/newsfirstlive-kannada/media/post_attachments/wp-content/uploads/2024/05/rbi-1.jpg)
ತುಂಬಾ ವಿಚಲಿತಗೊಳ್ಳುವ ಬೆಳವಣಿಗೆಯೊಂದು ಸದ್ಯ ಬಂಗಾರದ ಸಾಲದ ವಿಚಾರದಲ್ಲಿ ನಡೆದಿದೆ. ಬಂಗಾರವನ್ನು ಅಡವಿಟ್ಟು ಸಾಲ ಪಡೆದವರು ವಾಪಸ್ ಸಾಲ ತೀರಿಸಿ ಬಂಗಾರವನ್ನು ವಾಪಸ್ ಪಡೆಯದೇ ಇರುವಂತಹ ಪ್ರಕರಣಗಳು ದೇಶದಲ್ಲಿ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂಬ ವರದಿ ಬಂದಿದೆ. ಇದು ನಾನ್ ಪ್ರಾಫಿಟ್ ಅಸೆಟ್ನ್ನು ಹೆಚ್ಚಿಸಿ ಆರ್ಥಿಕತೆ ಶಕ್ತಿಯನ್ನು ನಿಧಾನಗತಿಗೆ ತರುವ ಆತಂಕವನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ ಗೋಲ್ಡ್ ಲೋನ್ ಬೇಡಿಕೆ ತೀರ ಕಡಿಮೆ ಇತ್ತು ಶೇಕಡಾ 14.6 ರಷ್ಟು 2022-23ರ ಸಾಲಿನಲ್ಲಿತ್ತು ಎಂದು ಆರ್ಬಿಐ ಹೇಳಿದೆ.
ಜೂನ್ 2024ರಷ್ಟರಲ್ಲಿ ಸುಮಾರು 6,696 ಕೋಟಿಯಷ್ಟು ಸಾಲ ಪಡೆಯಲಾಗಿದ್ದು ಮೂರು ತಿಂಗಳ ಹಿಂದಷ್ಟೇ ಇದರ ಪ್ರಮಾಣ 5,149 ಕೋಟಿಯಷ್ಟಿತ್ತು. ಕೇವಲ ಮೂರು ತಿಂಗಳ ಅವಧಿಯಲ್ಲಿ ಗೋಲ್ಡ್ ಲೋನ್ ಅನುತ್ಪಾದಕ ಆಸ್ತಿ ಸಾವಿರ ಕೋಟಿಗೂ ದಾಟಿದೆ ಎಂದು ಆರ್ಬಿಐ ಹೇಳಿದೆ.
ಆರ್ಟಿಐ ಅರ್ಜಿಯೊಂದಕ್ಕೆ ಮಾಹಿತಿ ಕೊಟ್ಟಿರುವ ಆರ್ಬಿಐ ವಾಣಿಜ್ಯ ಬ್ಯಾಂಕ್ಗಳು ನೀಡಿದ ಮಾಹಿತಿ ಪ್ರಕಾರ ಸುಮಾರು 62 ಪರ್ಸೆಂಟ್ನಷ್ಟು ಬಂಗಾರದ ಮೇಲಿನ ಸಾಲದ ಅನುತ್ಪಾದಕ ಆಸ್ತಿ ಅಂದ್ರೆ ಎನ್ಪಿಎ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ ಜೂನ್ 2024ಕ್ಕೆ ಇದರ ಮೊತ್ತ 2,445 ಕೋಟಿಯಷ್ಟಿತ್ತು. ಮಾರ್ಚ್ 2024ರಲ್ಲಿ 1,513 ಕೋಟಿಯಷ್ಟಿತ್ತು ಇನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಬಂಗಾರದ ಮೇಲಿನ ಸಾಲ ಸುಮಾರು ಶೇಕಡಾ 24 ರಷ್ಟು ಹೆಚ್ಚಾಗಿದೆ ಎಂದು ಆರ್ಬಿಐ ಹೇಳಿದೆ
ಬಂಗಾರದ ಮೇಲೆ ತೆಗೆದುಕೊಂಡ ಸಾಲಗಳು ಸರಿಯಾಗಿ ವಾಪಸ್ ಆಗದೇ ಇದ್ದಾಗ ಇದು ಋಣಭಾರವನ್ನು ಹೆಚ್ಚಿಸಿ ದೇಶದ ಆರ್ಥಿಕತೆಯ ವೇಗಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಬಂಗಾರ ಮೇಲಿನ ಸಾಲಗಳು ಹೆಚ್ಚಾಗಿದ್ದು ಹಾಗೂ ಅದರ ಎನ್ಪಿಎ ಅಂದ್ರೆ ಅನುತ್ಪಾದಕ ಸಾಲ ಹೆಚ್ಚಾಗಿದ್ದರ ಬಗ್ಗೆ ಆರ್ಬಿಐ ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಲವು ಮಾರ್ಗಸೂಚಿಯನ್ನು ನೀಡಿದೆ. ಚಿನ್ನದ ಮೇಲಿನ ಸಾಲ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಗಮನ ನೀಡುವಂತೆ ಸೂಚನೆ ನೀಡಲಾಗಿದೆ ಸೆಪ್ಟಬರ್ 30 2024ರಲ್ಲಿಯೇ ಈ ಬಗ್ಗೆ ಸೂಚನೆ ನೀಡಿರುವ ಆರ್ಬಿಐ ಗೋಲ್ಡ್ ಲೋನ್ ಆಪರೇಷನ್ ಬಗ್ಗೆ ಪರಿಶೀಲನೆ ನಡೆಸುವಂತೆ ಹೇಳಿದೆ.
ಇದನ್ನೂ ಓದಿ:ಹೊಸ ವರ್ಷದ ಖರ್ಚಿಗೆ ದೇವಸ್ಥಾನದ ಗಂಟೆ ಕದ್ದ ಕಳ್ಳರು.. ಆಮೇಲೆ ನಡೆದಿದ್ದು ನಿಜಕ್ಕೂ ಪವಾಡ!
ಇನ್ನೂ ಗೋಲ್ಡ್ ಲೋನ್ ಹಾಗೂ ಅದರ ಮೇಲಿನ ಎನ್ಪಿಎ ಹೆಚ್ಚಾಗಿರುವುದನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ಮೋದಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ, ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾರತದ ಸಾಮಾನ್ಯ ನಾಗರಿಕರು ಬಂಗಾರ ಅಡವಿಟ್ಟು ಮಾಡುತ್ತಿರುವ ಸಾಲದ ಮಿತಿ ಶೇಕಡಾ 50 ರಷ್ಟು ಹೆಚ್ಚಗಿದೆ ಗೋಲ್ಡ್ ಲೋನ್ ಎನ್ಪಿಎದ ಪ್ರಮಾಣ ಶೇಕಡಾ 30ರಷ್ಟು ಹೆಚ್ಚಿದೆ ದೇಶದ ಜನರು ಅಗತ್ಯವಾಗಿ ಪಡೆಯಬೇಕಾಗಿದ್ದ ಸರಕು ಮತ್ತು ಸೇವೆಗಳ ಮೌಲ್ಯದಲ್ಲಿಯೂ ಕೂಡ ಕಡಿಮೆಯಾಗಿದೆ ಅದು ಕೂಡ ಕಳೆದ ಎಂಟು ತ್ರೈಮಾಸಿಕದಲ್ಲಿ ಇದು ಆಗಿದೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್, ಒಬ್ಬ ನಾನ್ ಬಯೋಲಾಜಿಕಲ್ ಪ್ರಧಾನ ಮಂತ್ರಿ ದೇಶದ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತಿದ್ದಾರೆ. ನಾವು ಈ ಬಗ್ಗೆ ಹಲವು ಬಾರಿ ಧ್ವನಿಯೆತ್ತಿದ್ದೇವೆ ಸುಮಾರು 3 ಲಕ್ಷ ಕೋಟಿಯಷ್ಟು ಬಂಗಾರ ಅಡವಿಟ್ಟು ಭಾರತದ ಕುಟುಂಬಗಳು ಸಾಲ ಪಡೆದಿವೆ. ಇದು ಋಣಭಾರವನ್ನು ಹೆಚ್ಚಿಸುವುದಲ್ಲದೇ ದೇಶಕ ಆರ್ಥಿಕ ಪ್ರಗತಿಯನ್ನು ಕೂಡ ನಿಧಾನಗೊಳಿಸುತ್ತದೆ. ಗೋಲ್ಡ್ ಲೋನ್ ಮೇಲಿನ ಎನ್ಪಿಎ ಶೇಕಡಾ 30 ರಷ್ಟು ಹೆಚ್ಚಾಗಿದೆ, ಮಾರ್ಚ್ನಿಂದ ಜೂನ್ 2024ರ ಮೂರು ತಿಂಗಳೊಳಗೆ ಇದರ ಮೌಲ್ಯ 6,669 ಕೋಟಿಗೆ ತಲುಪಿದೆ ಎಂದು ಗುಡುಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ