/newsfirstlive-kannada/media/post_attachments/wp-content/uploads/2025/07/RANYA_RAO.jpg)
ಪರಪ್ಪನ ಅಗ್ರಹಾರ ಪಂಜರದಲ್ಲಿರುವ ಅರಗಿಣಿ, ಚಿನ್ನದ ಚೋರಿ ರನ್ಯಾ ರಾವ್ಗೆ ಮತ್ತೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಈ ಬಾರಿ ಇಡಿ ಅಧಿಕಾರಿಗಳು ದೊಡ್ಡ ಆಘಾತ ನೀಡಿದ್ದಾರೆ. ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಂಬಂಧ ನಟಿಯ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ರನ್ಯಾ ರಾವ್ ಮಾಣಿಕ್ಯನ ಬೆಡಗಿ, ಚಿನ್ನದ ಚೋರಿ. ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸದ್ಯ ಪರಪ್ಪನ ಮಡಿಲಲ್ಲಿ ಕಬ್ಬಿಣದ ಕಂಬಿ ಎಣಿಸುತ್ತಿದ್ದಾಳೆ. ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಗ್ಯಾಂಗ್ನ ಹವಾಲ ದಂಧೆ ಹಾಗೂ ಇನ್ನೀತರ ವ್ಯವಹಾರ ಬಯಲಾಗಿವೆ.
34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಜಪ್ತಿ
ಆಗಾಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನೇನು ತಪ್ಪು ಮಾಡಿಲ್ಲ ಅಂತ ತಗಾದೆ ತೆಗೆಯುತ್ತಾ ಸುದ್ದಿಯಾಗ್ತಿದ್ದ ರನ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ಗೆ ಇ.ಡಿ ಅಧಿಕಾರಿಗಳು ಭಾರಿ ದೊಡ್ಡ ಶಾಕ್ ಕೊಟ್ಟಿದ್ದಾರೆ. ರನ್ಯಾಗೆ ಸೇರಿದ 34.12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಕಲಿ ದಾಖಲೆಗಳನ್ನ ಸೃಷ್ಟಿಸಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ರನ್ಯಾರಾವ್ ಹವಾಲಾ ದಂಧೆ ನಡೆಸುತ್ತಿರೋದು ಇಡಿ ತನಿಖೆಯಲ್ಲಿ ಧೃಢಪಟ್ಟಿದೆ. ಈ ಬೆನ್ನಲ್ಲೇ ಆಸ್ತಿಯನ್ನು ಜಪ್ತಿ ಮಾಡಿದೆ. ಇನ್ನು ಯಾವೆಲ್ಲ ಆಸ್ತಿ ಜಪ್ತಿ ಮಾಡಲಾಗಿದೆ ಅಂತ ನೋಡೋದಾದ್ರೆ..
ರನ್ಯಾಳ ₹34.12 ಕೋಟಿ ಆಸ್ತಿ ಜಪ್ತಿ
- ಬೆಂಗಳೂರು, ತುಮಕೂರಿನಲ್ಲಿರುವ ಸ್ಥಿರಾಸ್ತಿ ಮುಟ್ಟುಗೋಲು
- ಬೆಂಗಳೂರಿನ ಅರ್ಕಾವತಿ ಲೇಔಟ್‌ನಲ್ಲಿರೋ ರನ್ಯಾ ಫ್ಲಾಟ್
- ತುಮಕೂರಿನ ಕೈಗಾರಿಕಾ, ಆನೇಕಲ್‌ನ ಕೃಷಿ ಜಮೀನು ಜಪ್ತಿ
- ಚಿನ್ನದ ಚೋರಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಟ ಪ್ರಕರಣ
- ಪಿಎಂಎಲ್‌ಎ ಕಾಯಿದೆಯಡಿ ಕೇಸ್ ಮಾಡಿ ತನಿಖೆ ನಡೆಸಿದ್ದ ಇಡಿ
- 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು
ಇದನ್ನೂ ಓದಿ:ಬಾಲಕನನ್ನ 50 ಸಲ ಲೈಂಗಿಕವಾಗಿ ಬಳಸಿಕೊಂಡ ಟೀಚರ್.. ಕೋರ್ಟ್ನಲ್ಲಿ ಏನಾಯ್ತು?
ರನ್ಯಾ ರಾವ್‌ರನ್ನು ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಹಿಂದಿರುಗುವ ಸಂದರ್ಭ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಡಿಆರ್‌ಐ ಅಧಿಕಾರಿಗಳು ರನ್ಯಾರಿಂದ 14.2 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಸದ್ಯ ಚಿನ್ನದ ಚೋರಿ ರನ್ಯಾ ರಾವ್ಗೆ ಸಂಬಂಧಿಸಿದ 4 ಆಸ್ತಿಗಳನ್ನು ದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿ ಮುಟ್ಟುಗೋಲು ಹಾಕಿಕೊಂಡಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು ಇಡಿ ಮತ್ಯಾವ ಶಾಕ್ ಕೊಡುತ್ತೋ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ