/newsfirstlive-kannada/media/post_attachments/wp-content/uploads/2024/12/Maha-Vajiralongkorn-1.jpg)
ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಸಾಮಾನ್ಯವಾಗಿ ಜಗತ್ತಿನ ಶ್ರೀಮಂತ ವ್ಯಕ್ತಿಯ, ಉದ್ಯಮಿಯ ಬಗ್ಗೆ ಮಾಹಿತಿಗಳು ಮುನ್ನೆಲೆಗೆ ಬರುವುದು ಸಹಜ. ಆದ್ರೆ ಇಂದು ನಾವು ನಿಮಗೆ ಜಗತ್ತಿನ ಅತ್ಯಂತ ಶ್ರೀಮಂತ ರಾಜನ ಬಗ್ಗೆ ಒಂದು ವಿಶೇಷತೆಯನ್ನು ಇಲ್ಲಿ ತಿಳಿಸಿಲಿದ್ದೇವೆ. ಆ ಒಂದು ದೇಶದ ರಾಜನನ್ನು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ರಾಜ ಎಂದು ಕರೆಯಲಾಗುತ್ತದೆ. ಇವರ ಬಳಿ ಇರುವ ಕಾರುಗಳ, ಏರೋಪ್ಲೇನ್​ಗಳ ಕಲೆಕ್ಷನ್ ನೋಡಿದ್ರೆ ಎಂತವರೂ ಕೂಡ ದಂಗಾಗಿ ಹೋಗಬೇಕು. ಆ ಹಂತದ ಐಷಾರಾಮಿ ಬದುಕನ್ನು ಬದುಕುತ್ತಿದ್ದಾರೆ ಥೈಲ್ಯಾಂಡ್​ನ ಮಹಾ ವಜಿರಲೊಂಗ್‌ಕಾರ್ನ್ ​. ಇವರನ್ನು ಕಿಂಗ್ ರಾಮಾ 10 (ಟೆನ್) ಅಂತಲೂ ಕೂಡ ಕರೆಯುತ್ತಾರೆ. ಇವರು ಹೆಚ್ಚು ಪ್ರಚಲಿತದಲ್ಲಿರೋದು ಅವರ ಐಷಾರಾಮಿ ಬದುಕಿಂದ ಹಾಗೂ ಅವರು ಹೊಂದಿರುವ ಆಸ್ತಿಯಿಂದಾಗಿ.
ಇವರನ್ನು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ರಾಜ ಎಂದು ಕರೆಯಲಾಗುತ್ತದೆ. ಅವರ ಇಡೀ ಸಾಮ್ರಾಜ್ಯವೇ ಮುತ್ತು, ರತ್ನ, ವಜ್ರಾಭರಣಗಳಿಂದ ತುಂಬಿ ಹೋಗಿದೆ. ದೊಡ್ಡ ದೊಡ್ಡ ಎಸ್ಟೇಟ್​ಗಳ ಒಡೆಯ ಈ ರಾಜ. ಇವರ ಒಟ್ಟು ಅಸ್ತಿ ಸುಮಾರು 40 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 3.2 ಲಕ್ಷ ಕೋಟಿ ರೂಪಾಯಿಗಳು.
ರಾಯಲ್ ಫ್ಯಾಮಿಲಿಯಿಂದಲೇ ಬಂದ ಇವರಿಗೆ ವಂಶಪರಂಪರೆಯಾಗಿ ಬಂದ ಆಸ್ತಿಯೂ ಈಗ ಮತ್ತಷ್ಟು ಹೆಚ್ಚಾಗಿದೆ. ಥೈಲ್ಯಾಂಡ್​​ನಲ್ಲಿ ಸುಮಾರು 16,210 ಎಕರೆಯಷ್ಟು ಭೂಮಿಗೆ ಈ ರಾಜ ಒಡೆಯ.ಬ್ಯಾಂಕಾಕ್​ನಲ್ಲಿಯೇ ಸುಮಾರು 17 ಸಾವಿರದಷ್ಟು ಆಸ್ತಿ ಪಾಸ್ತಿಗಳನ್ನು ಈ ರಾಜ ಹೊಂದಿದದಾರೆ.ಥೈಲ್ಯಾಂಡ್​ನ ಸೈಮ್ ಕಮರ್ಷಿಯಲ್​ ಬ್ಯಾಂಕ್​ನಲ್ಲಿ ಶೇಕಡಾ 23 ರಷ್ಟು ಷೇರುಗಳನ್ನು ಇವರು ಹೊಂದಿದ್ದಾರೆ. ಇದು ಥೈಲ್ಯಾಂಡ್​ನ ಎರಡನೇ ಅತಿದೊಡ್ಡ ಹಣಕಾಸು ಸಂಸ್ಥೆ. ಇದರ ಜೊತೆಗೆ ಥೈಲ್ಯಾಂಡ್​ನ ಅತಿದೊಡ್ಡ ಕೈಗಾರಿಕಾ ಸಂಘಟನೆಯಾದ ಸೈಮ್ ಸಿಮೆಂಟ್​ ಗ್ರೂಪ್​ನಲ್ಲಿ ಈ ರಾಜರ ಶೇಕಡಾ 33.3ರಷ್ಟು ಷೇರುಗಳು ಇವೆ.
ಇದನ್ನೂ ಓದಿ: ₹50 ಕೋಟಿ ಇದ್ರೂ ಬಾಡಿಗೆ ಮನೆಯೇ ಬೆಸ್ಟ್.. ಸ್ವಂತ ಮನೆ ಬೇಡ; ಕೋಟ್ಯಾಧಿಪತಿ ಪ್ಲಾನ್ ಏನು ಗೊತ್ತಾ? VIDEO
ಇದು ಮಾತ್ರವಲ್ಲ ರಾಜ ವಜಿರಾಲೊಂಗ್​ಕಾರ್ನ್​ ಬಳಿ ಜಗತ್ತಿನ ಸರ್ವಶ್ರೇಷ್ಠ ವಜ್ರದಿಂದ ಸಿದ್ಧಗೊಂಡಿರುವ 545.67 ಕ್ಯಾರೆಟ್​ ಗೊಲ್ಡನ್ ಜುಬ್ಲಿ ಡೈಮಂಡ್​ ಇದೆ. ಇದರ ಬಲೆ ಬರೊಬ್ಬರಿ 98 ಕೋಟಿ ರೂಪಾಯಿ. ಈ ರಾಜನ ಐಷಾರಾಮಿ ಬದುಕು ಇಷ್ಟಕ್ಕೆ ಸೀಮಿತವಾಗಿಲ್ಲ ಅವರು ಹೊಂದಿರುವ ಒಂದೊಂದು ಐಷಾರಾಮಿ ವಾಹನಗಳ ಬಗ್ಗೆ ವಿವರ ಕೇಳಿದ್ರೆ ಎಂತವರು ಕೂಡ ಹೌಹಾರಿ ಹೋಗುತ್ತಾರೆ. ಈ ರಾಜನ ಬಳಿ ಬರೊಬ್ಬರಿ 38 ಪ್ಲೇನ್​ಗಳಿವೆ. ಬೊಯಿಂಗ್ ಹಾಗೂ ಏರ್​​ಬಸ್ ಮಾಡಲ್​ನ 38 ಪ್ಲೇನ್​ಗಳ ಮಾಲೀಕ ಈ ರಾಜ ಅದರ ಜೊತೆ ಸುಮಾರು 21 ಹೆಲಿಕಾಪ್ಟರ್​​ಗಳಿವೆ. ಅವುಗಳ ಬೆಲೆ ಒಟ್ಟಾರೆ 524 ಕೋಟಿ ರೂಪಾಯಿ
ಇದನ್ನೂ ಓದಿ: ಭಾರತದ ಅತಿ ಸುಂದರ ಮಹಾರಾಣಿ ಯಾರು ಗೊತ್ತಾ? ಇವರ ಸ್ಟೈಲ್​ನ್ನು ಐಶ್ವರ್ಯ ರೈ ಕೂಡ ಕಾಪಿ ಮಾಡಿದ್ದರು..
ಇನ್ನೂ ಮುನ್ನೂರಕ್ಕೂ ಹೆಚ್ಚು ಕಾರ್​ಗಳನ್ನ ಈ ರಾಜ ಹೊಂದಿದ್ದಾರೆ. ಮರ್ಸಿಡಿಜ್ ಬೆಂಜ್​, ಲಿಮೋಸಿನ್ ತರಹದ ಒಟ್ಟು 300 ಐಷಾರಾಮಿ ಕಾರುಗಳು ಇವರ ಮನೆಯಮುಂದೆ ನಿಂತಿವೆ. ಇವುಗಳ ಹೊರತಾಗಿ 52 ಗೈಡೆಡ್ ಬೋಟ್​ಗಳ ಮಾಲೀಕರು ಹೌದು ಈ ರಾಜ
ಇವರ ವಾಸಿಸುವ ಪ್ಯಾಲೆಸ್ ಸುಮಾರು 20 ಲಕ್ಷಕ್ಕೂ ಅಧಿಕ ಸ್ಕ್ವೇರ್​ಫೀಟ್​ನಲ್ಲಿ ಹರಡಿಕೊಂಡಿದೆ. ಆದರೆ ಈ ಪ್ಯಾಲೆಸ್​ನಲ್ಲಿ ಅವರ ತುಂಬಾ ಸಮಯ ಕಳೆಯುವುದೇ ಇಲ್ಲ. ಇವರು ಹೆಚ್ಚು ಸಮಯ ಕಳೆಯುವುದು ಪಾಶ್ಚಾತ್ಯ ದೇಶಗಳಲ್ಲಿ ಹಾಗೂ ಜರ್ಮನಿಯಲ್ಲಿರುವ ತಮ್ಮ ಮತ್ತೊಂದು ಮನೆಯಲ್ಲಿ. ಈ ರಾಜ ಒಟ್ಟು ನಾಲ್ಕು ಮದುವೆಗಳನ್ನಾಗಿದ್ದು. ಇವರಿಗೆ ನಾಲ್ಕು ಜನ ಮಕ್ಕಳಿದ್ದಾರೆ.
ಆದ್ರೆ ಇಷ್ಟೆಲ್ಲಾ ಇರುವ ಈ ರಾಜನ ಸಂಪತ್ತು ಭಾರತ ದೇಶದ ಅತ್ಯಂತ ಶ್ರೀಮಂತರು ಎಂದು ಕರೆಯಲ್ಪಡುವ ಅಂಬಾನಿ, ಅದಾನಿಯವರ ಸಮಕ್ಕೆ ಬಂದು ನಿಲ್ಲುವುದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ