/newsfirstlive-kannada/media/post_attachments/wp-content/uploads/2024/06/MODI-4.jpg)
ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಚುಕ್ಕಾಣಿ ಹಿಡಿಯಲಿದ್ದಾರೆ. 2014ರಿಂದ ಶುರುವಾದ ನಮೋ ಯುಗ, ಮುಂದಿನ 5 ವರ್ಷಕ್ಕೂ ಮುಂದುವರಿದಿದೆ. ಈ ಹಿಂದಿನ 2 ಅವಧಿಗೆ ನಮೋ ಏಕಾಂಗಿಯಾಗಿ ದಿಟ್ಟ ನಿರ್ಧಾರದ ಸರ್ಕಾರ ಚಲಾಯಿಸಿದ್ರು. ಆದ್ರೆ, ಈ ಬಾರಿ ಬಿಜೆಪಿ ಸರ್ಕಾರದ ಕುರ್ಚಿಗೆ ಮೂರು ಮತ್ತೊಂದು ಕಾಲಿನಲ್ಲಿ ಹೆಜ್ಜೆ ಹಾಕಬೇಕಿದೆ. NDA ಮಿತ್ರರ ಉರುಗೋಲು ಅಗತ್ಯ.
ಸರ್ಕಾರ ರಚನೆಗೂ ಮುನ್ನವೇ ಸ್ವರ, ಅಪಸ್ವರಗಳ ಶ್ರುತಿ ಶುರುವಾಗಿದೆ. ಖಾತೆಗಾಗಿ ಕ್ಯಾತೆಗಳು ಸೃಷ್ಟಿ ಆಗಿದ್ದು, ಮೋದಿಯನ್ನ ಇಕ್ಕಟ್ಟಿಗೆ ತಳ್ಳಿದೆ. ಮೊದಲ ಹಂತದಲ್ಲಿ 52-55 ಸಚಿವರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದರಲ್ಲಿ 19-22 ಮಂದಿ ಸಂಪುಟ ದರ್ಜೆ ಸಚಿವರಾಗಿ ಪದಗ್ರಹಣ ಮಾಡ್ಲಿದ್ದಾರೆ. ಉಳಿದ 30-35 ಸಂಸದರು ರಾಜ್ಯ ಖಾತೆ ಸಚಿವರಾಗಿ, ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!
/newsfirstlive-kannada/media/post_attachments/wp-content/uploads/2024/06/Narendra-Modi.jpg)
ಸಂಭವನೀಯ ಸಚಿವರ ಪಟ್ಟಿ
- ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ
- ಶಿವರಾಜ್​ ಚೌಹಾಣ್, ಮನೋಹರ್​ಲಾಲ್ ಖಟ್ಟರ್
- ಜೈಶಂಕರ್, ಜೆ.ಪಿ.ನಡ್ಡಾ, ಭೂಪೇಂದ್ರ ಯಾದವ್
- ಪಿಯೂಷ್​​​​ ಗೋಯೆಲ್, ಜ್ಯೋತಿರಾದಿತ್ಯ ಸಿಂಧಿಯಾ
- ಅರ್ಜುನ್ ಮೇಘವಾಲ್, ಮಾಂಡವೀಯ, ಅಶ್ವಿನ್ ವೈಷ್ಣವ್
- ಜಿತಿನ್ ಪ್ರಸಾದ್, S.P.ಬಘೇಲ್, ಪಂಕಜ್ ಚೌಧರಿ
- ರಾವ್ ಇಂದರ್​ಜಿತ್, ಕೃಷ್ಣಪಾಲ್ ಗುರ್ಜರ್
- ನಾರಾಯಣ್ ರಾಣೆ, ವೈಜಯಂತ್​ ಪಾಂಡ್ಯ
- ಅಪರಾಜಿತಾ ಸಾರಂಗಿ, ಶಂತನು ಠಾಕೂರ್, ಸುರೇಶ್ ಗೋಪಿ
- ವಿಪ್ಲವ್​ ದೇವ್, ಸರ್ಬಾನಂದ್, ಹರ್ದಿಪ್​ ಸಿಂಗ್ ಪುರಿ
- ತಾಪಿರ್ ಗಾಂವ್, ಸಂಜಯ್ ಬಂಡಿ ಅಥವಾ ಕಿಶನ್ ರೆಡ್ಡಿ
ಇನ್ನು, ಮಿತ್ರಪಕ್ಷಗಳಲ್ಲಿ ಟಿಡಿಪಿ ಮತ್ತು ಜೆಡಿಯುಗೆ ಸಿಂಹಪಾಲು ಸಿಗಲಿದೆ. 4 ಸಂಸದರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಎಂಬ ಫಾರ್ಮೂಲದಂತೆ ಸ್ಥಾನಮಾನ ಸಿಗಲಿದೆ.
ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?
/newsfirstlive-kannada/media/post_attachments/wp-content/uploads/2023/09/N_CHANDRABABU_NAYDU.jpg)
ಮಿತ್ರಗಳಿಗೂ ಸ್ಥಾನಮಾನ!
- ಟಿಡಿಪಿ- ರಾಮ ಮೋಹನ್ ನಾಯ್ಡು, ಕೆ.ರವಿಚಂದ್ರನ್
- ಜೆಡಿಯು- ಲಲ್ಲನ್ ಸಿಂಗ್​, ಸಂಜಯ್ ಝಾ, ರಾಮನಾಥ್ ಠಾಕೂರ್
- ಶಿವಸೇನೆ (ಶಿಂಧೆ)- ಪ್ರತಾಪ್ ರಾವ್ ಜಾಧವ್​
- ಎಲ್​​ಜೆಪಿ- ಚಿರಾಗ್ ಪಾಸ್ವಾನ್
- ಎನ್​​ಸಿಪಿ (ಅಜಿತ್​​​ ಬಣ)- ಪ್ರಫುಲ್ ಪಟೇಲ್​
- ಅಪ್ನಾ ದಳ- ಅನುಪ್ರಿಯಾ ಪಟೇಲ್
- RLD- ಜಯಂತ್ ಚೌಧರಿ
ಪ್ರತಿ ಬಾರಿಯೂ ಮೋದಿ ಕ್ಯಾಬಿನೆಟ್​​​ ಅಚ್ಚರಿಗಳ ಸಂಗಮ.. ಹಾಗಾಗಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ ಅನ್ನೋದು ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us