newsfirstkannada.com

ಶೆಡ್​​ಗಳಿಗೆ ನುಗ್ಗಿದ ಖಾಸಗಿ ಕಂಪನಿಯ ಬಸ್​.. ಒಳಗೆ ಮಲಗಿದ್ದ ನಾಲ್ವರು ಅಲ್ಲೇ ಸಾವು

Share :

Published May 26, 2024 at 3:31pm

    ರಸ್ತೆ ಬದಿಯಿದ್ದ ಮನೆಗಳಿಗೆ ಏಕಾಏಕಿ ನುಗ್ಗಿದ ಖಾಸಗಿ ಬಸ್

    ಉದ್ಯೋಗಿಗಳಿದ್ದ ಬಸ್​ ವೇಗವಾಗಿ ಹೋಗುವಾಗ ಘಟನೆ

    ಮೃತಪಟ್ಟವರ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸ್ರು

ಪಣಜಿ: ಖಾಸಗಿ ಕಂಪನಿಯ ಬಸ್​ವೊಂದು ರಸ್ತೆ ಬದಿಯ ಶೆಡ್​ಗಳಿಗೆ ನುಗ್ಗಿದ ಪರಿಣಾಮ ನಾಲ್ವರು ಸಾವನ್ನಪ್ಪಿ, ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಕ್ಷಿಣ ಗೋವಾದ ವೆರ್ನಾದಲ್ಲಿ ಈ ದುರಂತ ನಡೆದಿದೆ.

ಇದನ್ನೂ ಓದಿ: ನಿತ್ಯ ಲೈಂಗಿಕ ಕಿರುಕುಳ.. ತನ್ನ ಮೇಲೆ ಅತ್ಯಾಚಾರ ಎಸಗ್ತಿದ್ದ ವ್ಯಕ್ತಿಯನ್ನ ಕೊಂದ ಬಾಲಕ

ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಬಿಹಾರ ಮೂಲದವರೆಂದು ತಿಳಿದು ಬಂದಿದ್ದು ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಖಾಸಗಿ ಕಂಪನಿಯೊಂದರ ​ಉದ್ಯೋಗಿಗಳಿದ್ದ ಬಸ್ ಅತಿ ವೇಗವಾಗಿ ಬಂದು ರಸ್ತೆ ಬದಿಯಲ್ಲಿದ್ದ ಶೆಡ್​​ಗಳಿಗೆ ನುಗ್ಗಿದೆ. ಇದರಿಂದ ಮನೆಯಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ದುರಂತ ಕೇಸ್​; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಇನ್ನು ಉದ್ಯೋಗಿಗಳನ್ನ ಹತ್ತಿಸಿಕೊಂಡು ಬರುತ್ತಿದ್ದ ಬಸ್ ಚಾಲಕ ಮದ್ಯಪಾನ ಮಾಡಿದ್ದನು. ಹೀಗಾಗಿ ಬಸ್​ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಶೆಡ್​ಗಳಿಗೆ ನುಗ್ಗಿಸಿದ ಪರಿಣಾಮ ಸಾವಿಗೆ ಕಾರಣನಾಗಿದ್ದಾನೆ. ಬಸ್​ ಒಳಗಿದ್ದ ಉದ್ಯೋಗಿಗಳಿಗೆ ಯಾವುದೇ ಗಾಯಗಳು ಆಗಿಲ್ಲ. ಬಸ್​ನ ಮುಂದಿನ ಭಾಗದ ಗ್ಲಾಸ್ ಒಡೆದು ಹೋಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೆಡ್​​ಗಳಿಗೆ ನುಗ್ಗಿದ ಖಾಸಗಿ ಕಂಪನಿಯ ಬಸ್​.. ಒಳಗೆ ಮಲಗಿದ್ದ ನಾಲ್ವರು ಅಲ್ಲೇ ಸಾವು

https://newsfirstlive.com/wp-content/uploads/2024/05/GOA_BUS_ACCIDENT_1.jpg

Load More