/newsfirstlive-kannada/media/post_attachments/wp-content/uploads/2024/10/ENCOUNTER-IN-CHATTHISAGARH.jpg)
ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ ಒಂದು ಭಾರೀ ಸದ್ದು ಮಾಡ್ತಿದೆ. ಮಾವೋವಾದಿ ದಂಗೆಯ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಸಿಕ್ಕಿದೆ.ನಕ್ಸಲರ ವಿರುದ್ಧ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯೇ ರಣರೋಚಕವಾಗಿದ್ದು. ಒಟ್ಟು 36 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.
ನಿರಂತರ ಕಾರ್ಯಾಚರಣೆಯಲ್ಲಿ 36 ನಕ್ಸಲರು ಫಿನಿಶ್​
ಈ ಗುಂಡಿನ ಸದ್ದು ಸುಮಾರು 36 ನಕ್ಸಲರ ಜೀವವನ್ನ ತೆಗೆದಿದೆ.. ಡಿಆರ್‌ಜಿ ಅಂದ್ರೆ ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಎಸ್‌ಟಿಎಫ್ ವಿಶೇಷ ಕಾರ್ಯಪಡೆ.. ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.. ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಭಾರೀ ಘರ್ಷಣೆಯಲ್ಲಿ 36 ನಕ್ಸಲರು ಎನ್​ಕೌಂಟರ್​ ಆಗಿದ್ದಾರೆ.
ಇದನ್ನೂ ಓದಿ:ನಿಮ್ಗೆ 60 ವರ್ಷ ಆಗಿದ್ರೆ 25 ವರ್ಷ ಮಾಡ್ತೀವಿ; ಈ ಕಿಲಾಡಿ ಜೋಡಿಯಿಂದ ₹35 ಕೋಟಿ ಮಕ್ಮಲ್ ಟೋಪಿ!
ಛತ್ತೀಸ್‌ಗಢದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಘರ್ಷಣೆ
ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರನ್ನ ಹತ್ಯೆ ಮಾಡಲಾಗಿದೆ. ದಾಂತೇವಾಡ-ನಾರಾಯಣಪುರ ಜಿಲ್ಲೆಗಳ ಗಡಿಯ ಅಬುಜ್‌ಮದ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈ ಭೀಕರ ಎನ್‌ಕೌಂಟರ್ ನಡೆದಿದ್ದು, ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಿಂದ ನಕ್ಸಲರನ್ನು ಸುತ್ತುವರಿದ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾವೋವಾದಿಗಳು ಮೃತಪಟ್ಟಿದ್ದಾರೆ. ಅರಣ್ಯದೊಳಗೆ ನುಸುಳಿರುವ ನಕ್ಸಲರ ಪತ್ತೆಗೆ ಶೋಧ ಮುಂದುವರಿದಿದೆ. ಎನ್‌ಕೌಂಟರ್ ಸ್ಥಳದಿಂದ ಎಕೆ - 47 ರೈಫಲ್ ಸೇರಿ ಅಪಾರ ಪ್ರಮಾಣ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮನೆಯ ಟಾಯ್ಲೆಟ್ ಮೇಲೂ ಟ್ಯಾಕ್ಸ್.. ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆ; ನಿರ್ಮಲಾ ಸೀತಾರಾಮನ್ ಶಾಕ್!
ಈ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾವೋವಾದಿಗಳು ನೆರೆದಿದ್ದಾರೆ ಎಂಬ ಗುಪ್ತಚರ ವರದಿಗಳ ನಂತರ ಈ ಕಾರ್ಯಾಚರಣೆಗೆ ಇಳಿಯಲಾಯ್ತು. ಇನ್ನು ಎನ್‌ಕೌಂಟರ್ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ದೊಡ್ಡ ಕಾರ್ಯಾಚರಣೆ ಎಂದಿರುವ ಅವರು, ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us