/newsfirstlive-kannada/media/post_attachments/wp-content/uploads/2025/05/rain-death.jpg)
ಬೆಳಗಾವಿ: ನಿರಂತರ ಮಳೆಯ ಅವಾಂತರಕ್ಕೆ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಬಲಿಯಾಗಿರೋ ಘಟನೆ ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೀರ್ತಿಕಾ ನಾಗೇಶ ಪೂಜಾರಿ (3) ಮೃತ ಬಾಲಕಿ.
ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
ಕೋಣೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದಿದೆ. ಪರಿಣಾಮ ಘಟನೆಯಲ್ಲಿ 3 ವರ್ಷದ ಕಂದಮ್ಮ, ತಾಯಿ ರೇಷ್ಮಾ, ಸಹೋದರಿ ಖುಷಿಗೂ ಗಂಭೀರ ಗಾಯಗಳಾಗಿವೆ. ಗಾಯಾಲುಗಳನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ವಾರವೂ ಗೋಕಾಕ ನಗರದ ವ್ಯಕ್ತಿಯೋರ್ವ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಜೀವಬಿಟ್ಟಿದ್ದ. ಈಗ ಗೋಕಾಕ ನಗರದಲ್ಲಿ ಮಹಾ ಮಳೆಗೆ ಎರಡನೇ ಬಲಿ ಅಂತಲೇ ಹೇಳಬಹುದು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ