/newsfirstlive-kannada/media/post_attachments/wp-content/uploads/2024/07/navanath-mahapure.jpg)
ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ನವನಾತ್ ಮಹಾಪೂರೆಯನ್ನು (33) ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇಬಲ ಗಾಣಗಾಪುರದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರ ಹತ್ಯೆ ಮಾಡಲಾಗಿತ್ತು. ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು.
ಜೂನ್ 25 ರಂದು ಹತ್ಯೆ ನಡೆದಿತ್ತು. ಮಹೇಶ್ ಕೋಲತೆ (29) ಎಂಬಾತ ನವನಾತ್ ಮಹಾಪೂರೆಯ ಕೈಯಾರೆ ಕೊಲೆಯಾಗಿದ್ದನು.
ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಬಳಸುತ್ತಿದ್ರು ಫೇಕ್ ಸಿಮ್? ಯಾರ ಹೆಸರಿಲ್ಲಿತ್ತು ಗೊತ್ತಾ? SIM ಮಾಲೀಕರು ಇವರೇನಾ?
ಹತ್ಯೆಗೆ ಸಂಬಂಧಿಸಿದಂತೆ ಗಾಣಗಾಪುರ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದರು. ಆದರೀಗ ಆರೋಪಿ ನವನಾತ್ ಮಹಾಪೂರೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಕೊಲೆ ಮಾಡಿದ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ: ದರ್ಶನ್ ಪರವಾಗಿ ಬ್ಯಾಟ್ ಬೀಸಿದ ಸ್ಯಾಂಡಲ್ವುಡ್ ನಟಿಯರು.. ಒಬ್ಬೊಬ್ಬರು ನೀಡಿದ ಹೇಳಿಕೆ ಹೀಗಿದೆ
ನವನಾತ್ ಮಹಾಪೂರೆ ಕುಡಿಯುವ ಚಟಕ್ಕಾಗಿ ಮಹೇಶನ ಹತ್ಯೆಗೈಯ್ದಿದ್ದಾನೆ. ಬಳಿಕ ಆತನ ಬಳಿಯಿದ್ದ 3,600 ರೂಪಾಯಿ ದೋಚಿಕೊಂಡು ಹೋಗಿದ್ದಾನೆ. ಬಳಿಕ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದನು.
ಕೊನೆಗೆ ಪೊಲೀಸರು ದುಧನಿ ಬಳಿ ಆರೋಪಿ ನವನಾತ್‌ನನ್ನ ಬಂಧಿಸಿದ್ದಾರೆ. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ