newsfirstkannada.com

4 ಸಿಕ್ಸರ್‌.. 5 ಬೌಂಡರಿ.. RCB ಕೈ ಹಿಡಿದ ದಿನೇಶ್ ಕಾರ್ತಿಕ್‌ ಅದ್ಭುತ ಬ್ಯಾಟಿಂಗ್!

Share :

Published April 11, 2024 at 9:45pm

Update April 11, 2024 at 9:57pm

    ಕೇವಲ ಮೂರೇ ರನ್‌ಗಳಿಗೆ ವಿಕೆಟ್ ಒಪ್ಪಿಸಿದ ಕಿಂಗ್‌ ವಿರಾಟ್ ಕೊಹ್ಲಿ

    ವಾಂಖೆಡೆಯಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ

    ಮುಂಬೈ ಇಂಡಿಯನ್ಸ್‌ಗೆ 197 ರನ್‌ಗಳ ಟಾರ್ಗೆಟ್‌ ಕೊಟ್ಟ ಆರ್‌ಸಿಬಿ

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ RCB ಉತ್ತಮ ಸ್ಕೋರ್‌ ಕಲೆ ಹಾಕಿದೆ. 8 ವಿಕೆಟ್ ಕಳೆದುಕೊಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್‌ 196 ರನ್ ಕಲೆಹಾಕಿದೆ. ಮುಂಬೈ ಇಂಡಿಯನ್ಸ್‌ಗೆ 197 ರನ್‌ಗಳ ಟಾರ್ಗೆಟ್‌ ನೀಡಲಾಗಿದೆ.

ಮೊದಲು ಬ್ಯಾಟ್‌ ಮಾಡಿದ RCB ತಂಡ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಜವಾಬ್ದಾರಿಯುತ ಆಟ ಆಡಿದರು. ಫಾಫ್ 61 ರನ್ ಸಿಡಿಸಿ ತಂಡಕ್ಕೆ ಆಸರೆಯಾದರೆ ಬ್ಯಾಕ್‌ ಟು ಬ್ಯಾಕ್ ವಿಕೆಟ್‌ನಿಂದ ಬೆಂಗಳೂರು ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ರಜತ್ ಪಾಟಿದಾರ್ 50 ರನ್ ಸಿಡಿಸಿದ್ರೂ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ರನ್ ಗಳಿಸೋದು ಸವಾಲಾಗಿತ್ತು. ಕೊನೆಗೆ ತಂಡಕ್ಕೆ ಆಸರೆಯಾಗಿದ್ದು ಡಿಕೆ ಖ್ಯಾತಿಯ ದಿನೇಶ್ ಕಾರ್ತಿಕ್ ಅವರು. ಕೊನೆಯ ಓವರ್‌ಗಳಲ್ಲಿ 4 ಸಿಕ್ಸ್, 5 ಬೌಂಡರಿ ಬಾರಿಸಿದ ದಿನೇಶ್ ಕಾರ್ತಿಕ್ ಆಕರ್ಷಕ 53 ರನ್ ಸಿಡಿಸಿದರು. ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಮುಂಬೈಗೆ ಬಿಗ್‌ ಟಾರ್ಗೆಟ್ ಕೊಡಲು ಸಹಾಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

4 ಸಿಕ್ಸರ್‌.. 5 ಬೌಂಡರಿ.. RCB ಕೈ ಹಿಡಿದ ದಿನೇಶ್ ಕಾರ್ತಿಕ್‌ ಅದ್ಭುತ ಬ್ಯಾಟಿಂಗ್!

https://newsfirstlive.com/wp-content/uploads/2024/04/Dinesh-Karthik-2.jpg

Load More