ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಆಘಾತ.. ಶಾಂತವಾಗಿರಿ ಆತಂಕ ಬೇಡ ಎಂದ ಪ್ರಧಾನಿ ಮೋದಿ

author-image
Gopal Kulkarni
Updated On
ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಆಘಾತ.. ಶಾಂತವಾಗಿರಿ ಆತಂಕ ಬೇಡ ಎಂದ ಪ್ರಧಾನಿ ಮೋದಿ
Advertisment
  • ದೆಹಲಿಯಲ್ಲಿ 4.0 ರಿಕ್ಟರ್ ಮಾಪಕದಲ್ಲಿ ಕಂಪಿಸಿದ ಭೂಮಿ
  • ಭೂಕಂಪ ಅನುಭವದಿಂದ ಮನೆಯಿಂದ ಆಚೆ ಬಂದ ಜನರು
  • ಜನರು ಆತಂಕದ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್

ದೆಹಲಿ ನಿವಾಸಿಗಳು ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದ ಜನರು ಇಂದು ಮುಂಜಾನೆ ಏಕಾಏಕಿ ಬೆಚ್ಚಿಬಿದ್ದಿದ್ದಾರೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ರಾಷ್ಟ್ರ ರಾಜಧಾನಿ ಕಂಪಿಸಿದೆ. ದೆಹಲಿಯಲ್ಲಿ ಸುಮಾರು 4.0 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದೆ. ದುರ್ಗಾಬಾಯಿ ದೇಶಮುಖ ಕಾಲೇಜ್​​ ಭೂಕಂಪದ ಕೇಂದ್ರಬಿಂದು ಎಂದು ಗುರುತಿಸಲಾಗಿದೆ ಎಂದು ಹೇಲಲಾಗಿದೆ.

ಭೂಮಿ ಐದು ಕಿಲೋ ಮೀಟರ್ ಆಳದಲ್ಲಿ ವೆಳಗ್ಗೆ 5.36ಕ್ಕೆ ಈ ಒಂದು ಭೂಕಂಪನ ಸಂಭವಿಸಿದೆ ಎಂದು ಕೇಂದ್ರ ಭೂಕಂಪಶಾಸ್ತ್ರ ಟ್ವೀಟ್ ಮಾಡಿದೆ. ಕೆಲವೇ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದರು ಕೂಡ ರಾಷ್ಟ್ರ ರಾಜಧಾನಿಯ ಜನರು ಗಾಬರಿಗೊಂಡು ಮನೆಯಿಂದ ಗಾಬರಿಯಿಂದ ಹೊರಗಡೆ ಬಂದಿದ್ದರು. ಭೂಮಿಯ ನಡುಕ ಅನುಭವವನ್ನು ಕಂಡ ಜನರು ಮನೆಯಿಂದ ಆಚೆ ಬಂದು ಬೀದಿಯಲ್ಲಿ ನಿಂತಿದ್ದರು. ಆದ್ರೆ ಇಲ್ಲಿಯವರೆಗೂ ಯಾವುದೇ ಮನೆಗಳಿಗೆ ಹಾನಿ ಮತ್ತು ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.


">February 17, 2025

ಇದನ್ನೂ ಓದಿ:ರಾಜ್ಯದಲ್ಲಿ 3 ಪ್ರತ್ಯೇಕ ಅಪಘಾತ; ದುರಂತದಲ್ಲಿ 7 ಕಾರುಗಳು ಜಖಂ, ಕಣ್ಮುಚ್ಚಿದ ಬೈಕ್ ಸವಾರರು

ದೆಹಲಿಯ ದೌಲಾ ಕೌನ್​ ಪ್ರದೇಶ ಪ್ರತಿ ಎರಡು ಇಲ್ಲವೇ ಮೂರು ವರ್ಷಕ್ಕೊಮ್ಮೆ ಈ ರೀತಿಯ ಭೂಕಂಪದ ಅನುಭವ ಪಡೆಯುತ್ತಲೇ ಇರುತ್ತದೆ. ಈ ಹಿಂದೆ 2015ರಲ್ಲಿ ಸುಮಾರು 3.3 ರಿಕ್ಟರ್ ಮಾಪಕದಲ್ಲಿ ಇದೇ ಪ್ರದೇಶದಲ್ಲಿ ಭೂಕಂಪವಾಗಿತ್ತು. ಭೂಕಂಪದ ವೇಳೆ ದೊಡ್ಡದಾಗಿ ಸದ್ದು ಕೂಡ ಕೇಳಿ ಬಂದಿತ್ತು.

ಇದನ್ನೂ ಓದಿ:ಭಾರತೀಯ ಸೇನೆಗೆ ಅವಮಾನಿಸಿದ್ರಾ ಬಾಲಿವುಡ್​ ನಟಿ..? ಕಪೂರ್ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಬಳಿ ಭೂಕಂಪವಾದ ಅನುಭವ ಕಂಡುಬಂದಿದೆ. ಎಲ್ಲರೂ ಶಾಂತಿಯಿಂದ ಇರುವಂತೆ ನಾನು ಪ್ರಾರ್ಥನೆ ಮಾಡುತ್ತೇನೆ ಹಾಗೂ ಸುರಕ್ಷಿತವಾಗಿ ಮುನ್ನೆಚ್ಚರಿಕೆಯಿಂದ ಇರುವಂತೆ ವಿನಂತಿ ಮಾಡಿಕೊಳ್ಳುತ್ತೇನೆ. ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಹತ್ತಿರಂದ ಪರಿಶೀಲಿಸುತ್ತಿದ್ದಾರೆ ಆತಂಕ ಬೇಡ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment