newsfirstkannada.com

ಅಬ್ಬಾ.. 12 ಗಂಟೆ, 6 ಮೆಷಿನ್‌ ಎಣಿಸಿದ್ರೂ ಮುಗಿದಿಲ್ಲ; ರಾಂಚಿಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?

Share :

Published May 6, 2024 at 8:25pm

Update May 6, 2024 at 8:41pm

    ಸಚಿವರ ಆಪ್ತ ಸಂಜೀವ್ ಲಾಲ್‌ ರೂಮ್‌ನಲ್ಲಿ ಬಚ್ಚಿಟ್ಟಿದ್ದ ನೋಟಿನ ರಾಶಿ

    ಬೆಟ್ಟದಂತಿರುವ ನೋಟುಗಳನ್ನ ಗುಡ್ಡೆ ಹಾಕಿರೋ ಇ.ಡಿ ಅಧಿಕಾರಿಗಳು

    12 ಗಂಟೆಯ ಎಣಿಕೆ ಕಾರ್ಯದಲ್ಲಿ ಕೆಟ್ಟು ಹೋದ ನೋಟಿನ ಮೆಷಿನ್‌ಗಳು

ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ಇವತ್ತು ಇ.ಡಿ (ಜಾರಿ ನಿರ್ದೇಶನಾಲಯ) ಭರ್ಜರಿ ಬೇಟೆಯಾಡಿದೆ. ರಾಂಚಿಯ ವಿವಿಧ ಕಡೆ ಇ.ಡಿ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಗುಡ್ಡೆ ಹಾಕಿದ್ದ ಕಂತೆ, ಕಂತೆ ನೋಟಿನ ಬೆಟ್ಟವೇ ಸಿಕ್ಕಿದೆ. ಬರೋಬ್ಬರಿ 12 ಗಂಟೆ, 6 ಮೆಷಿನ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ನೋಟಿನ ಕಂತೆಗಳನ್ನ ಎಣಿಸಿದ್ದರೂ ಮುಗಿದಿಲ್ಲ.

ರಾಂಚಿಯಲ್ಲಿ ಇ.ಡಿ ಅಧಿಕಾರಿಗಳು ನಡೆಸಿರೋ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ನೋಟುಗಳ ಕಂತೆಯೇ ಪತ್ತೆಯಾಗಿತ್ತು. ಜಾರ್ಖಂಡ್ ಗ್ರಾಮೀಣಾಭಿವೃದ್ದಿ ಸಚಿವ ಆಲಂಗೀರ್ ಆಲಂ ಮನೆ ಸಹಾಯಕ ಸಂಜೀವ್ ಲಾಲ್ ಮನೆ ಮೇಲೆ ಇ.ಡಿ ದಾಳಿ ನಡೆದಿತ್ತು. ಗ್ರಾಮೀಣಾಭಿವೃದ್ದಿ ಇಲಾಖೆಯ ಇಂಜಿನಿಯರ್‌ ವೀರೇಂದರ್ ಕೆ. ರಾಮ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆದಿದೆ.

ಇದನ್ನೂ ಓದಿ: ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳ ಗುಡ್ಡೆ.. ಈ ಕಾಂಗ್ರೆಸ್ ನಾಯಕನ ಹಿನ್ನೆಲೆ ಏನು? 

ಇಂದು ಬೆಳಗ್ಗೆಯಿಂದ 6 ನೋಟು ಎಣಿಕೆಯ ಮೆಷಿನ್‌ಗಳು ಸತತ 12 ಗಂಟೆಗಳ ಕಾಲ ನಾನ್‌ಸ್ಟಾಪ್‌ ಆಗಿ ಕೆಲಸ ಮಾಡಿದರು ನೋಟುಗಳ ಎಣಿಕೆ ಕಾರ್ಯ ಮುಗಿದಿಲ್ಲ. ಬೆಟ್ಟದಂತಿರುವ ನೋಟುಗಳನ್ನ ಗುಡ್ಡೆ ಹಾಕಿರೋ ಇ.ಡಿ ಅಧಿಕಾರಿಗಳು ಇನ್ನೂ ಎಣಿಕೆ ಕಾರ್ಯ ಮುಂದುವರಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಇ.ಡಿ ಅಧಿಕಾರಿಗಳು ರಾಂಚಿಯಲ್ಲಿ ನಡೆಸಿದ ದಾಳಿಯಲ್ಲಿ 12 ಗಂಟೆಯ ಎಣಿಕೆ ಕಾರ್ಯ ನಡೆಸಿದೆ. ಒಂದು ಮೆಷಿನ್ ಕೆಟ್ಟು ಹೋಗಿದ್ದು, ಮತ್ತೊಂದು ಮೆಷಿನ್ ಅನ್ನು ತೆಗೆದುಕೊಂಡು ಬರಲಾಗಿದೆ. ಇಲ್ಲಿಯವರೆಗೂ ಬರೋಬ್ಬರಿ 30 ಕೋಟಿ ರೂಪಾಯಿ ಹಣದ ಎಣಿಕೆ ಮಾಡಲಾಗಿದೆ.

ಕಂತೆ ಕಂತೆ ನೋಟು.. ರಾಶಿ ಹಾಕಿರೋ ಹಣ.. ಒಂದಲ್ಲ, ಎರಡಲ್ಲ, ಬರೊಬ್ಬರಿ 30 ಕೋಟಿಗೂ ಅಧಿಕ ಕಾಂಚಾಣ. ಗ್ರಾಮೀಣಾಭಿವೃದ್ದಿ ಸಚಿವ ಅಲಂಗೀರ್ ಅಲಂ ಆಪ್ತ ಕಾರ್ಯದರ್ಶಿ ಸಂಜೀವ್​ ಲಾಲ್ ಮನೆ ಕೆಲಸಗಾರನ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಸಿಕ್ಕ ಹಣದ ರಾಶಿ ನೋಡಿ ಶಾಕ್​ ಒಳಗಾಗಿದ್ದಾರೆ. ಮನೆಯೊಳಗೆ ಬರೋಬ್ಬರಿ 30 ಕೋಟಿಗೂ ಅಧಿಕ ಹಣ ಜಪ್ತಿ ಮಾಡಿದ್ದಾರೆ. ಮಷೀನ್​ ಮೂಲಕ ಹಣ ಎಣಿಸಲಾಗ್ತಿದ್ದು, ಅಧಿಕಾರಿಗಳೇ ಥಂಡಾ ಹೊಡೆದಿದ್ದಾರೆ.

ಕಂತೆ, ಕಂತೆ ನೋಟಿನ ಮೇಲೆ ಅನುಮಾನ!

  • ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ನಡೆದ ಆರೋಪ
  • ಮುಖ್ಯ ಇಂಜಿನಿಯರ್​​ ವೀರೇಂದ್ರ ವಿರುದ್ಧ 2023ರಲ್ಲಿ ಕೇಸ್
  • ದೂರು ದಾಖಲಿಸಿಕೊಂಡು ಇ.ಡಿ ಅಧಿಕಾರಿಗಳಿಂದ ತನಿಖೆ
  • ಮುಖ್ಯ ಇಂಜಿನಿಯರ್​​ ವೀರೇಂದ್ರನನ್ನ ಬಂಧಿಸಿ ವಿಚಾರಣೆ
  • ಅವ್ಯವಹಾರಗಳ ಜೊತೆ ಸಚಿವರಿಗೆ ಸಂಪರ್ಕ ಆರೋಪ
  • ಅಕ್ರಮ ಹಣ ಆಪ್ತರ ಮನೆಗೆ ಹೋಗುತ್ತಿದೆ ಎಂಬ ಆರೋಪ
  • ಇದೇ ಪ್ರಕರಣದಲ್ಲಿ ಇವತ್ತು ಅಧಿಕಾರಿಗಳಿಂದ 6 ಕಡೆ ದಾಳಿ
  • ಆಪ್ತ ಕಾರ್ಯದರ್ಶಿ ಮನೆ ಕೆಲಸದವನ ಮನೆ ಮೇಲೆ ರೇಡ್​
  • ಕೆಲಸಗಾರನ ಮನೆಯಲ್ಲಿ 30 ಕೋಟಿಗೂ ಅಧಿಕ ಹಣ ಜಪ್ತಿ

ಕಂತೆ, ಕಂತೆ ಹಣವನ್ನು ಜಾರ್ಖಂಡ್ ಸಚಿವರ ಆಪ್ತ ಸಂಜೀವ್ ಲಾಲ್‌ ಮನೆ ಸಹಾಯಕ ರೂಮ್‌ನಲ್ಲಿ ಬಚ್ಚಿಟ್ಟಿದ್ದ. ನೋಟುಗಳ ಗುಡ್ಡೆಯನ್ನ ನೋಡಿ ಇ.ಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದು, ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಭ್ರಷ್ಟಾಚಾರದ ಬೇಟೆ ಎನ್ನಲಾಗಿದೆ. ಇದೇ ಮೇ 13ರಂದು ಜಾರ್ಖಂಡ್‌ನಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮತದಾನಕ್ಕೂ ಮುನ್ನ ರಾಂಚಿಯಲ್ಲಿ ಇ.ಡಿ ದಾಳಿಯಾಗಿದ್ದು ಕಾಂಗ್ರೆಸ್, ಬಿಜೆಪಿ ಮಧ್ಯೆ ರಾಜಕೀಯಕ್ಕೆ ಕಾರಣವಾಗಿದೆ. ದುಡ್ಡಿನ ರಾಶಿ ನೋಡಿ ಕಪ್ಪು ಹಣವಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಒಟ್ನಲ್ಲಿ, ಅಲಂಗೀರ್ ಆಪ್ತ ಕಾರ್ಯದರ್ಶಿಯ ಕೆಲಸಗಾರನ ನಿವಾಸದಲ್ಲಿ ಸಿಕ್ಕಿರುವ ಹಣದ ರಾಶಿಯನ್ನು ಕಂಡು ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಹಣದ ಸತ್ಯಾಸತ್ಯತೆ ಬಗ್ಗೆ ತನಿಖೆ ಚುರುಕುಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. 12 ಗಂಟೆ, 6 ಮೆಷಿನ್‌ ಎಣಿಸಿದ್ರೂ ಮುಗಿದಿಲ್ಲ; ರಾಂಚಿಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2024/05/Jarkhand-Money-Sieze.jpg

Load More