newsfirstkannada.com

IPL ಬೆಟ್ಟಿಂಗ್‌ ದಂಧೆಗೆ ಯುವಕ ಬಲಿ; ಹಣ ಕೇಳಲು ಹೋದವ ಹೆಣವಾದ

Share :

26-05-2023

    IPL ಬೆಟ್ಟಿಂಗ್‌ ದಂಧೆಗೆ ಯುವಕ ಬಲಿ

    ಹಣ ಕೇಳಲು ಹೋದವ ಹೆಣವಾದ

    ಹಣ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಮಂಡ್ಯ: ಐಪಿಎಲ್ ಬೆಟ್ಟಿಂಗ್ ಹಣ ಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರೋ ಘಟನೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ. ಪುನೀತ್ (30) ಕೊಲೆಯಾದ ಯುವಕ.

ಮೃತ ಯುವಕನು ಚಿಕ್ಕರಸಿನಕೆರೆ ಗ್ರಾಮದ ನಿವಾಸಿ. ಸ್ನೇಹಿತರ ಜೊತೆಗೆ ಐಪಿಎಲ್ ಪಂದ್ಯಾವಳಿ ಬೆಟ್ಟಿಂಗ್ ಕಟ್ಟಿದ್ದ. ಗೆದ್ದ ಹಣವನ್ನು ಕೊಡುವಂತೆ ಕೇಳಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಮರದ ತುಂಡಿನಿಂದ ಪುನೀತ್ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಪುನೀತ್​​ನನ್ನು ಕೆ.ಎಂ.ಡೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪುನೀತ್​​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಅವರು ತಂಡದ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ಬೆಟ್ಟಿಂಗ್‌ ದಂಧೆಗೆ ಯುವಕ ಬಲಿ; ಹಣ ಕೇಳಲು ಹೋದವ ಹೆಣವಾದ

https://newsfirstlive.com/wp-content/uploads/2023/05/ipl.jpg

Load More