/newsfirstlive-kannada/media/post_attachments/wp-content/uploads/2025/07/BGK_BOY_NEW.jpg)
ಬಾಗಲಕೋಟೆ: ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ.
ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಗುವಿನ ಜೀವವನ್ನ ಚಿಕ್ಕಪ್ಪ ಭೀರಪ್ಪ ತೆಗೆದಿದ್ದಾನೆ. ಬಾಲಕ ಮುಂಜಾನೆ ಎಂದಿನಂತೆ ಗ್ರಾಮದ ಅಂಗನವಾಡಿಗೆ ಹೋಗಿದ್ದನು. ಎಲ್ಲರೊಂದಿಗೆ ಅಂಗನವಾಡಿಯಲ್ಲಿ ಕುಳಿತ್ತಿದ್ದ ಬಾಲಕನನ್ನ ಚಿಕ್ಕಪ್ಪ ಭೀರಪ್ಪ ಕರೆದುಕೊಂಡು ಹೋಗಿದ್ದನು. ನೇರವಾಗಿ ಮನೆಗೆ ಕರೆದುಕೊಂಡು ಹೋದ ಭೀರಪ್ಪ, ನೆಲದ ಮೇಲೆ ಮಗುವನ್ನ ಹಾಕಿ ಬಳಿಕ ಹರಿತವಾದ ಆಯುಧದಿಂದ ಇರಿದಿದ್ದಾನೆ. ನೋವಿನಿಂದ ಮಗು ಚೀರಾಟದಿಂದ ಕ್ಷಣಾರ್ಧದಲ್ಲಿ ಜೀವ ಬಿಟ್ಟಿತ್ತು.
ಇದನ್ನೂ ಓದಿ:ಮೇಘಾಲಯ ಹನಿಮೂನ್ ಕೇಸ್; ಸೋನಮ್ ಈಗ ಏನ್ ಮಾಡ್ತಿದ್ದಾಳೆ..? ಲೇಟೆಸ್ಟ್ ಅಪ್ಡೇಟ್ಸ್ ಏನು?
ವಿಷಯ ಗೊತ್ತಾಗುತ್ತಲೇ ಅಕ್ಕಪಕ್ಕದಲ್ಲಿದ್ದ ಸಂಬಂಧಿಗಳು ಆರೋಪಿಯನ್ನ ಕಟ್ಟಿ ಹಾಕಿದ್ದಾರೆ. ಜೊತೆಗೆ ಆರೋಪಿಯನ್ನು ಸುಟ್ಟು ಹಾಕಬೇಕು ಅಂದುಕೊಂಡಿದ್ದಾರೆ. ಅಷ್ಟೊತ್ತಿಗಾಗಲೇ ಪೋಲಿಸರು ಸ್ಥಳಕ್ಕೆ ಆಗಮಿಸಿ ಆರೋಪಿ ಭೀರಪ್ಪನನ್ನ ಅರೆಸ್ಟ್ ಮಾಡಿದ್ದಾರೆ.
ಮಗುವಿನ ತಂದೆ ಮಾರುತಿ ಆರೋಪಿ ಭೀರಪ್ಪ ಇಬ್ಬರೂ ಸಂಬಂಧದಲ್ಲಿ ಅಣ್ಣತಮ್ಮಂದಿರು. ಅದರಂತೆ ಈ ಇಬ್ಬರ ಪತ್ನಿಯರು ಕೂಡ ಸ್ವಂತ ಸಹೋದರಿಯರು ಆಗಿದ್ದಾರೆ. ಆದ್ರೆ ಇತ್ತೀಚಿಗೆ ಆರೋಪಿ ಭೀರಪ್ಪ ತನ್ನ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ. ಇದರಿಂದ ಮಾರುತಿಯು ಭೀರಪ್ಪನಿಗೆ ಬುದ್ಧಿವಾದ ಹೇಳಿದ್ದ. ಇದರಿಂದ ಸೇಡು ಇಟ್ಟುಕೊಂಡಿದ್ದ ಆರೋಪಿ, ಮಗುವಿನ ಮೇಲೆ ಎರಗಿ ಜೀವ ತೆಗೆದಿದ್ದಾನೆ. ಘಟನೆ ಬೆನ್ನಲ್ಲೆ ಅಮೀನಗಡ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನ ಅರೆಸ್ಟ್ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ