Advertisment

ಗಾರೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಬರ್ಬರ ಕೊಲೆ.. ಹಲ್ಲೆ ನಡೆಸಿ, ಕಲ್ಲು ಎತ್ತಿ ಹಾಕಿ ಹತ್ಯೆ

author-image
AS Harshith
Updated On
ಗಾರೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಬರ್ಬರ ಕೊಲೆ.. ಹಲ್ಲೆ ನಡೆಸಿ, ಕಲ್ಲು ಎತ್ತಿ ಹಾಕಿ ಹತ್ಯೆ  
Advertisment
  • ನಾಲ್ಕು ಮಕ್ಕಳ ತಂದೆಯನ್ನು ಕೊಂದ ಹಂತಕರು
  • ಮೊದಲಿಗೆ ಗಲಾಟೆ, ಆಮೇಲೆ ಹಲ್ಲೆ, ನಂತರ ಕೊಲೆ
  • 37 ವರ್ಷದ ವ್ಯಕ್ತಿ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಕೊಲೆ ನಡೆದ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. 37 ವರ್ಷದ ಪನ್ನಿರ್ ಸೆಲ್ವಂ‌ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

Advertisment

ಪನ್ನೀರ್ ಸೆಲ್ವಂ ಮಲ್ಲೇಶ್ವರಂನ ಎಂಡಿ ಬ್ಲಾಕ್ ನಿವಾಸಿಯಾಗಿದ್ದು, ನಿನ್ನೆ ಸಂಜೆ ಕೆಸಿ ಜನರಲ್ ಆಸ್ಪತ್ರೆ ಪಾರ್ಕ್ ನಲ್ಲಿ ಕೊಲೆ ನಡೆದಿದೆ. ಆರೋಪಿಗಳು ಕಲ್ಲು ಎತ್ತಿಹಾಕಿ ಕೊಲೆ‌ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್ ವಿಚಾರಣಾಧೀನ ಕೈದಿ ನಂಬರ್​​ ಮೇಲೂ ಅಭಿಮಾನಿಗಳ ಕಣ್ಣು.. ಇನ್ಮುಂದೆ ವಿಶೇಷವಾಗಿ ಬಳಸಲು ನಿರ್ಧಾರ..!

ಪನ್ನೀರ್ ಸೆಲ್ವಂ ಗಾರೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ. ಹೆಂಡತಿ, ನಾಲ್ಕು ಚಿಕ್ಕ ಮಕ್ಕಳ ಜೊತೆ ವಾಸವಾಗಿದ್ದನು. ನಿನ್ನೆ ಸಂಜೆ ಪಾರ್ಕ್ ಬಳಿ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು ಪನ್ನೀರ್ ಸೆಲ್ವಂ ಮೇಲೆ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

Advertisment

ಇದನ್ನೂ ಓದಿ: ಹೆತ್ತ ಮಗಳನ್ನೇ ಮನೆಯಲ್ಲಿ ಹೂತು ಹಾಕಿದ ತಾಯಿ.. ತನಿಖೆ ವೇಳೆ ಕೊಟ್ಟ ಕಾರಣ ಏನು ಗೊತ್ತಾ?

ಸದ್ಯ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ. ಕೊಲೆ ಮಾಡಿದ್ದು ಯಾರು? ಯಾವ ಕಾರಣ? ಎಲ್ಲಾ ತನಿಖೆ ವೇಳೆ ಬಯಲಿಗೆ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment