/newsfirstlive-kannada/media/post_attachments/wp-content/uploads/2023/09/Pregnant_woman.jpg)
ಚೀನಾದ ಝೇಜಿಯಾಂಗ್ ಪ್ರಾಂತ್ಯದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. 36 ವರ್ಷದ ಮಹಿಳೆ ತನಗೂ ಮಗು ಬೇಕು ಎಂದು ಪತಿಯೊಂದಿಗೆ ಅನೇಕ ಆಸ್ಪತ್ರೆ ಸುತ್ತಿ ಬಂದಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಅವರ ಜೀವನದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆರೋಗ್ಯದಲ್ಲಿ ಚೂರು ಏರುಪೇರಾದಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಮಹಿಳೆ. ಕೂಡಲೇ ವೈದ್ಯರು ತಪಾಸಣೆ ಮಾಡಿ ನೋಡಿದಾಗ ಅವರ ಆಗಲೇ 8 ತಿಂಗಳ ಗರ್ಭಣಿ ಎಂಬುದು ತಿಳಿದುಬಂದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನಲ್ಲಿ ವರದಿಯಾದ ಪ್ರಕಾರ. ಮಹಿಳೆಯ ಹೆಸರು ಗೊಂಗ್ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅವರು ತಮ್ಮ ಪತಿಯೊಂದಿಗೆ ಮಕ್ಕಳಿಗಾಗಿ ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದ್ದರು. ಅದಕ್ಕಾಗಿ ಇವಿಎಫ್ ಚಿಕಿತ್ಸೆಯನ್ನು ಕೂಡ ತೆಗೆದುಕೊಂಡಿದ್ದರು. ಈ ಸಮಯದಲ್ಲಿ ವೈದ್ಯರು ಗೊಂಗ್ಗೆ ತೂಕ ಇಳಿಸಿಕೊಳ್ಳಲು ಹೇಳಿದ್ದಾರೆ. ಇದೇ ಕಾರಣಕ್ಕೆ ನೀವು ತಾಯಿಯಾಗಲು ಸಾಧ್ಯವಾಗುತ್ತಿಲ್ಲೆ ಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ:74 ವರ್ಷದ 100 ರೂಪಾಯಿ ನೋಟು.. ಎಷ್ಟು ಲಕ್ಷಕ್ಕೆ ಹರಾಜು ಆಗಿದೆ ಅಂದರೆ.. ಅಬ್ಬಬ್ಬಾ!
ಇದೆಲ್ಲಾ ಆದ ಬಳಿ ಗೊಂಗ್ ನಾನು ಮಗುವನ್ನು ಹೊಂದುವುದು ಒಂದು ಕನಸೇ ಸರಿ ಎಂದು ಎಲ್ಲವನ್ನು ಮರೆತು ಕುಳಿತಾಗ ಒಂದು ಅನಿರೀಕ್ಷಿತ ತಿರುವ ಅವರ ಬದುಕಲ್ಲಿ ನಡೆದು ಹೋಗಿದೆ. ಕಳೆದ ಡಿಸೆಂಬರ್ ಆರಂಭದಲ್ಲಿ ಗೊಂಗ್ ಕೈಯಗಳು ಮರಗಟ್ಟಿದ ರೀತಿ ಅನುಭವಾಗಿದೆ, ಹೀಗಾಗಿ ಬ್ಲಡ್ ಪ್ರೆಶ್ಯರ್ನ್ನು ತಪಾಸಣೆ ಮಾಡಿಕೊಳ್ಳಲು ಆಕೆ ಒಂದು ಕ್ಲಿನಿಕ್ಗೆ ಹೋಗಿದ್ದಾರೆ. ಇದೇ ವೇಳೆ ತಪಾಸಣೆ ಮಾಡಿದ ವೈದ್ಯರಿಗೆ ಗೊಂಗ್ ಹಲವು ತಿಂಗಳಿಂದ ಋತುಮತಿಯಾಗದಿರುವುದು ಕಂಡು ಬಂದಿದೆ.
ಕೂಡಲೇ ಅವರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದ್ದಾರೆ. ಸ್ಕ್ಯಾನಿಂಗ್ನಲ್ಲಿ ಬಂದ ರಿಪೋರ್ಟ್ ಕಂಡು ವೈದ್ಯರು ಕೂಡ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಗೊಂಗ್ 8.5 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. 8.5 ತಿಂಗಳ ಭ್ರೂಣ 2 ಕೆಜಿಯಷ್ಟು ತೂಕ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ.. ಅಮೆರಿಕಾದಲ್ಲಿ ಈಗ ಬಿಂದಾಸ್ ವಾಕ್; ಫೋಟೋ ಬಿಡುಗಡೆ!
ಗೊಂಗ್ಗೆ ತೀವ್ರವಾದ ರಕ್ತದೊತ್ತಡ ಇರುವುದರಿಂದ ವೈದ್ಯರು ನಿರಂತರ ನಾಲ್ಕು ಗಂಟೆಗಳವರೆಗೆ ಆಪರೇಷನ್ ಮಾಡಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯದಿಂದ ಇರುವುದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ