/newsfirstlive-kannada/media/post_attachments/wp-content/uploads/2024/03/money-size.jpg)
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4 ಕೋಟಿ ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಲಾಗಿದೆ.
ಇದನ್ನೂ ಓದಿ:ಅಮೃತಧಾರೆ ಸೀರಿಯಲ್ನ ಮಲ್ಲಿಗೆಗೆ ಭಾರೀ ಮೆಚ್ಚುಗೆ; ರಾಧಾ ಇನ್ಸ್ಟಾದಲ್ಲಿ ಅಂಥದ್ದೇನಿದೆ?
ತರೀಕೆರೆ ತಾಲೂಕಿನ ಗಡಿಭಾಗದ ಎಂಸಿ ಹಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ದಾಖಲೆ ಇಲ್ಲದೇ 4 ಕೋಟಿ ಮೌಲ್ಯದ ಚಿನ್ನಾಭರಣ, 6 ಕೆಜಿ 586 ಗ್ರಾಂ ಚಿನ್ನ, ಒಂದು ಕೆಜಿ 873 ಗ್ರಾಂ ಬೆಳ್ಳಿ, ಜ್ಯುವೆಲ್ಲರಿ ವಿಥ್ ಡೈಮಂಡ್ ಒಂದು ಕೆಜಿ 71 ಗ್ರಾಂ ಪತ್ತೆಯಾಗಿದೆ. ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಸಮೇತ ಎಲ್ಲವನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ