/newsfirstlive-kannada/media/post_attachments/wp-content/uploads/2025/04/12-Class-Student-1.jpg)
ಇತ್ತೀಚೆಗೆ ದೇಶವು ವಿಚಿತ್ರ ಮದುವೆಗಳಿಗೆ, ವಿಚಿತ್ರ ಲವ್ ಸ್ಟೋರಿಗಳಿಗೆ ಜಾಗತಿಕವಾಗಿ ಸುದ್ದಿಯಾಗುತ್ತಿದೆ. ಸೋಷಿಯಲ್ ಮೀಡಿಯಾಗಳ ಈ ಜಗತ್ತಿನಲ್ಲಿ ಯಾರಿಗೆ ಯಾರ ಮೇಲೆ ಪ್ರೀತಿ ಮೂಡುತ್ತದೆಯೋ ಗೊತ್ತೇ ಆಗುವುದಿಲ್ಲ. ಇಲ್ಲಿ ಪರಿಚಯಗೊಳ್ಳುವ ಸಂಬಂಧಗಳು ಯಾವುದೋ ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಮದುವೆಯಾದ ಉದಾಹರಣೆಗಳು ಇವೆ. ಮಗಳೊಂದಿಗೆ ಮದುವೆ ನಿಶ್ಚಯವಾದ ಹುಡುಗನೊಂದಿಗೆ ಮಗಳ ಅಮ್ಮನೇ ಓಡಿ ಹೋದ ಉದಾಹರಣೆಗಳು ಇವೆ. ಮದುವೆಯಾಗಿಯೂ ತನ್ನ ಪ್ರಿಯತಮನಿಗಾಗಿ ಗಂಡನನ್ನು ಹತ್ಯೆ ಮಾಡಿದ, ಪತ್ನಿ ಇನ್ನೊಬ್ಬನನ್ನು ಪ್ರೀತಿಸುತ್ತಿರುವುದನ್ನು ಕಂಡು ಪತಿಯೇ ಅವರಿಬ್ಬರ ಮದುವೆ ಮಾಡಿದ ಇಂತಹ ನೂರಾರು ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ನಮಗೆ ಕಾಣಸಿಗುತ್ತಿವೆ.
ಈಗ ಉತ್ತರಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿಯೂ ಕೂಡ ಒಂದು ವಿಚಿತ್ರ ಮದುವೆ ನಡೆದಿದೆ. ಈ ಮೇಲೆ ನೀಡಿದ ಪಟ್ಟಿಗಳಿಗಿಂತ ವಿಚಿತ್ರ ಮದುವೆಯಿದು. 30 ವರ್ಷದ ಹಾಗೂ ಮೂರು ಮಕ್ಕಳನ್ನು ಹೊಂದಿರುವ ಮಹಿಳೆ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ. ಅದು ಕೂಡ ತನ್ನ ಮೂಲ ಧರ್ಮ ಇಸ್ಲಾಂ ತೊರೆದು ಹಿಂದೂ ಆಗಿ ಮತಾಂತರ ಹೊಂದಿ. 12ನೇ ತರಗತಿಯ ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಚಾರ ಈಗ ರಾಷ್ಟ್ರಾದ್ಯಂತ ದೊಡ್ಡ ಸುದ್ದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಮಗಳ ಭಾವಿ ಗಂಡನ ಮೇಲೆ ಅಮ್ಮನಿಗೆ ಲವ್​.. ರಾತ್ರೋರಾತ್ರಿ ಅಳಿಯನ ಜೊತೆ ಅತ್ತೆ ಪರಾರಿ..!
ಹಸನ್​ಪುರದ ಸರ್ಕಲ್ ಆಫೀಸರ್ ದೀಪಕ್​ ಕುಮಾರ ಪಂತ್ ಹೇಳುವ ಪ್ರಕಾರ ಈ ಮಹಿಳೆ ಶಿವಾನಿಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿಂತೆ. ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ 30 ವರ್ಷದ ಮಹಿಳೆಗೆ ಈಗಾಗಲೇ ಎರಡು ಮದುವೆಯಾಗಿದ್ದವು ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯಿದೆ. ಕಾನೂನು ಬಾಹಿರ ಮತಾಂತರಕ್ಕೆ ಇಲ್ಲಿ ಅವಕಾಶವಿಲ್ಲ. ಇದರ ನಡುವೆಯೂ ಕೂಡ ಶಬ್ನಮ್​ ಶಿವಾನಿಯಾಗಿ ಬದಲಾಗಿ 12ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ.
ಇದನ್ನೂ ಓದಿ:ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು!
ಈ ಹಿಂದೆ ಶಿವಾನಿ ಮೀರತ್​​ನಲ್ಲಿರುವ ಒಬ್ಬನನ್ನು ಮದುವೆಯಾಗಿದ್ದಳಂತೆ. ಕೊನೆಗೆ ಡಿವೋರ್ಸ್ ಮೂಲಕ ಆ ಸಂಬಂಧ ಮುರಿದು ಬಿತ್ತಂತೆ. ನಂತರ ತೌಫಿಕ್ ಎಂಬಾತನನ್ನು ಮದುವೆಯಾದ ಈಕೆ ಸೈಂಡನವಾಲಾದಲ್ಲಿ ನೆಲೆಸುತ್ತಿದ್ದಳು. 2011ರಲ್ಲಿ ತೌಫೀಕ್​ ಅಪಘಾತದಲ್ಲಿ ಕೈ ಕಾಲು ಕಳೆದುಕೊಂಡಾಗ ಆತನನ್ನು ಬಿಟ್ಟು ಬಂದಳಂತೆ ಶಿವಾನಿ. ನಂತರ ಇತ್ತೀಚೆಗೆ 12ನೇ ತರಗತಿ ಓದುತ್ತಿರುವ 18 ವರ್ಷದ ಯುವಕನ ಜೊತೆ ಸಂಬಂಧವನ್ನು ಬೆಳೆಸಿದ್ದಾಳೆ. ಅವನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಶಿವಾನಿ ಎಂದು ಬದಲಾಯಿಸಿಕೊಂಡಿದ್ದಾಳೆ.
/newsfirstlive-kannada/media/post_attachments/wp-content/uploads/2025/04/12-Class-Student.jpg)
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿರುವ 12ನೇ ತರಗತಿಯ ಹುಡುಗನ ತಂದೆ, ಮಗನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೂ ಸಂತೋಷವಾಗಿದೆ. ಜೋಡಿಗಳು ಕೂಡ ಸಂತೋಷದಿಂದ ಇದ್ದಾರೆ. ನಮ್ಮದು ಒಂದೇ ಆಸೆ, ಇಬ್ಬರು ಒಟ್ಟಿಗೆ ಸಂತೋಷದಿಂದ ಕೊನೆಯತನಕ ಬಾಳಲಿ ಅನ್ನೋದು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us