/newsfirstlive-kannada/media/post_attachments/wp-content/uploads/2024/10/UP-Couple-YOUNG-DHOKA.jpg)
ಓಡುತ್ತಿರೋ ಕಾಲ, ಆಗುತ್ತಿರೋ ವಯಸ್ಸನ್ನ ಯಾರಿಗೂ ತಡೆಯೋಕಾಗಲ್ಲ. ದೆವ್ವ-ಭೂತದ ಸಿನಿಮಾಗಳ ತರ ಅದು-ಇದು ಕುಡಿದು ಯಂಗ್​ ಆಗಿ ಕಾಣೋ ಕಾಲವೂ ಇದಲ್ಲ. ಆದ್ರೆ ಇಲ್ಲಿಬ್ರು ಗಂಡ-ಹೆಂಡತಿ ಅದ್ಯಾವ ಇಂಗ್ಲಿಷ್​ ಸಿನಿಮಾ ನೋಡಿ ಪ್ಲಾನ್​ ಮಾಡಿದ್ರೋ ಗೊತ್ತಿಲ್ಲ. ವಯಸ್ಸಾದ ನಿಮ್ಮನ್ನ ಯಂಗ್​ ಮಾಡ್ತೀವಿ ಅಂತ ಹಲವರಿಗೆ ಮಕ್ಮಲ್​ ಟೋಪಿ ಹಾಕಿದ್ದಾರೆ. ಇವರ ಮಾತನ್ನ ನಂಬಿ 12 ಜೋಡಿ 35 ಕೋಟಿ ರೂಪಾಯಿ ನಾಮ ಹಾಕಿಸಿಕೊಂಡಿದೆ.
ಈ ದಂಪತಿ ಮೂಲತಃ ಉತ್ತರ ಪ್ರದೇಶದವರು. ಗಂಡನ ಹೆಸರು ರಾಜೀವ್ ಕುಮಾರ್ ದುಬೆ. ಹೆಂಡತಿ ರಶ್ಮಿ ದುಬೆ. ಬದುಕ್ಬೇಕು ಅಂದ್ರೆ ದುಡ್ಡು ಮಾಡ್ಬೇಕು.. ಬೆವರು ಸುರಿಸಿ, ನ್ಯಾಯವಾಗಿ ದುಡ್ಡು ಮಾಡೋದು ಕಷ್ಟದ ದಾರಿ. ಆದರೆ ಮಾತಲ್ಲೇ ಮರಳು ಮಾಡಿ ಜನರನ್ನ ಯಾಮಾರಿಸೋದು ಸುಲಭ ಅಂತ ಆ ದಾರಿಯನ್ನೇ ಜೋಡಿ ಆಯ್ಕೆ ಮಾಡ್ಕೊಂಡಿತ್ತು.
ಇದನ್ನೂ ಓದಿ: ವಾರಕ್ಕೊಮ್ಮೆ ಹೆಡ್​ ಮಸಾಜ್​ ಮಾಡಿಕೊಳ್ಳಿ; ಇದರಿಂದ ಆಗುವ ಲಾಭಗಳೇನು ಗೊತ್ತಾ?
ಆಫರ್​.. ಆಫರ್​.. ಆಫರ್​!
ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ರಿವೈವಲ್ ವರ್ಲ್ಡ್ ಅಂದ್ರೆ ಪುನರುಜ್ಜೀವನ ಪ್ರಪಂಚ ಅನ್ನೋ ಥೆರಪಿ ಸೆಂಟರ್ ಓಪನ್ ಮಾಡಲಾಗಿತ್ತು. ಬನ್ನಿ ನಮ್ ಹತ್ರ ಬನ್ನಿ. ನಿಮ್ಗೆ ವಯಸ್ಸಾಗೋದನ್ನ ನಾವು ತಡೀತೀವಿ. ನಿಮ್ಗೆ 60 ವರ್ಷ ಆಗಿದ್ರೆ 25 ವರ್ಷದವ್ರನ್ನಾಗಿ ಮಾಡ್ತೀವಿ. ನಮ್ಮ ಬಳಿ ಥೆರಪಿ ತಗೊಂಡ್ರೆ ನಿಮ್ಗೆ ವಯಸ್ಸೇ ಆಗಲ್ಲ. ವಯಸ್ಸಾಗಿದ್ರೂ ನೀವು ಮತ್ತೆ ಯಂಗ್ ಆಗ್ತೀರಾ. ನಮ್ ಹತ್ರ ಇಸ್ರೇಲ್ ಮೇಡ್ ಟೈಮ್ ಮೆಷೀನ್ ಇದೆ. ನಿಮ್ ಏಜ್‌ನ ಕಡಿಮೆ ಮಾಡ್ತೀವಿ. ಜೀವನ ಪೂರ್ತಿ ಯುವಕರಾಗಿರಿ ಅಂತ ಆಫರ್ ನೀಡ್ತಿದ್ರು. ವಾತಾವರಣ ತುಂಬಾ ಮಲಿನ ಆಗ್ತಿರೋದ್ರಿಂದ ಎಲ್ರಿಗೂ ಬೇಗ ವಯಸ್ಸಾಗ್ತಿದೆ. ನಾವು ಕೊಡೋ ಆಕ್ಸಿಜನ್ ಥೆರಪಿ ತಗೊಂಡ್ರೆ ತಿಂಗಳಲ್ಲಿ ನಿಮ್ಮ ಯೌವ್ವನ ಮರಳಿ ಪಡೀಬಹುದು ಅಂತ ಕತೆ ಹೊಡೆದ್ರು. ಪ್ಯಾಕೇಜ್‌ಗಳನ್ನೂ ಆಫರ್ ಮಾಡಿದ್ರು. 6 ಸಾವಿರಕ್ಕೆ 10 ಸೆಶನ್. 90 ಸಾವಿರಕ್ಕೆ 3 ವರ್ಷದ ರಿವಾರ್ಡ್ ಸಿಸ್ಟಮ್ ಅಂತ ಮಕ್ಮಲ್ ಟೋಫಿ ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/10/UP-Couple-YOUNG-DHOKA-1.jpg)
12 ಜೋಡಿಗೆ ಖತರ್ನಾಕ್​ ದಂಪತಿಯಿಂದ ದುಬಾರಿ ನಾಮ!
ಒಬ್ರಲ್ಲಾ ಇಬ್ರಲ್ಲಾ 12 ಜೋಡಿ ಇವ್ರ ಮಾತು ನಂಬಿ ದುಡ್ಡು ಕೊಟ್ಟು ವಯಸ್ಸು ಕಡಿಮೆ ಮಾಡ್ಕೊಳ್ಳೋಣ ಅಂತ ಬಂದಿದ್ದಾರೆ. ಆದ್ರೆ ಇವ್ರ ಆಟ ಬಯಲಾಗಿದ್ದು ಇವ್ರ ಬಳಿ ಬಂದು ದುಡ್ಡು ಕೊಟ್ಟು ಕೊನೆಗೆ ಮೋಸಹೋದೆ ಅಂತ ಜ್ಞಾನೋದಯವಾದ ಇವ್ರದ್ದೇ ಕಸ್ಟಮರ್ ಒಬ್ರಿಂದ.
ಇದನ್ನೂ ಓದಿ: ಪತಿ ಉದ್ಯಮಿ, ಪತ್ನಿ ಚಿತ್ರನಟಿ; ದೆಹಲಿಯಲ್ಲಿದೆ 173 ಕೋಟಿ ರೂಪಾಯಿಯ ಬಂಗಲೆ, ಯಾರಿವರು? ಊಹಿಸಬಲ್ಲಿರಾ?
35 ಕೋಟಿ ನಾಮ!
ರೇಣು ಸಿಂಗ್ ಎಂಬಾಕೆಗೆ ಈ ಜೋಡಿ ಹೀಗೆ ಮಾತಲ್ಲೇ ಮೋಡಿ ಮಾಡಿ, ಮೋಸ ಮಾಡಿ 10 ಲಕ್ಷದ 75 ಸಾವಿರ ವಂಚಿಸಿತ್ತು. ಹೀಗಾಗಿ ರೇಣು ಸ್ಟೇಷನ್ ಮೆಟ್ಟಿಲು ಹತ್ತಿ ಕಂಪ್ಲೇಂಟ್ ಕೊಟ್ರು. ಜೊತೆಗೆ ನೂರಾರು ಮಂದಿಯಿಂದ ಇದೇ ರೀತಿ ಬರೋಬ್ಬರಿ 35 ಕೋಟಿಯನ್ನ ರಾಜೀವ್ ಹಾಗೆ ರಶ್ಮಿ ದಂಪತಿ ದೋಚಿದ್ದಾರೆ ಅಂತ ರೇಣು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕಂಪ್ಲೇಂಟ್‌ನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು ಈ ಖತರ್ನಾಕ್ ಜೋಡಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ಗಂಡ - ಹೆಂಡ್ತಿ ಇಬ್ರೂ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಅನ್ನೋ ಮಾಹಿತಿಯಿದೆ.
ಜೀವನದಲ್ಲಿ ಪವಾಡಗಳು, ಮಿರಾಕಲ್ ನಡೀಬಹುದು. ಆದ್ರೆ ವಯಸ್ಸು ಕಡಿಮೆಯಾಗೋಕೆ ಇದುವರೆಗೂ ಯಾವ ವಿಜ್ಞಾನಿಗಳೂ ಏನನ್ನೂ ಕಂಡು ಹಿಡಿದಿಲ್ಲ. ವಯಸ್ಸಾಗದೇ ಇರೋಕೆ ಇಲ್ಲಿ ಇಂದ್ರನ ದೇವಲೋಕದಂತೆ ಅಮೃತವೂ ಸಿಗೋದಿಲ್ಲ. ವಯಸ್ಸಾಗ್ತಿದೆ ಅನ್ನೋದು ಮುಖ್ಯ ಅಲ್ಲ. ವಯಸ್ಸಾಗ್ತಿದ್ರೂ ಜೀವನ ಪ್ರತೀ ಕ್ಷಣವನ್ನ, ದಿನವನ್ನ ನಾವು ಅನುಭವಿಸೋದೆ, ಖುಷಿಯಿಂದ ಇರೋದೆ ಜೀವನ.. ಏನಂತೀರಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us