ಳಬೇಕೋ? ಅನ್ನೋದ್‌ ಅವರಿಬ್ಬರ ವೈಯಕ್ತಿಕ ವಿಚಾರವಾಗಿತ್ತು. ಅಂತಿಮವಾಗಿ ಡಿವೋರ್ಸ್‌ ತೆಗೆದ್ಕೊಂಡಿದ್ದಾರೆ. ಈಗ ಇರೋ ಪ್ರಶ್ನೆ ಧನಶ್ರೀ ಜೀವನಾಂಶ ಎಷ್ಟು ತೆಗೆದ್ಕೊಂಡ್ರು? ಇಬ್ಬರು ಪ್ರೇಮಿಗಳಾಗಿದ್ದಾಗ ಅಷ್ಟೊಂದು ಚೆನ್ನಾಗಿ ಇದ್ದವ್ರು ಮದುವೆ ಆದ್ಮೇಲೆ ಬಿರುಗಾಳಿ ಎದ್ದೇಳೋದಕ್ಕೆ ಹೊಂದಾಣಿಗೆ ಒಂದೇ ಕಾರಣವಾ? ಇನ್ನು ಏನಾದ್ರೂ ಬೇರೆ ಕಾರಣ ಇದ್ಯಾ? ಅನ್ನೋ ಪ್ರಶ್ನೆ ಖಂಡಿತವಾಗಿಯೂ ಜನಸಾಮಾನ್ಯರಲ್ಲಿ ಕಾಣಿಸ್ಕೊಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment