/newsfirstlive-kannada/media/post_attachments/wp-content/uploads/2024/09/NAAC-3O-YEARS-1.jpg)
ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮಾಡಿ ಅಂತಹ ಸಂಸ್ಥೆಗಳಿಗೆ ಗುಣಮಟ್ಟ ಅಳೆದು ಗ್ರೇಡಿಂಗ್​ ನೀಡುವ ಸಂಸ್ಥೆಯೇ ನ್ಯಾಕ್​. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಡಿಯಲ್ಲಿ ಬರುವ ಈ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿದೆ.
ನ್ಯಾಕ್​ ಆರಂಭವಾಗಿ 30 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇವತ್ತು ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಬೆಂಗಳೂರಿನ ನ್ಯಾಕ್​ ಕೇಂದ್ರ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಭಾಗವಹಿದ್ದರು.
/newsfirstlive-kannada/media/post_attachments/wp-content/uploads/2024/09/NAAC-3O-YEARS.jpg)
ಇದೇ ವೇಳೆ S-VYASA ಸಂಸ್ಥೆಯ ಮುಖ್ಯಸ್ಥ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಹೆಚ್​. ಆರ್​. ನಾಗೇಂದ್ರ ನ್ಯಾಕ್​​ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಗುಣಗಾನ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us