newsfirstkannada.com

ಅಮೆಜಾನ್​ ಕಾಡಿನಲ್ಲಿ ಪತ್ತೆಯಾಯ್ತು 3 ಸಾವಿರ ವರ್ಷಗಳ ಹಳೆಯ ನಗರ! ಅಲ್ಲಿದೆ 25 km​ ಉದ್ದದ ರಸ್ತೆಯ ಕುರುಹು

Share :

Published January 13, 2024 at 1:35pm

    ಅಮೆಜಾನ್​ನಲ್ಲಿ ಸಿಕ್ತು ಪ್ರಾಚೀನ ಮನೆಗಳು, ರಸ್ತೆಗಳು

    LiDAR ಬಳಸಿಕೊಂಡು ಪತ್ತೆಹಚ್ಚಿದ ಸಂಶೋಧಕರು

    ಜ್ವಾಲಾಮುಖಿಯ ನೆರಳಿನಲ್ಲಿದೆ ಈ ಪ್ರದೇಶ

ಅಮೆಜಾನ್​ ವಿಶ್ವದ ಬಹುದೊಡ್ಡ ಕಾಡು. ಅನೇಕ ಸಸ್ಯವರ್ಗವನ್ನು ಹೊಂದಿರುವ ಪ್ರದೇಶ. ಆದರೆ ಅಮೆಜಾನ್​ನಲ್ಲಿ ಇದೀಗ ಮರೆಯಾಗಿರುವ ಬೃಹತ್​ ನಗರವೊಂದು ಪತ್ತೆಯಾಗಿದೆ.

ಹೌದು. ಇಲ್ಲಿನ ಉಪನೋ ಕಣಿವೆಯಲ್ಲಿ ಕುರುಹುಗಳು ಸಿಕ್ಕಿವೆ. ಪ್ರಾಚೀನ ನಗರದಲ್ಲಿ ಮನೆಗಳು, ಪ್ಲಾಜಾ, ರಸ್ತೆಗಳು ಇವೆಲ್ಲವು ಸಿಕ್ಕಿದೆ. ಆದರೆ ಉಪನೋ ಕಣಿವೆ ಜ್ವಾಲಾಮುಖಿಯ ನೆರಳಿನಲ್ಲಿದೆ. ಅಂದಹಾಗೆಯೇ ಸಂಶೋಧಕರು ಈ ಪ್ರದೇಶವನ್ನು ರಿಮೋಟ್​ ಸೆನ್ಸಿಂಗ್​ ವಿಧಾನವಾದ LiDAR ಬಳಸಿಕೊಂಡು ಪತ್ತೆಹಚ್ಚಿದ್ದಾರೆ.

ನ್ಯಾಷನಲ್​ ಸೆಂಟರ್​ ತನಿಖಾ ನಿರ್ದೇಶಕರಾದ ಪ್ರೊಫೆಸರ್​​ ಸ್ಟೀಪನ್​ ರೋಸ್ಟೈನ್​​ ಈ ಬಗ್ಗೆ ಮಾತನಾಡಿದ್ದು, ‘ಅಮೆಜಾನ್​ನಲ್ಲಿ ಸಿಕ್ಕಿರುವುದು ನಮಗೆ ತಿಳಿಯದೇ ಇರುವುದಕ್ಕಿಂದ ಹಳೆಯ ​ನಗರ. ಇದು ಆಗಿನ ಸಂಸ್ಕೃತಿ ಮತ್ತು ನಾಗರಿಕತೆ ಕಲ್ಪನೆಯನ್ನು ಒದಗಿಸುತ್ತಿದೆ’ ಎಂದು ಹೇಳಿದ್ದಾರೆ.

ಜನರು ಇಲ್ಲಿ ವಾಸಿಸುತ್ತಿದ್ದರು

ಇನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಲಾದ ನಗರವು ಸುಮಾರು 3 ಸಾವಿರ ಮತ್ತು 1,500 ವರ್ಷಗಳ ನಡುವೆ ಬರುವ ಹಳೆಯದ್ದಾಗಿದೆ. ಇವು ಕೊಲಂಬಿಯನ್​ ಪೂರ್ವಕ್ಕಿಂತ ಹಳೆಯದು. ಸಾವಿರ ವರ್ಷಗಳವರೆಗೆ ಜನರು ಅಲ್ಲಿ ವಾಸಿಸುತ್ತಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.

2015ರಲ್ಲೇ LiDAR ಬಳಸಿಕೊಂಡು ಸಂಶೋಧನೆ ಮಾಡಲಾಗಿತ್ತು. ಆದರೆ ಫಲಿತಾಂಶವನ್ನು ಈಗ ಪ್ರಕಟಿಸಲಾಗಿದೆ. ಇನ್ನು ಅಲ್ಲಿ ಮರದ ಕಟ್ಟಡಗಳು, ಕೆಲವು ಉತ್ಪನ್ನಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

ಸಂಶೋಧಕರು ಹೇಳುವಂತೆ ಉಪನೋ ಕಣಿವೆಯಲ್ಲಿ ಸಿಕ್ಕ ನಗರದ ಕುರುಹು ಐದು ಪ್ರಮುಖ ವಸಾಹತುಗಳಿರುವಂತೆ ಕಾಣಿಸಿವೆ. ಅಲ್ಲಿನ ರಸ್ತೆ 25 ಕಿಲೋಮೀಟರ್​​ ಉದ್ದವಾಗಿವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆಜಾನ್​ ಕಾಡಿನಲ್ಲಿ ಪತ್ತೆಯಾಯ್ತು 3 ಸಾವಿರ ವರ್ಷಗಳ ಹಳೆಯ ನಗರ! ಅಲ್ಲಿದೆ 25 km​ ಉದ್ದದ ರಸ್ತೆಯ ಕುರುಹು

https://newsfirstlive.com/wp-content/uploads/2024/01/Amazon-Forest.jpg

Load More