newsfirstkannada.com

ಅಕ್ರಮವಾಗಿ 38 ಲಕ್ಷ ರೂ. ಸಾಗಾಟ; ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕಾರು ಚಾಲಕ

Share :

Published March 21, 2024 at 10:32pm

  ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಚೆಕ್ ಪೋಸ್​ನಲ್ಲಿ ರೇಡ್‌

  ಕಾರು ತಪಾಸಣೆ ವೇಳೆ 38 ಲಕ್ಷ ದಾಖಲೆ ಇಲ್ಲದ ಹಣ ಪತ್ತೆ

  ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, DYSP ರಾಜಣ್ಣ ಭೇಟಿ

ಚಿತ್ರದುರ್ಗ: 2024 ಲೋಕಸಭೆಗೆ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಈ ಬೆನ್ನಲ್ಲೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 38 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಚೆಕ್ ಪೋಸ್ಟ್​ ಬಳಿ ಅಧಿಕಾರಿಗಳು ಕಾರು ತಪಾಸಣೆ ಮಾಡುತ್ತಿದ್ದರು. ಈ ವೇಳೆ ದಾಖಲೆ ಇಲ್ಲದ 38 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಕೂಡಲೇ ಹಣವನ್ನು ವಶಕ್ಕೆ ಪಡೆದುಕೊಂಡ ಎಫ್​ಎಸ್​ಟಿ ಟೀಮ್ ಪರಿಶೀಲನೆ ನಡೆಸುತ್ತಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಹಾಗೂ DYSP ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೇಸ್​​ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮವಾಗಿ 38 ಲಕ್ಷ ರೂ. ಸಾಗಾಟ; ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕಾರು ಚಾಲಕ

https://newsfirstlive.com/wp-content/uploads/2024/03/money-2.jpg

Load More