ಕೇರಳದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ದುರಂತ.. 35 ಜನ ಕಣ್ಮರೆ; ಕೊಚ್ಚಿ ಹೋಗಿರುವ ಶಂಕೆ

author-image
Veena Gangani
Updated On
ಕೇರಳದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ದುರಂತ.. 35 ಜನ ಕಣ್ಮರೆ; ಕೊಚ್ಚಿ ಹೋಗಿರುವ ಶಂಕೆ
Advertisment
  • ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ ನಿವಾಸಿಗಳು
  • ನೋಡ ನೋಡುತ್ತಿದ್ದಂತೆ ನದಿಗೆ ಬಿದ್ದ ಮೂರಂತಸ್ತಿನ ಕಟ್ಟಡ
  • ಕುಲುವಿನ ನಿರ್ಮಲ್​ನಲ್ಲಿ ನೀರಿನಲ್ಲಿ ಕೊಚ್ಚಿ ಹೋದ 19 ಜನ

ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಘಟನೆ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಹೌದು, ಹಿಮಾಚಲದ ಕುಲು ನಗರದ ಬಳಿ ಭಾರೀ ಮೇಘಸ್ಫೋಟ ಸಂಭವಿಸಿದೆ.

publive-image

ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ.. ರಾಜ್ಯದ 5 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

ಮೇಘಸ್ಫೋಟದ ಪರಿಣಾಮ ಕುಲುವಿನ ನಿರ್ಮಲ್​ನಲ್ಲಿ ಸುಮಾರು 19 ಜನರು ಕೊಚ್ಚಿ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಭಾರಿ ಮಳೆ ಪರಿಣಾಮ ಮಂಡಿ ಜಿಲ್ಲೆಯಲ್ಲಿ ಹಲವು ಮನೆ ಮತ್ತು ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.


">August 1, 2024

ಮೇಘಸ್ಫೋಟಕ್ಕೆ ಒಟ್ಟು 35 ಜನ ಕಣ್ಮರೆಯಾಗಿದ್ದಾರೆ. ಇದರಲ್ಲಿ ಕೆಲವರು ಸತ್ತಿರೋ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಜೊತೆಗೆ ನೋಡ ನೋಡುತ್ತಿದ್ದಂತೆ ಮೂರಂತಸ್ತಿನ ಕಟ್ಟಡ ನದಿಯಲ್ಲಿ ಕುಸಿದು ಕೊಚ್ಚಿ ಹೋಗಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ  ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ದೌಡಾಯಿಸಿದೆ. ಜಿಲ್ಲಾಧಿಕಾರಿ ಅನುಪಮ್ ಕಶ್ಯಪ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಗಾಂಧಿ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment