/newsfirstlive-kannada/media/post_attachments/wp-content/uploads/2025/06/cheathn.jpg)
ಹಾಸನದಲ್ಲೊಂದು ವಿದ್ರಾವಕ ಘಟನೆ ನಡೆದು ಹೋಗಿದೆ. ಹೆಂಡತಿ ಊಟ ಬಡಿಸುತ್ತಿದ್ದಾಗಲೇ ಗಂಡ ಹೃದಯಾಘಾತವಾಗಿದೆ. ಚೇತನ್ (35) ಹೃದಯಾಘಾತದಿಂದ ಸಾವನ್ನಪ್ಪಿದ್ದ ದುರ್ದೈವಿ.
ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ನಾ ನಿನ್ನ ಬಿಡಲಾರೆ ದುರ್ಗಾಗೆ ಸರ್ಪ್ರೈಸ್ ಕೊಟ್ಟ ಸೀರಿಯಲ್ ತಂಡ.. ಏನದು?
ಮೃತ ಚೇತನ್ ನಗರದ ಹಳೇ ಬಸ್ ನಿಲ್ದಾಣ ಸಮೀಪ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಚೇತನ್ ಮೂಲಕತಃ ಕಿಕ್ಕೇರಿ ಮೂಲದವನು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಮಗು ಜೊತೆ ವಾಸವಿದ್ದ. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಲೇಂದು ಪತ್ನಿ ಕರೆದಿದ್ದಾರೆ. ಊಟಕ್ಕೆ ಕುಳಿತುಕೊಳ್ಳುವಾಗ ಚೇತನ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ.
ಎದೆ ನೋಯುತ್ತಿದೆ ಎಂದು ಹೇಳಿ ಮೇಲೆ ಎದ್ದೇಳುವಾಗಲೇ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿಯೇ ಅಘಾತದಿಂದ ಚೇತನ್ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ