30 ಗಂಟೆ ಕಾರ್ಯಾಚರಣೆ.. ತುಂಗಭದ್ರಾ ಜಲಾಶಯದಲ್ಲಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಪ್ಲಾನ್ ಸಕ್ಸಸ್‌!

author-image
admin
Updated On
30 ಗಂಟೆ ಕಾರ್ಯಾಚರಣೆ.. ತುಂಗಭದ್ರಾ ಜಲಾಶಯದಲ್ಲಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಪ್ಲಾನ್ ಸಕ್ಸಸ್‌!
Advertisment
  • ಕನ್ನಯ್ಯ ನಾಯ್ಡು ಅವರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಧನ್ಯವಾದ
  • ಕಳೆದ 6 ದಿನಗಳಿಂದ ವ್ಯರ್ಥವಾದ ಅಪಾರ ಪ್ರಮಾಣದ ನೀರು
  • ತುಂಬಿದ್ದ 105 ಟಿಎಂಸಿಯಲ್ಲಿ ಖಾಲಿ ಆಗಿರುವ ನೀರು ಎಷ್ಟು?

ವಿಜಯನಗರ: ಐತಿಹಾಸಿಕ ತುಂಗಭದ್ರಾ ಡ್ಯಾಂನಲ್ಲಿ 19ನೇ ಗೇಟ್‌ ಕೊಚ್ಚಿಕೊಂಡು ಹೋಗಿ ಆತಂಕಕ್ಕೆ ಕಾರಣವಾಗಿತ್ತು. ಕಳೆದ 6 ದಿನಗಳಿಂದ ಜಲಾಶಯದಿಂದ ನೀರು ಹೊರಗೆ ಬಿಟ್ಟು ಡ್ಯಾಂ ರಕ್ಷಿಸೋ ಹರಸಾಹಸ ಮಾಡಲಾಗುತ್ತಿತ್ತು. ಕೊನೆಗೂ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಪ್ಲಾನ್ ಸಕ್ಸಸ್ ಆಗಿದ್ದು, ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್ 19 ದುರಸ್ತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ ಮಾಡಿ ನಿಟ್ಟುಸಿರು ಬಿಡಲಾಗಿತ್ತು. ಇಂದು 3 ಸ್ಟಾಪ್ ಲಾಗ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ. 3 ದಿನ ಸತತ 30 ಗಂಟೆ ಕಾರ್ಯಾಚರಣೆ ಇದಾಗಿದ್ದು, TB ಡ್ಯಾಂ ಅಧಿಕಾರಿಗಳು ಈಗ ಜಲಾಶಯದ ಸಂಪೂರ್ಣ ಹೊರ ಹರಿವು ಬಂದ್ ಮಾಡಿದ್ದಾರೆ.

ಇದನ್ನೂ ಓದಿ: ಭಗೀರಥ ಪ್ರಯತ್ನಕ್ಕೆ ಯಶಸ್ಸು.. ತುಂಗಭದ್ರಾ ಡ್ಯಾಂಗೆ ಮೊದಲ ಸ್ಟಾಪ್ ಲಾಗ್‌ ಫಿಕ್ಸ್‌! ಎಷ್ಟು TMC ನೀರು ಸೇಫ್‌?

ಹೇಗಿತ್ತು ಆ 30 ಗಂಟೆ?
ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್ 19 ದುರಸ್ತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮೊದಲ ಸ್ಪಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿತ್ತು. ಇಂದು ಎರಡು ಹಾಗೂ ಮೂರನೇ ಸ್ಟಾಪ್ ಲಾಗ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: ನಿಲ್ಲೆ, ನಿಲ್ಲೆ ತುಂಗಭದ್ರೆ.. ಪೋಲಾಗ್ತಿರುವ ಜೀವಜಲ ತಡೆಯಲು ಹರಸಾಹಸ; ತಾತ್ಕಾಲಿಕ ಗೇಟ್‌ ಅಳವಡಿಕೆ ಏನಾಯ್ತು? 

ಇಂದು ಮಧ್ಯಾಹ್ನ 3:10ಕ್ಕೆ ಸರಿಯಾಗಿ ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಶುರುವಾಗಿತ್ತು. ಸರಿಯಾಗಿ 26 ನಿಮಿಷಗಳಲ್ಲಿ ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಯಿತು.
19ನೇ ಗೇಟ್‌ನಲ್ಲಿ ಮೊದಲ ಸ್ಟಾಪ್ ಲಾಗ್ ಅಳವಡಿಸಿದ ಮೇಲೆ ನಿನ್ನೆ ಡ್ಯಾಂನ 33 ಗೇಟ್‌ಗಳಲ್ಲಿ 25 ಗೇಟ್‌ಗಳಿಂದ ನೀರು ಹರಿಸಲಾಗಿತ್ತು. ನಿನ್ನೆ 8 ಗೇಟ್‌ಗಳನ್ನು ಕ್ಲೋಸ್ ಮಾಡಲಾಗಿತ್ತು. ಇಂದು ಎರಡನೇ ಸ್ಟಾಪ್ ಲಾಗ್ ಅಳವಡಿಸಿದ ನಂತರ ಮತ್ತೆ 4 ಗೇಟ್ ಕ್ಲೋಸ್ ಮಾಡಲಾಗಿದೆ. ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಹಿನ್ನೆಲೆಯಲ್ಲಿ ಮತ್ತೆ 8 ಗೇಟ್ ಅಧಿಕಾರಿಗಳು ಕ್ಲೋಸ್ ಮಾಡಿದ್ದಾರೆ.

publive-image

ಕನ್ನಯ್ಯ ನಾಯ್ಡು ತಂಡ ಇನ್ನೆರಡು ಸ್ಟಾಪ್ ಲಾಗ್ ಅಳವಡಿಸೋದು ಬಾಕಿ ಇದೆ. ಬಹುತೇಕ ಇಂದು ಸಂಜೆ ವೇಳೆಗೆ ಇನ್ನೆರಡು ಸ್ಟಾಪ್ ಲಾಗ್‌ಗಳನ್ನು ಅಳವಡಿಸುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯದ 33 ಗೇಟ್‌ಗಳಲ್ಲಿ ಈಗ 13 ಗೇಟ್ ಮೂಲಕ ನದಿಗೆ ನೀರು ಬಿಡುಲಾಗುತ್ತಿದೆ. ಸ್ಟಾಪ್ ಲಾಗ್ ಅಳವಡಿಕೆಯಿಂದ ಹಂತ ಹಂತವಾಗಿ ನದಿಗೆ ಹರಿಸುವ ನೀರಿನ‌ ಪ್ರಮಾಣ ಕಡಿಮೆ ಆಗಲಿದೆ.

ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

ಎಷ್ಟು ಟಿಎಂಸಿ ನೀರು ಖಾಲಿ?
ತುಂಗಭದ್ರಾ ಡ್ಯಾಂನ 33 ಗೇಟ್‌ಗಳಲ್ಲಿ 19 ಗೇಟ್ ಹೊರತುಪಡಿಸಿ ಎಲ್ಲಾ ಗೇಟ್ ಕ್ಲೋಸ್ ಮಾಡಲಾಗಿದೆ. ಕಳೆದ 6 ದಿನಗಳಿಂದ ವ್ಯರ್ಥವಾಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. 105 ಟಿಎಂಸಿಯಲ್ಲಿ 40ರಿಂದ45 ಟಿಎಂಸಿ ನೀರು ಖಾಲಿ ಆಗಿರುವ ಮಾಹಿತಿ ಇದೆ. ಸದ್ಯ 44 ಸಾವಿರ ಕ್ಯುಸೆಕ್ಸ್ ಒಳಹರಿವು ಇರುವ ಮಾಹಿತಿ ಇದೆ. ಯಶಸ್ವಿಯಾಗಿ ಮೂರು ಸ್ಟಾಪ್ ಲಾಗ್ ಅಳವಡಿಕೆ ಹಿನ್ನೆಲೆ ಕನ್ನಯ್ಯ ನಾಯ್ಡು ಅವರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment