Advertisment

ತುಮಕೂರಲ್ಲಿ ಮೂವರ ಮೃತದೇಹ ಪತ್ತೆ ಕೇಸ್​​ಗೆ ಬಿಗ್​ ಟ್ವಿಸ್ಟ್​; ಬೆಚ್ಚಿ ಬೀಳಿಸಿದೆ ಕೊಲೆಯ ಕಾರಣ

author-image
Veena Gangani
Updated On
ತುಮಕೂರಲ್ಲಿ ಮೂವರ ಮೃತದೇಹ ಪತ್ತೆ ಕೇಸ್​​ಗೆ ಬಿಗ್​ ಟ್ವಿಸ್ಟ್​;  ಬೆಚ್ಚಿ ಬೀಳಿಸಿದೆ ಕೊಲೆಯ ಕಾರಣ
Advertisment
  • ಬಂಗಾರದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡ ಬೆಳ್ತಂಗಡಿ ಮೂಲದವರು
  • ಚಿನ್ನ ಖರೀದಿಗೆ ತಂದಿದ್ದ ಹಣ ದೋಚಲು ಮೂವರನ್ನ ಕೊಲೆಗೈದ ಹಂತಕರು
  • ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ

ತುಮಕೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ತಾಲೂಕಿನ ಕುಚ್ಚಂಗಿ ಕೆರೆಯಲ್ಲಿ ಪತ್ತೆಯಾಗಿದ್ದವು. ಕಳೆದ ಗುರುವಾರ ರಾತ್ರಿ ಈ ಘಟನೆ ನಡೆದಿತ್ತು. KA 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ ಕಾರಿನಲ್ಲಿ ಗುರುತು ಸಿಗದ ರೀತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದವು. ಕಾರಿನಲ್ಲಿ ಮೂರು ಮೃತದೇಹಗಳು ಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಾರಿನಲ್ಲಿ ಮೃತಪಟ್ಟ ಮೂವರ ಗುರುತು ಪತ್ತೆಯಾಗಿರಲಿಲ್ಲ. ಏಕೆಂದರೆ ಅಷ್ಟರ ಮಟ್ಟಿಗೆ ದುಷ್ಕರ್ಮಿಗಳು ದೇಹಗಳು ಸುಟ್ಟು ಕರಕಲು ಆಗಿದ್ದವು. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

Advertisment

ಇದನ್ನು ಓದಿ: ಅಬ್ಬಾ.. ಈ ತಂಡದಲ್ಲಿದ್ದಾರೆ 6 ವಿಕೆಟ್​ ಕೀಪರ್​! ಇಂದು ಯಾರಿಗೊಲಿಯಲಿದೆ ಅದೃಷ್ಟ?

publive-image

ಇದೀಗ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯಗೊಂಡ ಬೆನ್ನೆಲ್ಲೇ ಮೃತಪಟ್ಟ ಮೂವರು ಗುರುತು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಇಸಾಕ್ (56), ಸಾಹುಲ್ (45), ಇಮ್ಮಿಯಾಜ್ (34) ಮೃತ ದುರ್ದೈವಿಗಳು ಈ ಘಟನೆ ಸಂಬಂಧ ತುಮಕೂರು ತಾಲೂಕಿನ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್​ ತನಿಖೆ ವೇಳೆ ಅಸಲಿ ವಿಚಾರ ಬೆಳಕಿಗೆ ಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಆರೋಪಿಗಳು ಮೂವರನ್ನ ಕರೆಸಿಕೊಂಡಿದ್ದರಂತೆ. ಚಿನ್ನದ ಆಸೆಗೆ ಬಿದ್ದು ಬೆಳ್ತಂಗಡಿಯಿಂದ ತುಮಕೂರಿಗೆ ಇಸಾಕ್, ಸಾಹುಲ್, ಇಮ್ಮಿಯಾಜ್ ಬಂದಿದ್ದಾರೆ. ಚಿನ್ನ ಖರೀದಿ ತಂದಿದ್ದ ಹಣ ದೋಚಲು ಆರೋಪಿಗಳು ಈ ಮೂವರಿಗೆ ನಕಲಿ ಚಿನ್ನ ತೋರಿಸಿ ನಿಜವಾದ ಹಣವನ್ನು ದೋಚಲು ಹೊಂಚು ಹಾಕಿದ್ದರು. ಹೀಗಾಗಿ ಈ ಮೂವರನ್ನು ಹೊಡೆದು ಕೈ ಕಾಲು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿ, ಅವರ ದೇಹವನ್ನು ಕಾರಿನ ಡಿಕ್ಕಿಗೆ ಇಬ್ಬರ ಮೃತದೇಹ ಹಾಗೂ ಮಧ್ಯಭಾಗದ ಸೀಟಿನಲ್ಲಿ ಒಬ್ಬನ ಬೆಂಕಿ ಹಚ್ಚಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಮೃತ ಗುರುತು ಪೊಲೀಸರು ಪತ್ತೆ ಹಚ್ಚಲು ಆಗದ ಸ್ಥಿತಿಯಲ್ಲಿ ಸುಟ್ಟು ಹಾಕಿದ್ದಾರೆ.

publive-image

ಮೃತ ಇಸಾಕ್ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ. ಒಂದು ಡೀಲ್ ಇದೆ ಬಾ ಅಂತ ಸ್ನೇಹಿತನ ಕಾರು ಪಡೆದುಕೊಂಡಿದ್ದನಂತೆ. ಆತನ ಜೊತೆಗೆ ಸಾಹುಲ್ ಅಮೀದ್ ಹಾಗೂ ಇಮ್ಮಿಯಾಜ್ ಸಿದ್ದಿಕ್ ಕೂಡ ಬಂದಿದ್ದರು. ಸಾಹುಲ್ ಅಮೀದ್ ಆಟೋ ಚಾಲಕನಾಗಿದ್ದ. ಇಮ್ಮಿಯಾಜ್ ಸಿದ್ದಿಕ್ ಪುಟ್ ವೇರ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ. ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ತುಮಕೂರಿಗೆ ಬಂದಿದ್ದರು. ಇಸಾಕ್ ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ. ರಾತ್ರಿ ಇಸಾಕ್ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಆ ಬಳಿಕ ಈ ಮೂವರನ್ನು ಆರು ಜನ ಹಂತಕರು ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ. ಸದ್ಯ ಈ ಕೇಸ್​ನಲ್ಲಿ ಪ್ರಮುಖ ಆರೋಪಿಯಾದ ಸ್ವಾಮಿ ಸೇರಿ ಒಟ್ಟು 6 ಜನರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment