‘ನಾನು IAS ಆಗಬೇಕು’.. ರಾಜ್ಯಕ್ಕೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಜಯದರ್ಶಿನಿ ಹೇಳಿದ್ದೇನು?

author-image
Veena Gangani
Updated On
‘ನಾನು IAS ಆಗಬೇಕು’.. ರಾಜ್ಯಕ್ಕೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಜಯದರ್ಶಿನಿ ಹೇಳಿದ್ದೇನು?
Advertisment
  • ನಮ್ಮ ಪೋಷಕರು ಬೆಂಬಲದಿಂದ ಸಾಧಿಸಿದ್ದೇನೆ ಎಂದು ಖುಷಿಪಟ್ಟ ಜಯದರ್ಶನಿ
  • ತಮಿಳುನಾಡಿನಿಂದ ವಿಡಿಯೋ ಮೂಲಕ ಸಂತಸ ಹಂಚಿಕೊಂಡ ವಿದ್ಯಾರ್ಥಿನಿ
  • ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜ್ ಪ್ರಿನ್ಸಿಪಾಲ್ ವಾದಿರಾಜ್ ಹೇಳಿದ್ದೇನು?

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಲ್ಲಿ ಯಾವ ಯಾವ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಕೊಂಡಿದ್ದಾರೆ ಎಂದು ಗೊತ್ತಾಗಿದೆ. ಈ ಬಾರಿಯೂ ಕಲಾ, ವಾಣಿಜ್ಯ, ವಿಜ್ಞಾನ ಮೂರೂ ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?

publive-image

ಕಲಾ ವಿಭಾಗದಲ್ಲಿ ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಜಯದರ್ಶನಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ತಮಿಳುನಾಡಿನಿಂದ ವಿಡಿಯೋ ಮೂಲಕ ನ್ಯೂಸ್​ ಫಸ್ಟ್​ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ ರಾಜ್ಯಕ್ಕೆ ಮೂರನೇ ಸ್ಥಾನ ಬಂದ ಜಯ ದರ್ಶಿನಿ. ಈ ಬಗ್ಗೆ ಮಾತಾಡಿದ ಅವರು, ಪೋಷಕರ ಸಪೋರ್ಟ್​ನಿಂದ ಇದು ಸಾಧ್ಯವಾಯ್ತು. ನನಗೆ ಐಎಎಸ್ ಮಾಡ್ಬೇಕು ಅಂತ ಆಸೆ ಇದೆ. ನಮ್ಮ ಪೋಷಕರು ಬೆಂಬಲದಿಂದ ಸಾಧಿಸ್ತೇನೆ. ನನಗೆ ಬೆಂಬಲ ನೀಡಿದ ಕಾಲೇಜು ಮಂಡಳಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

publive-image

ಇನ್ನೂ, ಈ ಬಗ್ಗೆ ನ್ಯೂಸ್ ಫಸ್ಟ್​ನೊಂದಿಗೆ ಸಂತಸ ಹಂಚಿಕೊಂಡ ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜ್ ಪ್ರಿನ್ಸಿಪಾಲ್ ವಾದಿರಾಜ್ ಅವರು, ಕಲಾ ವಿಭಾಗದಲ್ಲಿ ಜಯದರ್ಶಿನಿ ಮೊದಲ ಸ್ಥಾನ ಪಡೆಯುತ್ತಾಳೆ ಅಂತ ಅಂದುಕೊಂಡಿದ್ದೇವೆ. ಏಕೆಂದರೆ ಜಯ ದರ್ಶಿನಿ ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್ ಆಗಿದ್ದರು. ಪ್ರಿಪರೇಟರಿ ಪರೀಕ್ಷೆಯಲ್ಲಿ 100/100 ಅಂಕ ಪಡೆದಿದ್ದರು. ಎಕ್ಸಾಂಗಾಗಿ ತುಂಬಾ ಚೆನ್ನಾಗಿ ತಯಾರಾಗ್ತಿದ್ದರು. ಜಯ ದರ್ಶಿನಿ ಅವರಿಗೆ ದೆಹಲಿ ಯೂನಿವರ್ಸಿಟಿಯಲ್ಲಿ‌ ಎಕಾನಾಮಿಕ್ಸ್ ಮಾಡುವ ಆಸೆ ಇದೆ. ಈಗಾಗಲೇ ದೆಹಲಿ ಎಕಾನಾಮಿಕ್ಸ್ ಎಂಟರೆನ್ಸ್ ಪರೀಕ್ಷೆ ಪಡೆದು ಸ್ಕಾಲರ್ಶಿಪ್ ಪಡೆದುಕೊಂಡಿದ್ದಾರೆ. ಅವರ ಅಪ್ಪ- ಅಮ್ಮ ತುಂಬಾ ಖುಷಿಯಾಗಿದ್ದಾರೆ. ಕಲಾವಿಭಾಗದ ಜಯದರ್ಶನಿ ಓದಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment