/newsfirstlive-kannada/media/post_attachments/wp-content/uploads/2024/12/Pushpa-2-Collection-Day-3.jpg)
ದಿನ, ದಿನಕ್ಕೂ ಪುಷ್ಪ 2 ಅಬ್ಬರ ಜೋರಾಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬ್ಲಾಕ್ ಬಸ್ಟರ್ ಪುಷ್ಪ 2 ಸಿನಿಮಾ 3ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ.
ಪುಷ್ಪ 2 ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ ಕಳೆದಂತೆ ಹೊಸ, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಡಿಸೆಂಬರ್ 5ರಂದು ಬಿಡುಗಡೆಯಾಗಿರುವ ಪುಷ್ಪ 2 ಮೊದಲ ದಿನ ಬರೋಬ್ಬರಿ 294 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದೀಗ ಮೊದಲ 3 ದಿನಗಳಲ್ಲಿ ಪುಷ್ಪ 2 ಕಲೆಕ್ಷನ್ 500 ಕೋಟಿಯನ್ನು ದಾಟಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ನೋಡಿದ ಅಭಿಮಾನಿಗಳು ಕೇಕೆ ಹಾಕುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪುಷ್ಪ 2, ಮೂರು ದಿನ ಕಳೆಯುವಷ್ಟರಲ್ಲೇ 500 ಕೋಟಿಯ ಕ್ಲಬ್ ಸೇರಿಕೊಂಡಿದೆ. ಭಾರತದ ಸಿನಿಮಾ ಇತಿಹಾಸದಲ್ಲೇ ಯಾವ ಸಿನಿಮಾ ಮಾಡದಷ್ಟು ಕಲೆಕ್ಷನ್ ಅನ್ನು ಪುಷ್ಪ 2 ಸಿನಿಮಾ ಮಾಡಿದೆ.
ಪುಷ್ಪ 2 ಕಲೆಕ್ಷನ್ ಎಷ್ಟು?
1 ದಿನ: 282 ಕೋಟಿ
2 ದಿನ: 115 ಕೋಟಿ
3 ದಿನ: 203 ಕೋಟಿ
ಇದನ್ನೂ ಓದಿ: ಪುಷ್ಪ 2 ಎರಡು ದಿನಗಳ ಕಲೆಕ್ಷನ್ ಭರ್ಜರಿ.. ಬ್ಲಾಕ್ಬಸ್ಟರ್ ಚಿತ್ರಗಳ ಎಲ್ಲಾ ದಾಖಲೆಗಳು ಉಡೀಸ್..!
ಪುಷ್ಪ 2 ಸಿನಿಮಾ ಕೇವಲ ತೆಲುಗು ವೀಕ್ಷಕರಿಗಷ್ಟೇ ಇಷ್ಟವಾಗಿಲ್ಲ. ಕನ್ನಡ, ತಮಿಳು ಪ್ರೇಕ್ಷಕರು ಪುಷ್ಪ 2 ಚಿತ್ರದ ಮೋಡಿಗೆ ಒಳಗಾಗಿದ್ದಾರೆ. ಹಿಂದಿ ಸೆಂಟರ್‌ನಲ್ಲೂ ಪುಷ್ಪ 2 ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲೂ ಪುಷ್ಪ 2 ಯಾವ ಸಿನಿಮಾ ಕೂಡ ಗಳಿಸದಷ್ಟು ಕಲೆಕ್ಷನ್ ಮಾಡಿದೆ.
ಪುಷ್ಪ 2 ಹಿಂದಿಯ ಕಲೆಕ್ಷನ್!
1 ದಿನ: 72 ಕೋಟಿ
2 ದಿನ: 59 ಕೋಟಿ
3 ದಿನ: 74 ಕೋಟಿ
ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಪುಷ್ಪಾ 2 ಸಿನಿಮಾ ಕಳೆದ ಮೂರು ದಿನಗಳಲ್ಲೇ ಬರೋಬ್ಬರಿ 205 ಕೋಟಿ ರೂಪಾಯಿ ಗಳಿಸಿದೆ ಅನ್ನೋ ವರದಿಯಾಗಿದೆ. ಅಲ್ಲು ಅರ್ಜುನ್ ಸಿನಿಮಾ ಇಡೀ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಾ ಇದ್ದು, ಈಗಾಗಲೇ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಆದಷ್ಟು ಬೇಗ 1000 ಕೋಟಿ ರೂಪಾಯಿ ಕ್ಲಬ್ ಸೇರಿ ಪುಷ್ಪಾ 2 ಮತ್ತೊಂದು ದಾಖಲೆ ಬರೆಯುವತ್ತ ಮುನ್ನುಗ್ಗುತ್ತಾ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ