Advertisment

ದಾಖಲೆ ಇಲ್ಲದೇ ಸಾಗಿಸ್ತಿದ್ದ 4 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆ; ಬೆಚ್ಚಿಬಿದ್ದ ಅಧಿಕಾರಿಗಳು

author-image
Veena Gangani
Updated On
ದಾಖಲೆ ಇಲ್ಲದೇ ಸಾಗಿಸ್ತಿದ್ದ 4 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆ; ಬೆಚ್ಚಿಬಿದ್ದ ಅಧಿಕಾರಿಗಳು
Advertisment
  • ಪೊಲೀಸ್​​ ತಪಾಸಣೆ ವೇಳೆ ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ
  • ಗಡಿಭಾಗದ ಎಂಸಿ ಹಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಭರ್ಜರಿ ಬೇಟೆ
  • 6 ಕೆಜಿ 586 ಗ್ರಾಂ ಚಿನ್ನ, ಒಂದು ಕೆಜಿ 873 ಗ್ರಾಂ ಬೆಳ್ಳಿ ಪೊಲೀಸ್​ ವಶಕ್ಕೆ

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳು ಫುಲ್​ ಅಲರ್ಟ್ ಆಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4 ಕೋಟಿ ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಲಾಗಿದೆ.

Advertisment

publive-image

ಇದನ್ನೂ ಓದಿ:ಅಮೃತಧಾರೆ ಸೀರಿಯಲ್​ನ ಮಲ್ಲಿಗೆಗೆ ಭಾರೀ ಮೆಚ್ಚುಗೆ; ರಾಧಾ ಇನ್​ಸ್ಟಾದಲ್ಲಿ ಅಂಥದ್ದೇನಿದೆ?

ತರೀಕೆರೆ ತಾಲೂಕಿನ ಗಡಿಭಾಗದ ಎಂಸಿ ಹಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ದಾಖಲೆ ಇಲ್ಲದೇ 4 ಕೋಟಿ ಮೌಲ್ಯದ ಚಿನ್ನಾಭರಣ, 6 ಕೆಜಿ 586 ಗ್ರಾಂ ಚಿನ್ನ, ಒಂದು ಕೆಜಿ 873 ಗ್ರಾಂ ಬೆಳ್ಳಿ, ಜ್ಯುವೆಲ್ಲರಿ ವಿಥ್ ಡೈಮಂಡ್ ಒಂದು ಕೆಜಿ 71 ಗ್ರಾಂ ಪತ್ತೆಯಾಗಿದೆ. ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಸಮೇತ ಎಲ್ಲವನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment