newsfirstkannada.com

ನೀನು ಹಳ್ಳಿ ಗುಗ್ಗು ಎಂದು ಕಾಟ ಕೊಟ್ಟ ಹೆಂಡತಿ; ರೋಸಿ ಹೋದ ಗಂಡ ಸಾವಿಗೆ ಶರಣು

Share :

14-09-2023

    ನೀನು ಹಳ್ಳಿ ಗುಗ್ಗು, ನಿನ್ನನ್ನ ಮದುವೆಯಾಗಲು ಇಷ್ಟ ಇರಲಿಲ್ಲ

    ಆತ್ಮಹತ್ಯೆಗೂ ಮುನ್ನ ಆಡಿಯೋ ಕಳಿಸಿದ ಪತಿ ಮಂಜುನಾಥ್

    ಪತ್ನಿ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್

ತುಮಕೂರು: ಹೆಂಡತಿಯ ಕಾಟಕ್ಕೆ ಮನನೊಂದ ಗಂಡ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. ಮಂಜುನಾಥ್ (38) ಮೃತ ದುರ್ದೈವಿ.

ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಮಂಜುನಾಥ್ ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕ ಎಂಬಾಕೆಯನ್ನು ಮದುವೆಯಾಗಿದ್ದ. ಅಲ್ಲದೇ ಈ ದಂಪತಿಗಳ ನಡುವೆ ಆಗಾಗ ಮನಸ್ತಾಪಗಳು ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿರಾಯ 

ಮದುವೆಯಾಗಿ 10 ವರ್ಷ ಆಗಿದ್ದರು ಕೂಡ ಪ್ರಿಯಾಂಕ ದಿನನಿತ್ಯ ಮಂಜುನಾಥ್​ನ ಬಳಿ ಸಣ್ಣ, ಸಣ್ಣ ವಿಷಯಕ್ಕೂ ತಕರಾರು ಎತ್ತುತ್ತಿದ್ದಳಂತೆ. ‘ನೀನು ಹಳ್ಳಿ ಗುಗ್ಗು ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ’ ಎಂದು ಪದೇ ಪದೇ ಜಗಳ ತೆಗೆಯುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಈ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು .

ಆತ್ಮಹತ್ಯೆಗೂ ಮುನ್ನ ಆಡಿಯೋ ಕಳಿಸಿದ ಮಂಜುನಾಥ್ !

ಮೃತ ಮಂಜುನಾಥ್ ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದಾನೆ. ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ. ಆಕೆಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಆಡಿಯೋ ಮೆಸೇಜ್ ಮಾಡಿ ಸಾವಿಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀನು ಹಳ್ಳಿ ಗುಗ್ಗು ಎಂದು ಕಾಟ ಕೊಟ್ಟ ಹೆಂಡತಿ; ರೋಸಿ ಹೋದ ಗಂಡ ಸಾವಿಗೆ ಶರಣು

https://newsfirstlive.com/wp-content/uploads/2023/09/death-2.jpg

Load More