200 ವರ್ಷಗಳ ದಾಖಲೆಯ ಮಳೆ.. 300 ಹೊಸ ಬ್ರಾಂಡ್‌ ಕಾರುಗಳು ಮುಳುಗಡೆ; ವಿಡಿಯೋ ನೋಡಿ!

author-image
admin
Updated On
200 ವರ್ಷಗಳ ದಾಖಲೆಯ ಮಳೆ.. 300 ಹೊಸ ಬ್ರಾಂಡ್‌ ಕಾರುಗಳು ಮುಳುಗಡೆ; ವಿಡಿಯೋ ನೋಡಿ!
Advertisment
  • 200 ವರ್ಷಗಳ ರಣಭೀಕರ ಮಳೆಗೆ ಆಂಧ್ರಪ್ರದೇಶದಲ್ಲಿ ಪ್ರವಾಹ
  • ನೂರಾರು ಹೊಸ ಕಾರು ನಿಲ್ಲಿಸಿದ್ದ ಜಾಗ ಸಂಪೂರ್ಣ ಮುಳುಗಡೆ
  • ಮಾರಾಟಕ್ಕೂ ಮುನ್ನ ಡೀಲರ್ ಬಳಿ ಇದ್ದ 300ಕ್ಕೂ ಹೆಚ್ಚು ಕಾರುಗಳು

ವಿಜಯವಾಡ: ಆಂಧ್ರಪ್ರದೇಶ, ತೆಲಂಗಾಣದಲ್ಲಿ ವರುಣನ ಆರ್ಭಟ ಮುಗಿಲು ಮುಟ್ಟಿದ್ದು, ರಣಭೀಕರ ಮಳೆಗೆ ಎರಡು ರಾಜ್ಯಗಳಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಡ್ರೋನ್‌ಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.

ಇದನ್ನೂ ಓದಿ: ಮಳೆ ಆರ್ಭಟಕ್ಕೆ 30ಕ್ಕೂ ಹೆಚ್ಚು ಜನ ಸಾವು, ಮುಂದಿನ 3 ದಿನ ವರುಣಾರ್ಭಟ ಫಿಕ್ಸ್; ಡ್ರೋನ್​​ನಿಂದ ಆಹಾರ ವಿತರಣೆ 

200 ವರ್ಷಗಳ ರಣಭೀಕರ ಮಳೆಗೆ ಆಂಧ್ರಪ್ರದೇಶದ ಹಲವೆಡೆ ದಿಢೀರ್ ಪ್ರವಾಹ ಎದುರಾಗಿದೆ. ವಿಜಯವಾಡದಲ್ಲಿ ಟಾಟಾ ಕಾರು ಡೀಲರ್‌ ಜಾಗ ಸಂಪೂರ್ಣ ಮುಳುಗಡೆಯಾಗಿದೆ. ಮಾರಾಟಕ್ಕೂ ಮುನ್ನ ಡೀಲರ್‌ಗಳು ವಿಜಯವಾಡದಲ್ಲಿ ನೂರಾರು ಕಾರುಗಳನ್ನ ಈ ಜಾಗದಲ್ಲಿ ನಿಲ್ಲಿಸಿದ್ದರು. ಭಾರೀ ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಮುಳುಗಡೆಯಾಗಿದೆ.

publive-image

ಇದನ್ನೂ ಓದಿ: 200 ವರ್ಷಗಳಲ್ಲಿಯೇ ದಾಖಲೆಯ ಮಳೆ.. 19 ಮಂದಿ ಸಾವು, ಶಾಲೆಗಳಿಗೆ ರಜೆ ಘೋಷಣೆ 

ವಿಜಯವಾಡದಲ್ಲಿ ಟಾಟಾ ಕಾರು ಡೀಲರ್‌ಗಳನ್ನು 300ಕ್ಕೂ ಹೆಚ್ಚು ಹೊಸ ಕಾರುಗಳನ್ನು ನಿಲ್ಲಿಸಿದ್ದರು. ಭಾರೀ ಮಳೆಯಿಂದಾಗಿ ನೂರಾರು ಟಾಟಾ ಕಾರುಗಳು ಮಳೆ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ.


">September 3, 2024

ಮಳೆ ನೀರಿನಲ್ಲಿ ನಿಂತಲ್ಲೇ ನಿಂತಿರುವ ಟಾಟಾ ಕಂಪನಿಯ ಹೊಸ ಕಾರುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡೀಲರ್‌ಗಳ ಮೂಲಕ ಗ್ರಾಹಕರಿಗೆ ಈ ಟಾಟಾ ಕಾರುಗಳು ಮಾರಾಟವಾಗಬೇಕಾಗಿತ್ತು. ಆದರೆ ಈಗ ಮಾರಾಟಕ್ಕೂ ಮುನ್ನ ಡೀಲರ್ ಬಳಿ ಇದ್ದ ಕಾರುಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment