newsfirstkannada.com

ರಾಮನಗರದಲ್ಲಿ ಆಘಾತಕಾರಿ ಘಟನೆ; ದೇವರ ಪ್ರಸಾದ ಸ್ವೀಕರಿಸಿ 30ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Share :

Published November 20, 2023 at 8:09am

  ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ

  ಜಿಲ್ಲಾಸ್ಪತ್ರೆಗೆ ರಾಮನಗರ ಪೊಲೀಸರು ಭೇಟಿ

  ಪ್ರಸಾದದ ಸ್ಯಾಂಪಲ್​ ಟೆಸ್ಟಿಂಗ್​ಗೆ ಕಳುಹಿಸಲಾಗಿದೆ

ರಾಮನಗರ: ಪ್ರಸಾದ ಸ್ವೀಕರಿಸಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ.

ಉರುಸ್ ಹಬ್ಬದ ಪ್ರಯುಕ್ತ ಸಿಹಿ ವಿತರಣೆ ಮಾಡಲಾಗಿತ್ತು. ಸಿಹಿ ಸ್ವೀಕರಿಸಿದ ಬಳಿಕ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ತಕ್ಷಣ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಜಿಲ್ಲಾಸ್ಪತ್ರೆಗೆ ರಾಮನಗರ ಟೌನ್ ಪೊಲೀಸರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರು ಸದ್ಯ ಆರೋಗ್ಯವಾಗಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಪ್ರಸಾದದ ಸ್ಯಾಂಪಲ್​ ಅನ್ನು ಟೆಸ್ಟಿಂಗ್​ಗೆ ಕಳುಹಿಸಿದ್ದು ವರದಿ ಬಂದ ಬಳಿಕ ಏನಾಗಿದೆ ಅನ್ನೋದು ತಿಳಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಗರದಲ್ಲಿ ಆಘಾತಕಾರಿ ಘಟನೆ; ದೇವರ ಪ್ರಸಾದ ಸ್ವೀಕರಿಸಿ 30ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

https://newsfirstlive.com/wp-content/uploads/2023/11/RMG_PRASADA.jpg

Load More