ಇನ್ಮುಂದೆ ವಾರಕ್ಕೆ ನಾಲ್ಕೇ ದಿನ ಕೆಲಸ; ಬರೋಬ್ಬರಿ 3 ದಿನ ರಜೆ; ಉದ್ಯೋಗಿಗಳು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳು.. IT ವಿಭಾಗಕ್ಕೆ ಬೇಕಾಗಿದ್ದಾರೆ ಅಭ್ಯರ್ಥಿಗಳು
Advertisment
  • ಇನ್ಮುಂದೆ ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ
  • ಮೂರು ದಿನಗಳು ವಾರದಲ್ಲಿ ರಜೆ ನೀಡಲಾಗುತ್ತದೆ
  • ಐಟಿ ಕಂಪನಿ ಉದ್ಯೋಗಿಗಳಿಗೆ ಬಂಪರ್​​ ನ್ಯೂಸ್​!

ಇತ್ತೀಚೆಗಷ್ಟೇ ಇನ್ಫೋಸಿಸ್ ನಾರಾಯಣ ಮೂರ್ತಿಯವರು ದೇಶದ ಅಭಿವೃದ್ದಿಗಾಗಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬದ್ಧರಾಗಿರಬೇಕು ಎಂದಿದ್ದರು. ಈ ಬೆನ್ನಲ್ಲೇ ಭಾರತ ಬೇರೆ ದೇಶದ ಜತೆಗೆ ಕಾಂಪೀಟ್​ ಮಾಡಲು ಯುವಕರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಲಾರ್ಸೆನ್ & ಟೂಬ್ರೊ (L&T) ಕಂಪನಿ ಅಧ್ಯಕ್ಷರಾದ ಎಸ್.ಎನ್. ಸುಬ್ರಹ್ಮಣ್ಯನ್ ಪ್ರತಿಪಾದಿಸಿದ್ದರು. ಈ ಇಬ್ಬರು ಉದ್ಯಮಿಗಳ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ದಿನಕ್ಕೆ ಮನುಷ್ಯ 15 ಗಂಟೆ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನೆಗಳು ಕೇಳಿ ಬಂದಿದ್ದವು. ಇದರ ಮಧ್ಯೆ ವಾರದಲ್ಲಿ 4 ದಿನ ಕೆಲಸ ಮತ್ತು 3 ದಿನ ರಜೆ ಎನ್ನುವ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ.

ಏನಿದು ಹೊಸ ನಿಯಮ?

ಉದ್ಯೋಗಿ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಇದರಿಂದ ಜೀವನದ ಒತ್ತಡ ಕಡಿಮೆ ಆಗುತ್ತದೆ. ಜತೆಗೆ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಉದ್ಯೋಗಿಗಳ ಉತ್ತಮ ಜೀವನಕ್ಕಾಗಿ ವಾರದಲ್ಲಿ 4 ದಿನ ಮಾತ್ರ ಕೆಲಸ ಇರಬೇಕು ಎಂದು ಯುಕೆ ಕಂಪನಿಗಳು ಒಂದು ನಿರ್ಧಾರಕ್ಕೆ ಬಂದಿವೆ. ಆದ್ದರಿಂದಲೇ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ಅನ್ನೋ ಒಪ್ಪಂದಕ್ಕೆ ಬರೋಬ್ಬರಿ 200 ಕಂಪನಿಗಳು ಸಹಿ ಹಾಕಿವೆ.

ವೇತನದಲ್ಲೂ ಇಲ್ಲ ಕಡಿತ

ಇನ್ಮುಂದೆ 200 UK ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 3 ದಿನ ರಜೆ ನೀಡುತ್ತವೆ. 3 ದಿನ ರಜೆ ನೀಡಿದ ಮಾತ್ರಕ್ಕೆ ವೇತನದಲ್ಲಿ ಯಾವುದೇ ಕಡಿತ ಮಾಡಲ್ಲ ಎಂದಿವೆ ಕಂಪನಿಗಳು. ಈ 200 ಕಂಪನಿಗಳಲ್ಲಿ ಒಟ್ಟು 5,000ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರಕ್ಕೆ 3 ದಿನ ರಜೆ ನೀಡಿದ್ರೆ ಏನು ಲಾಭ?

ವಾರಕ್ಕೆ 5 ದಿನ ಕೆಲಸ ಹಳೆಯ ಪದ್ದತಿ. ಒಬ್ಬ ಉದ್ಯೋಗಿಗೆ ವಾರದಲ್ಲಿ 3 ದಿನ ರಜೆ ಸಿಕ್ಕಲ್ಲಿ ಆತನಿಗೆ ಯಾವುದೇ ಮಾನಸಿಕ ಒತ್ತಡ ಇರೋದಿಲ್ಲ. ಬದಲಿಗೆ ಉದ್ಯೋಗಿಗಳು ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರಿಂದ ಉತ್ಪಾದನೆ ಕೂಡ ಹೆಚ್ಚಾಗಲಿದೆ ಎನ್ನುವುದು ಕಂಪನಿಗಳ ವಾದ.

ಇದನ್ನೂ ಓದಿ:ಟೀಮ್​ ಇಂಡಿಯಾದಿಂದ ಭಾರೀ ಎಡವಟ್ಟು; ಸ್ಟಾರ್​​ ವೇಗಿ ಅರ್ಷದೀಪ್​​ ಕೈ ಬಿಟ್ಟು ತಪ್ಪು ಮಾಡಿದ್ರಾ ಸೂರ್ಯ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment