/newsfirstlive-kannada/media/post_attachments/wp-content/uploads/2025/01/heart-attack.jpg)
ಈ ಹಾಲುಗಲ್ಲದ ಬಾಲಕಿಯನ್ನ ನೋಡಿದ್ರೆ ಎಂಥವರಿಗೂ ಕರುಳು ಚುರ್ ಅನ್ನುತ್ತೆ. ಬಾಳಿ ಬದುಕಬೇಕಿದ್ದ ಈ ಪುಟ್ಟ ಕಂದಮ್ಮ ಇದ್ದಕ್ಕಿದ್ದಂತೆ ಪರಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಕಣ್ ಮುಂದೆ ಆಡಿ ಬೆಳೆದ ಬಾಲಕಿಯ ಘೋರ ದುರಂತ ಹೆತ್ತ ಒಡಲಿಗೆ ಬೆಂಕಿ ಇಟ್ಟಿದೆ.
ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ. 9 ವರ್ಷದ ತೇಜಸ್ವಿನಿ 3ನೇ ತರಗತಿ ಓದುತ್ತಿದ್ದಳು. ಎಂದಿನಂತೆ ಇವತ್ತು ಬೆಳಗ್ಗೆ ಶಾಲೆಗೆ ಬಂದಿದ್ದ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ.
ಶಾಲೆಯಲ್ಲಿ ಕುಸಿದು ಬಿದ್ದಿದ್ದ ವಿದ್ಯಾರ್ಥಿನಿ ತೇಜಸ್ವಿನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ತಕ್ಷಣ ಶಾಲೆ ಸಿಬ್ಬಂದಿ ತೇಜಸ್ವಿನಿಯನ್ನ JSS ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ JSS ವೈದ್ಯರು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ದುರಂತ.. ಕಾರಣವೇನು?
ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈ ಸುದ್ದಿ ತಿಳಿದ ತಂದೆ ನಿಂಗರಾಜು, ತಾಯಿ ಶೃತಿಗೆ ದಿಗ್ಭ್ರಮೆಯಾಗಿ ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗೆ ಒಪ್ಪದ ಪೋಷಕರು ಬಾಲಕಿ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ