/newsfirstlive-kannada/media/post_attachments/wp-content/uploads/2024/10/Ben-stocks.jpg)
ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪಾಕ್ ಟೆಸ್ಟ್ ಸರಣಿ ವೇಳೆ ಆಘಾತ ಎದುರಾಗಿತ್ತು. ಪಾಕ್ ನೆಲದಲ್ಲಿ ಸೋತು ಬೇಸರದಲ್ಲಿ ಮನೆಗೆ ಮರಳಿದ ಸ್ಟೋಕ್ಸ್ಗೆ ಶಾಕ್ ಆಗಿತ್ತು. ಮನೆಗೆ ಕಳ್ಳರು ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದರು. ಕೊನೆಗೆ ಅಸಹಾಯಕರಾದ ಸ್ಟೋಕ್ಸ್ ಸಹಾಯಕ್ಕಾಗಿ ಅಂಗಲಾಚಿದ್ದರು. ಆದರೀಗ ಸ್ಟೋಕ್ಸ್ ಮನೆ ಕಳ್ಳತನ ಮಾಡಿದ್ದ ಆ ಮುಸುಕುದಾರಿಗಳು ಪೊಲೀಸರಿಗೆ ಸಿಕ್ಕಿದ್ದಾರೆ.
ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್. ಟೆಸ್ಟ್ ಟೀಮ್ನ ಕ್ಯಾಪ್ಟನ್.! ಕ್ರಿಕೆಟ್ ಜನಕರಿಗೆ ಏಕದಿನ ವಿಶ್ವಕಪ್ ಕೊರಗು ನೀಗಿಸಿದ ಮ್ಯಾಚ್ ವಿನ್ನರ್. ಆಲ್ರೌಂಡರ್ ಸ್ಟೋಕ್ಸ್ಗೆ ವಿಶ್ವಾದ್ಯಂತ ಅಭಿಮಾನಿಗಳ ಬಳಗವೇ ಇದೆ. ನೇಮ್ & ಪೇಮ್ ಎಲ್ಲಾ ಅರಿಸಿ ಬಂದಿದೆ. ಎಲ್ಲವೂ ಇದ್ರೂ, ಮನೆಗೆ ಕಳ್ಳರು ನುಗ್ಗಿದ ವಿಚರ ತಿಳಿದು ಬೆನ್ ಸ್ಟೋಕ್ಸ್ ಅಸಹಾಯಕರಾಗಿದ್ದರು. ಸಹಾಯಕ್ಕಾಗಿ ಅಂಗಲಾಚಿದ್ದರು.
ಬೆಲೆ ಬಾಳುವ ವಸ್ತುಗಳನ್ನ ದೋಚಿದ ಮುಸುಕುಧಾರಿಗಳು..!
ಅಕ್ಟೋಬರ್-17. ಪಾಕಿಸ್ತಾನ ಎದುರಿನ 2ನೇ ಟೆಸ್ಟ್ನಲ್ಲಿ ಬೆನ್ ಸ್ಟೋಕ್ಸ್, ಬ್ಯುಸಿಯಾಗಿದ್ದರು. ಟೆಸ್ಟ್ ಸರಣಿ ಗೆಲುವಿನತ್ತ ದೃಷ್ಟಿ ನೆಟ್ಟಿದ್ದರು. ಅತ್ತ ಆನ್ಫೀಲ್ಡ್ ಆಟದಲ್ಲಿ ಬೆನ್ ಸ್ಟೋಕ್ಸ್ ಬ್ಯುಸಿಯಾಗಿದ್ದ, ಇತ್ತ ಸ್ಟೋಕ್ಸ್ ಮನೆಯ ಮೇಲೆ ದರೋಡೆಕೋರರ ಕಣ್ಣು ಬಿದ್ದಿತ್ತು.
ಹೌದು! ಈಶಾನ್ಯದ ಕ್ಯಾಸಲ್ ಈಡನ್ ಪ್ರದೇಶದಲ್ಲಿರುವ ಬೆನ್ ಸ್ಟೋಕ್ಸ್ ಮನೆಗೆ ನುಸುಳಿದ್ದ ಮುಸುಕುಧಾರಿಗಳು, ಮನೆಯಲ್ಲಿದ್ದ ಬೆಲೆ ಬಾಳುವ ದುಬಾರಿ ವಸ್ತುಗಳ ಜೊತೆ ಜೊತೆಗೆ ಕೆಲವು ಭಾವನಾತ್ಮಕ ವಸ್ತುಗಳನ್ನು ಕದ್ದೊಯ್ದಿದ್ದರು. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಲೋಗೋ ಸುತ್ತ ಡೈಮೆಂಡ್ ಹೊಂದಿರುವ ಬೆಲೆ ಬಾಳುವ ಉಂಗುರ, ಎರಡು ಚೈನ್, ಒಂದು ಸಿಂಹದ ಮುಖದ ಗೋಲ್ಡ್ ಪೆಂಡೆಂಟ್ ಚೈನ್ ಸೇರಿ ಕೆಲವು ವಸ್ತುಗಳು ಕಳುವಾಗಿತ್ತು.
ಇದನ್ನೂ ಓದಿ: ರಿಟೈನ್ ಬೆನ್ನಲ್ಲೇ ವಿರಾಟ್ ಭರವಸೆಯ ಮಾತು! ಅಭಿಮಾನಿಗಳ ಅಭಿಮಾನ ಹೆಜ್ಜಿಸಿದ ಕೊಹ್ಲಿ ನುಡಿ
ಇದಿಷ್ಟೇ ಅಲ್ಲ.! ದುಬಾರಿ ಬ್ಯಾಗ್, ಚಿನ್ನಾಭರಣಗಳ ಜೊತೆಗೆ 2019ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕಾರಣಕ್ಕೆ ಸ್ಟೋಕ್ಸ್ಗೆ ನೀಡಿದ್ದ ಬ್ರಿಟನ್ನ 2ನೇ ಅತ್ಯುನ್ನತ ಪ್ರಶಸ್ತಿಯಾದ OBE ಅವಾರ್ಡ್ ಅನ್ನೂ ಖದೀಮರು ಕದ್ದಿದ್ದರು. ಇಷ್ಟು ದೊಡ್ಡ ಮಟ್ಟದಲ್ಲಿ ರಾಬರಿ ನಡೆದರೂ, ಮನೆಯಲ್ಲಿದ್ದ ಪತ್ನಿ, ಮುಕ್ಕಳಿಗೆ ಅದೃಷ್ಟವಶಾತ್ ಯಾವುದೇ ಹಾನಿ ಮಾಡಿಲ್ಲ.
APPEAL
On the evening of Thursday 17th October a number of masked people burgled my home in the Castle Eden area in the North East.
They escaped with jewellery, other valuables and a good deal of personal items. Many of those items have real sentimental value for me and my…
— Ben Stokes (@benstokes38) October 30, 2024
">October 30, 2024
ಸಹಾಯಕ್ಕಾಗಿ ಅಂಗಲಾಚಿದ ಬೆನ್ ಸ್ಟೋಕ್ಸ್..!
ಕಳೆದುಕೊಂಡಿರುವ ವಸ್ತುಗಳ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಬೆನ್ ಸ್ಟೋಕ್ಸ್, ಕೊನೆಗೆ ಸಹಾಯಕ್ಕಾಗಿ ಅಂಗಲಾಚಿದ್ದರು. ಕಳುವಾದ ವಸ್ತುಗಳ ಫೋಟೋಗಳನ್ನ ಹಂಚಿಕೊಂಡಿದ್ದರು. ಇದು ನನ್ನ ವಸ್ತುಗಳ ರಿಕವರಿಯಾಗುತ್ತೆ ಎಂಬ ಕಾರಣಕ್ಕಾಲ್ಲ. ರಾಬರಿಗಳ ಪತ್ತೆ ಆಗ್ತಾರೆ ಎಂಬ ಭರವಸೆಗಾಗಿ ಎಂದು ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ಈ ಕುರಿತದ ಮಾಹಿತಿ ಸಿಕ್ಕರೆ, ಡರ್ಹಾಮ್ ಫೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು.
ಇದನ್ನೂ ಓದಿ: ಲIND vs NZ; ಟೀಮ್ ಇಂಡಿಯಾಕ್ಕೆ ತೀವ್ರ ಸಂಕಷ್ಟ.. ಕೊಹ್ಲಿ, ಗಿಲ್, ಸರ್ಫರಾಜ್ ಕೇವಲ 1 ರನ್ಗೆ ಔಟ್
ಸದ್ಯಕ್ಕಿರೋ ಮಾಹಿತಿಯಂತೆ ಪೋಲಿಸರು 32 ವರ್ಷದ ಒಬ್ಬ ವ್ಯಕ್ತಿಯನ್ನ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ. ಆದ್ರೆ, ಆ ವ್ಯಕ್ತಿಯೇ ಕಳ್ಳ ಎಂಬ ಬಗ್ಗೆ ಯಾವುದೇ ಸಾಕ್ಷಿಗಳು ಇನ್ನೂ ಸಿಕ್ಕಿಲ್ಲ. ತನಿಖೆಯಂತೂ ಜೋರಾಗಿ ನಡೀತಿದೆ. ಒಟ್ಟಿನಲ್ಲಿ, ಬೆನ್ ಸ್ಟೋಕ್ಸ್ರ ದುಬಾರಿ ಮೌಲ್ಯದ ವಸ್ತುಗಳು ಸಿಗ್ತಾವೋ ಇಲ್ವೋ ಗೊತ್ತಿಲ್ಲ. ಚಿನ್ನಭರಣಗಳು ಹೋದ್ರೆ ಹೋಗಲಿ ಆದ್ರೆ, ಸ್ಟೋಕ್ಸ್ ಸಾಧನೆಯ ಪ್ರತಿಫಲಕ್ಕೆ ಸಿಕ್ಕ ಪ್ರಶಸ್ತಿಗಳು, ಸ್ಫೂರ್ತಿಯ ಸೆಲೆಯಾಗುತ್ತಿದ್ದ ಅವಾರ್ಡ್ಗಳಾದ್ರೂ ಮರಳಿ ಸಿಗಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ