/newsfirstlive-kannada/media/post_attachments/wp-content/uploads/2024/04/facial-injection.jpg)
ಸಾಕಷ್ಟು ಮಹಿಳೆಯರು ಬ್ಯೂಟಿಫುಲ್​ ಆಗಿ ಕಾಣಿಸಿಕೊಳ್ಳುವ ನಾನಾ ರೀತಿಯಲ್ಲಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಹೀಗೆ ವ್ಯಾಂಪೈರ್ ಫೇಶಿಯಲ್​ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ತಗುಲಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಚಾಮರಾಜನಗರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ; ಯಾವಾಗ? ಯಾಕೆ?
ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಕೆಟಿಕ್ ಇಂಜೆಕ್ಷನ್ ಪ್ರೊಸೀಜರ್ ಮೂಲಕ ಮಾಡಿದ ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಮಾಹಿತಿ ನೀಡಿದೆ. ಈ ವ್ಯಾಂಪೈರ್​​ ಫೇಶಿಯಲ್ ಕಡಿಮೆ ಬೆಲೆಗೆ ಮಾಡುವುದರಿಂದ 40 ವರ್ಷ ದಾಟಿದ ಹೆಚ್ಚಿನ ಮಹಿಳೆಯರು ಇದನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇದೀಗ ರಕ್ತಪಿಶಾಚಿ ಫೇಶಿಯಲ್​ ಮಾಡಿಸಿಕೊಂಡ ಮೂವರು ಮಹಿಳೆಯರು ಹೆಚ್​ಐವಿ ಸೋಂಕಿಗೆ ತುತ್ತಾಗಿದ್ದಾರೆ. ಇದು ಕಾಸ್ಮೆಟಿಕ್ ಇಂಜೆಕ್ಷನ್ ಪ್ರಕ್ರಿಯೆಯಲ್ಲಿ ಹರಡುವ ಮೊದಲ ವೈರಸ್ ಪ್ರಕರಣಗಳನ್ನು ಗುರುತಿಸುತ್ತದೆ.
/newsfirstlive-kannada/media/post_attachments/wp-content/uploads/2024/04/hiv.jpg)
ವ್ಯಾಂಪೈರ್ ಫೇಶಿಯಲ್​​ ಅನ್ನು ಹುಡುಗಿಯರಿಗಿಂತ ವಯಸ್ಸಾದ ಮಹಿಳೆಯರು ಹೆಚ್ಚಾಗಿ ಮಾಡಿಸಿಕೊಳ್ಳುತ್ತಾರೆ. ವಯಸ್ಸಾದ ಮಹಿಳೆಯರ ಸುಕ್ಕು ಗಟ್ಟಿದ ಚರ್ಮದ ಕಾಂತಿಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ವ್ಯಾಂಪೈರ್ ಫೇಶಿಯಲ್ ಅನ್ನು ರಕ್ತಪಿಶಾಚಿ ಫೇಶಿಯಲ್ ಎಂದೂ ಕರೆಯಲಾಗುತ್ತದೆ. ಇದನ್ನು ಸೂಜಿ ಅಥವಾ ಇಂಜೆಕ್ಷನ್ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ.
ಏನಿದು ವ್ಯಾಂಪೈರ್ ಫೇಶಿಯಲ್​
ಇದನ್ನು ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ ಅಥವಾ ಪ್ಲೇಟ್‌ಲೆಟ್ ರಿಚ್ ಫೈಬ್ರಿನ್ ಎಂದು ಕೂಡ ಕರೆಯಲಾಗುತ್ತದೆ. ಇನ್ನೂ, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಸಿಕ್ಕ ಸಿಕ್ಕಲ್ಲಿ ಹೀಗೆ ಫೇಶಿಯಲ್ ಮಾಡಿಸಿಕೊಂಡು ಗಂಭೀರವಾದ ಆರೋಗ್ಯದ ಅಪಾಯವನ್ನು ಉಂಟುಮಾಡಬಹುದು. ಹೀಗಾಗಿ ಆದಷ್ಟು ಎಚ್ಚರದಿಂದ ವೈದ್ಯರ ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us