/newsfirstlive-kannada/media/post_attachments/wp-content/uploads/2025/07/hasana.png)
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವುಗಳು ಮುಂದುವರೆದಿವೆ. ಇಂದು ಕೂಡ ಹೊಳೆ ನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದ ಕೊಪ್ಪಲಿನಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಬಲಿಯಾಗಿದ್ದಾನೆ. ಸಂಜು (30) ಮೃತ ವ್ಯಕ್ತಿ.
ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್​​ ರೇಟ್ ಹೆಚ್ಚಳ..
ಸಂಜು ಮದುವೆಯಾದ ಮೂರು ತಿಂಗಳಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ವುಡ್ ವರ್ಕ್ ಕೆಲಸ ಮಾಡುತ್ತಿದ್ದ. ಮೃತ ಸಂಜು ಹುಡುಗರ ಜತೆ ಮದ್ಯದ ಪಾರ್ಟಿಗೆ ತೆರಳಿದ್ದರು. ಪಾರ್ಟಿ ಮಾಡುತ್ತಿದ್ದಾಗ ಸಂಜುಗೆ ಏಕಾಏಕಿ ಹೃದಯಾಘಾತವಾಗಿದೆ. ತಕ್ಷಣವೇ ಸಂಜುನನ್ನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಂಜು ಮೃತಪಟ್ಟಿದ್ದಾರೆ. ಆದರೆ ಸಂಜು ಸಾವಿನ ಬಗ್ಗೆ ಪೋಷಕರಿಂದ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ, ಹಾಸನದಲ್ಲಿ 40 ದಿನಗಳಲ್ಲಿ 22 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ