/newsfirstlive-kannada/media/post_attachments/wp-content/uploads/2024/07/8-year-Old-Girl-rape.jpg)
3ನೇ ತರಗತಿಯ ವಿದ್ಯಾರ್ಥಿನಿಯನ್ನು 14 ವಯಸ್ಸಿನ ಬಾಲಕರು ಅತ್ಯಾಚಾರ ಗೈದು ಕೊಲೆ ಮಾಡಿದ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್ಚುಮರ್ರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಕೊಲೆಯಾದ 8 ವರ್ಷ ವಯಸ್ಸಿನ ಬಾಲಕಿಯು ತನ್ನ ಮನೆಯಿಂದ ಸ್ನೇಹಿತರೊಡಗೂಡಿ ಆಟವಾಡಲು ಹೋಗಿದ್ದಳು. ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದ್ದನ್ನು ಗಮನಿಸಿದ ಪೋಷಕರು ಗಾಬರಿಯಾಗಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳ ಪತ್ತೆ ಹಚ್ಚಿದ ಶ್ವಾನ
ಪೊಲೀಸರು ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಶ್ವಾನ ದಳವನ್ನು ಬಳಸಿಕೊಂಡು ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಶ್ವಾನವು ಕೊಲೆಗೈದ ಆರೋಪಿಗಳ ಮನೆಯ ಬಳಿ ಕರೆದೊಯ್ದಿದೆ.
ಇದನ್ನೂ ಓದಿ: ಇದೆಂಥಾ ದುರ್ಗತಿ! ಒಂದೇ ದಿನ 7 ಜನ ಸಾವು.. ಈ ಊರಲ್ಲಿ ಅಂತ್ಯಕ್ರಿಯೆ ಮಾಡಲು ಸ್ಮಶಾನವೇ ಇಲ್ಲ
ಕೊಂದು ರಾಜಕಾಳುವೆಗೆ ಎಸೆದರು
ಪೊಲೀಸರು ಮೂವರು ಬಾಲಕರನ್ನು ವಶಪಡಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೂವರು ಸೇರಿ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ್ದಾರೆ. ಬಳಿಕ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಮೃತದೇಹವನ್ನು ರಾಜಕಾಲುವೆಗೆ ಎಸೆದಿರೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ 10ನೇ ಮಗುವಿಗೆ ಜನ್ಮ ನೀಡಿದ ತಾಯಿ!
ಮಾಹಿತಿಯಂತೆ, ಮೂವರು ಬಾಲಕರು 3ನೇ ತರಗತಿ ಬಾಲಕಿಯನ್ನು ಆಟವಾಡಲು ಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಆಕೆಯ ಬಾಯಿ ಮುಚ್ಚಿಸಿ ಲೈಂಗಿಕದೌರ್ಜನ್ಯ ನಡೆಸಿದ್ದಾರೆ. ಬಳಿಕ ಬಾಲಕಿಯ ಪೋಷಕರಿಗೆ ಹೆದರಿ ಆಕೆಯನ್ನು ಕೊಲೆ ಮಾಡಿದ್ದಾರೆ. ಯಾರಿಗೆ ತಿಳಿಯಬಾರದೆಂದು ರಾಜಕಾಲುವೆಗೆ ಎಸೆದಿದ್ದಾರೆ.
ಇದನ್ನೂ ಓದಿ: ಗೂಡ್ಸ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ನಜ್ಜುಗುಜ್ಜಾದ ಕಾರು.. ಮೂವರು ಸಾವು
ಬಾಲಕಿಯ ಶವವನ್ನು ರಾಜಕಾಲುವೆಗೆ ಎಸೆದ ಕಾರಣ ಮತ್ತು ಮಳೆಯಿಂದಾಗಿ ನೀರು ರಭಸವಾಗಿ ಹರಿಯುವ ಕಾರಣ ಮೃತದೇಹ ಕೊಚ್ಚಿ ಹೋಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ