/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ತಾಯಿ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
- ಕೆಲಸ ಹುಡುಕುತ್ತಿರುವವರಿಗೆ ಹೊಸ ನೌಕರಿ ಸಿಗುವ ಸಾಧ್ಯತೆ
- ಮನೆಗೆ ದುಬಾರಿ ವಸ್ತುವನ್ನು ತರುವ ಸಾಧ್ಯತೆ ಇದೆ
- ಈ ದಿನ ಕಹಿ ಘಟನೆಗಳನ್ನ ನೆನಪಿಸಿಕೊಳ್ಳುತ್ತಾ ಬೇಸರದಿಂದಿರುತ್ತೀರಿ
- ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು
- ಮಾಡಿದ ಸಹಾಯಕ್ಕೆ ಹೆಚ್ಚು ಹಣ ನಿಮಗೆ ಲಭಿಸುತ್ತದೆ
- ಹರಿದ್ರಾ ಗಣಪತಿಯನ್ನು ಆರಾಧಿಸಿ
ವೃಷಭ
- ಸಂಬಂಧಿಕರ ಮನೆಯಲ್ಲಿ ವಿವಾಹದ ವಿಚಾರ ಕೇಳಿ ಆನಂದಿಸುತ್ತೀರಿ
- ನಿಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ
- ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವಿದೇಶದ ಕಂಪನಿಯಿಂದ ಉಡುಗೊರೆಗಳು ಬರಬಹುದು
- ಇಂದು ದುಂದುವೆಚ್ಚ ಮಾಡಬೇಡಿ
- ಮಧ್ಯಾಹ್ನದ ನಂತರ ಹಣದ ಹೂಡಿಕೆ ಮಾಡಿ
- ವೀರಭದ್ರನನ್ನು ಆರಾಧಿಸಿ
ಮಿಥುನ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ
- ಇಂದು ಕುಟುಂಬ ಸದಸ್ಯರ ಬೆಂಬಲ ನಿಮಗಿರುತ್ತದೆ
- ಹೊಟ್ಟೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು ಎಚ್ಚರವಿರಲಿ
- ಇಂದು ಹೊಸ ಉದ್ಯೋಗವನ್ನ ಪ್ರಾರಂಭಿಸಬಹುದು
- ಮಕ್ಕಳ ಸಾಧನೆಯಿಂದ ಸಂತೋಷವಾಗಿರುತ್ತೀರಿ
- ಇಂದು ವ್ಯಾಪಾರ, ವ್ಯವಹಾರ ಚೆನ್ನಾಗಿ ನಡೆಯುತ್ತದೆ
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಳಿತಲ್ಲ
- ರುದ್ರವಟುಕನನ್ನು ಆರಾಧಿಸಿ
ಕಟಕ
- ತರಕಾರಿ ವ್ಯಾಪಾರ ಮಾಡುವವರಿಗೆ ಶುಭಫಲವಿದೆ
- ಮನೆಯ ವಿಚಾರದಲ್ಲಿ ಹೆಚ್ಚು ಗಮನ ಕೊಡಿ
- ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಲು ಒಳ್ಳೆಯದಿನ
- ಅರ್ಧಕ್ಕೆ ನಿಂತ ಕೆಲಸ ಮತ್ತೆ ಆರಂಭವಾಗುವ ಸಾಧ್ಯತೆ
- ಸಂಜೆ ವೇಳೆಗೆ ಪದಾರ್ಥವನ್ನ ಅಥವಾ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ, ಎಚ್ಚರ ವಹಿಸಿ
- ಸ್ಕಂದನನ್ನು ಆರಾಧಿಸಿ
ಸಿಂಹ
- ನಿಮ್ಮ ಚಂಚಲ ಸ್ವಭಾವವನ್ನು ದೂರಮಾಡಿಕೊಂಡರೆ ಒಳಿತು
- ಸಮಯಕ್ಕೆ ಹೆಚ್ಚಿನ ಬೆಲೆ ಕೊಡಲಿಲ್ಲ ಅಂದ್ರೆ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
- ಕೂಡಿಟ್ಟ ಹಣವು ಖರ್ಚಾಗುವ ಸಾಧ್ಯತೆ ಇದೆ
- ಪುಸ್ತಕ ವ್ಯಾಪಾರಿಗಳಿಗೆ ಲಾಭ ಆಗುವ ಸಾಧ್ಯತೆ
- ಪುನಃ ಹಣ ಸಂಪಾದಿಸುತ್ತೇನೆಂಬ ಧೈರ್ಯ ನಿಮ್ಮಲ್ಲಿರುತ್ತದೆ
- ಸಂಕಷ್ಟಹರ ಗಣಪತಿಯನ್ನು ಪ್ರಾರ್ಥಿಸಿ
ಕನ್ಯಾ
- ಆದಾಯಕ್ಕೆ ಹೊಸ ಹಣದ ಮೂಲ ಸಿಗುವ ಸಾಧ್ಯತೆ ಇದೆ
- ಬಾಕಿ ಇರುವ ಕೆಲಸಗಳೆಲ್ಲಾ ಪೂರ್ಣವಾಗುವ ಸಾಧ್ಯತೆ ಇದೆ
- ವಿದ್ಯಾರ್ಥಿಗಳಿಗೆ ಕೆಲಸ ದೊರೆಯುವ ಸಾಧ್ಯತೆ ಇದೆ
- ನೀವು ಕೆಲಸ ಮಾಡುವ ಸ್ಥಳದಲ್ಲಿ ಬೇರೆ ವಿಷಯಗಳಿಗೆ ತಲೆ ಹಾಕಿ ಅಗೌರವ ಉಂಟಾಗುತ್ತದೆ
- ಭಗವತಿಯನ್ನು ಪ್ರಾರ್ಥಿಸಿ
ತುಲಾ
- ಕೆಲಸ ಮಾಡುವ ಜಾಗದಲ್ಲಿ ಇಂದು ಹೊಸ ಹುರುಪು ಉತ್ತೇಜನ ಸಿಗಲಿದೆ
- ನಿಮ್ಮ ತಂದೆಯ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಬೇಕು
- ಕಾರ್ಯಕ್ಷೇತ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಗೊಂದಲ ಉಂಟಾಗುವ ದಿನ
- ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ
- ತಪ್ಪು ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಿ
- ಪ್ರಸನ್ನ ಗಣಪತಿಯನ್ನು ಸ್ಮರಿಸಿ
ವೃಶ್ಚಿಕ
- ಆಸ್ತಿ, ಜಮೀನು ವಿಷಯ, ಕೋರ್ಟ್ ನಲ್ಲಿ ನಿಮ್ಮ ಕಡೆ ಇತ್ಯರ್ಥ ಆಗಲಿದೆ
- ಹಿರಿಯ ಅಧಿಕಾರಿಗಳು ಇಂದು ನಿಮ್ಮನ್ನು ಪ್ರಶಂಶಿಸುತ್ತಾರೆ
- ವಿರೋಧಿಗಳು, ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ
- ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ
- ಗಂಭೀರ ಸಮಸ್ಯೆಗಳು ಇಂದು ಪರಿಹಾರವಾಗುತ್ತದೆ
- ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
- ಪ್ರತಾಪ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ
ಧನಸ್ಸು
- ಹೊಸ ಸಂಬಂಧದ ಮಾತುಕತೆ ಮಾಡುವ ಪ್ರಯತ್ನಗಳಿಗೆ ಶುಭದಿನ
- ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
- ಮನಸಿಗೆ ತುಂಬಾ ಬೇಸರ ಆಗುವ ದಿನ
- ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ
- ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ
- ನವಗ್ರಹ ಮಂತ್ರವನ್ನು ಪ್ರ್ರಾರ್ಥಿಸಿ
ಮಕರ
- ಇಂದು ಪ್ರೇಮಿಗಳಿಗೆ ಶುಭದಿನ
- ಇಂದು ಆಶ್ಚರ್ಯಕರ ವಿಚಾರಗಳನ್ನು ಕೇಳುತ್ತೀರಿ
- ಕೆಲಸಗಳಲ್ಲಿ ಅಡ್ಡಿ-ಆತಂಕಗಳು ಬರಬಹುದು
- ಬಂಧುಗಳು, ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗುವ ದಿನ
- ಲೆಕ್ಕ ಪರಿಶೋಧಕರಿಗೆ ಇಂದು ಉತ್ತಮ ದಿನ
- ಮಧುಮೇಹಿಗಳು ಆರೋಗ್ಯದ ಕಡೆ ಗಮನ ಹರಿಸಿ
- ವಿಂಜಾ ಮಂತ್ರವನ್ನು ಶ್ರವಣ ಮಾಡಿ
ಕುಂಭ
- ಕಾಲು ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚಿಗೆ ಮುಂದಾಗಬೇಕಾದ ದಿನ
- ಸಿ.ಎ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ
- ಇಂದು ವಾಹನ ಚಾಲನೆಯಲ್ಲಿ ಜಾಗ್ರತೆವಹಿಸಿ
- ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ
- ಮದುವೆಯ ಪ್ರಸ್ತಾಪ ಇಂದು ಮಾಡಬೇಡಿ
- ಅಪಸ್ಮಾರ ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ
ಮೀನ
- ಯಾವಾಗಲು ಸಂಚಾರಿ ನಿಯಮಗಳನ್ನು ಪಾಲಿಸಿ
- ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಒಳ್ಳೆಯದಾಗಲಿದೆ
- ದಾನ ಮತ್ತು ಸಹಾಯ ಮಾಡಲು ಇಂದು ಪ್ರಶಸ್ತವಾದ ದಿನ
- ದಾನ ಮಾಡಿದ ಮೇಲೆ ಪ್ರತಿಫಲ ನಿರೀಕ್ಷಿಸಬೇಡಿ
- ಇಂದು ಹಣಕಾಸಿನ ತೊಂದರೆ ಆಗುವ ಸಾಧ್ಯತೆ
- ತಂದೆ ತಾಯಿಗೆ ಗೌರವ ನೀಡಿ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ