/newsfirstlive-kannada/media/post_attachments/wp-content/uploads/2025/01/PRAYAGARAJ-TRAIN.jpg)
ನಾಳೆ ಅಂದ್ರೆ ಜನವರಿ 29 ರಂದು ಮೌನಿ ಅಮವಾಸ್ಸಯೆಯಂದು ಪ್ರಯಾಗರಾಜ್ನಲ್ಲಿ ಎರಡನೇ ಅಮೃತ ಸ್ನಾನ ನಡೆಯಲಿದೆ. ಈ ದಿನ ಗಂಗಾನದಿಯಲ್ಲಿ ಮಿಂದೆದ್ದರೆ ವಿಶೇಷ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಶತಮಾನಗಳಿಂದಲೂ ಇದೆ. ಹೀಗಾಗಿ ಪ್ರಯಾಗರಾಜ್ಗೆ ದಶದಿಕ್ಕುಗಳಿಂದಲೂ ಭಕ್ತಾದಿಗಳು ಹರಿದು ಬರುವ ಸಂಭವವಿದ್ದು. 10 ಕೋಟಿಗೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಹೀಗಾಗಿಯೇ ರೈಲ್ವೆ ಇಲಾಖೆಯಿಂದ ಟ್ರೈನ್ಗಳ ವ್ಯವಸ್ಥೆಯಾಗಿದೆ. ನಾಳೆ ರೈಲ್ವೆ ಇಲಾಖೆಯಿಂದ ಸುಮಾರು 360 ರಿಂದ 400 ಟ್ರೈನ್ಗಳು ಸಂಚಾರ ಮಾಡಲಿವೆ ಎಂದು ಹೇಳಲಾಗಿದೆ.
ಜನವರಿ 29 ರಂದು ಪ್ರಯಾಗರಾಜ್ ನ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ನಡೆಯಲಿದೆ. ಮೌನಿ ಅಮಾವಾಸ್ಯೆಯ ದಿನ 8-10 ಕೋಟಿ ಜನರು ಪ್ರಯಾಗರಾಜ್ ಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಕೂಡ ಪ್ಲ್ಯಾನ್ ಮಾಡಿಕೊಂಡಿದೆ. ಜನವರಿ 29 ರಂದು ದೇಶದ ಎಲ್ಲ ದಿಕ್ಕುಗಳಿಂದ ಪ್ರತಿ ನಾಲ್ಕು ನಿಮಿಷಗಳಿಗೆ ಒಂದರಂತೆ ರೈಲುಗಳು ಪ್ರಯಾಗರಾಜ್ ಗೆ ಬರಲಿವೆ.
ಇದನ್ನೂ ಓದಿ: ಪಥ ಬದಲಿಸಿಲಿವೆಯಾ ಗಂಗೆ, ಯಮುನೆ? ಗಂಗಾ ಮಾತೆಯ ಸ್ಥಿತಿ ನಿಜಕ್ಕೂ ಕಣ್ಣಿನಿಂದ ನೋಡಲು ಆಗಲ್ವಾ? ಏನಿದು ಭಯಾನಕ ಭವಿಷ್ಯ!
ಜನವರಿ 29 ರಂದು 360- 400 ಟ್ರೈನ್ ಗಳು ಪ್ರಯಾಗರಾಜ್ ಗೆ ಬರಲಿವೆ. ಪ್ರಯಾಗರಾಜ್ ನಲ್ಲಿ ಒಟ್ಟು 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಿಂದ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಿಂದ ಪ್ರಯಾಗರಾಜ್ ಗೆ ಸ್ಲೀಪರ್ ಕ್ಲಾಸ್ ನಲ್ಲಿ 1 ಸಾವಿರ ರೂಪಾಯಿ ಟಿಕೆಟ್ ದರ ಇದ್ದರೇ, 3 AC ಟಿಕೆಟ್ ಗೆ 2,200 ರೂಪಾಯಿ, 2AC ಟಿಕೆಟ್ ಗೆ 3,200 ರೂಪಾಯಿ ದರ ಇದೆ.
ಆದರೆ ಬೆಂಗಳೂರಿನಿಂದ ಈಗ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗಲು 25 ರಿಂದ 30 ಸಾವಿರ ರೂಪಾಯಿ ಪ್ಲೈಟ್ ಟಿಕೆಟ್ ದರ ಇದೆ. ವಿಮಾನಕ್ಕಿಂತ ರೈಲು ಟಿಕೆಟ್ ದರ ಯಾವಾಗಲೂ ಅಗ್ಗ. ಜನ ಸಾಮಾನ್ಯರು ಸಂಚರಿಸಲು ರೈಲ್ವೆ ಟಿಕೆಟ್ ದರ ಅನುಕೂಲಕಾರಿ. ಹೀಗಾಗಿ ರೈಲ್ವೆ ಇಲಾಖೆ ಈ ಭಾರಿಯ ಮಹಾಕುಂಭಮೇಳಕ್ಕೆ ವಿಶೇಷ ಟ್ರೈನ್ ಗಳನ್ನು ಓಡಿಸುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ವಿಶ್ರಾಂತಿ ಪಡೆಯಲು ಜರ್ಮನ್ ಟೆಂಟ್ ಆಳವಡಿಸಿ ವಿಶೇಷ ವ್ಯವಸ್ಥೆ ಮಾಡಿದೆ. ಟ್ರೈನ್ ಗಳ ಮೂಲಕವೇ ಲಕ್ಷಾಂತರ ಮಂದಿ ನಿತ್ಯ ಪ್ರಯಾಗರಾಜ್ ಗೆ ಆಗಮಿಸುತ್ತಿದ್ದಾರೆ. ಮೌನಿ ಅಮಾವಾಸ್ಯೆಯ ಬಳಿಕವೂ 150 ವಿಶೇಷ ಟ್ರೈನ್ ಗಳನ್ನು ರೈಲ್ವೆ ಇಲಾಖೆ ಪ್ರಯಾಗರಾಜ್ ನಿಂದ ಓಡಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ