ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹರಿದ ಟ್ಯಾಂಕರ್.. ಸ್ಥಳದಲ್ಲೇ ಜೀವಬಿಟ್ಟ ಮೂವರು ಕಾರ್ಮಿಕರು

author-image
Veena Gangani
Updated On
ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹರಿದ ಟ್ಯಾಂಕರ್.. ಸ್ಥಳದಲ್ಲೇ ಜೀವಬಿಟ್ಟ ಮೂವರು ಕಾರ್ಮಿಕರು
Advertisment
  • ರಭಸವಾಗಿ ಬಂದ ಟ್ಯಾಂಕರ್​ನಿಂದ ಭೀಕರ ಅಪಘಾತ
  • ಮೂರು ಕಾರ್ಮಿಕರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು
  • ಘಟನಾ ಸ್ಥಳಕ್ಕೆ ದೌಡಾಯಿಸಿ ಕಿತ್ತೂರು ಠಾಣೆ ಪೊಲೀಸರು

ಬೆಳಗಾವಿ: ಕಾರ್ಮಿಕರ ಮೇಲೆ ಟ್ಯಾಂಕರ್ ಹರಿದು ಮೂವರು ಸ್ಥಳದಲ್ಲೇ ಜೀವಬಿಟ್ಟಿರೋ ಘಟನೆ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ನಡೆದಿದೆ.

ಇದನ್ನೂ ಓದಿ: ಕೊರೊನಾಗೆ ಮತ್ತೊಂದು ಬಲಿ.. ದೇಶದಲ್ಲಿ ಒಟ್ಟು ಎಷ್ಟು ಕೋವಿಡ್ ಕೇಸ್​ ಪತ್ತೆ ಆಗಿವೆ?

ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೇ ವೇಳೆ ರಭಸವಾಗಿ ಬಂದ ಟ್ಯಾಂಕರ್ ಕಾರ್ಮಿಕರ ಮೇಲೆ ಹರಿದು ಹೋಗಿದೆ. ಪರಿಣಾಮ ಸ್ಥಳದಲ್ಲಿ ಮೂವರು ಪ್ರಾಣ ಬಿಟ್ಟಿದ್ದು, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಷಯ ತಿಳಿದ ಕೂಡಲೇ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment