ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮಗನ ರಕ್ಷಿಸಿದ್ದು 4 ಭಾರತೀಯರು; ಸ್ವಲ್ಪ ತಡವಾಗಿದ್ದರೂ ಅಪಾಯ!

author-image
admin
Updated On
ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮಗನ ರಕ್ಷಿಸಿದ್ದು 4 ಭಾರತೀಯರು; ಸ್ವಲ್ಪ ತಡವಾಗಿದ್ದರೂ ಅಪಾಯ!
Advertisment
  • ಪವನ್ ಕಲ್ಯಾಣ್ ಅವರ ಕಿರಿಯ ಮಗ ಓದುತ್ತಿದ್ದ ಶಾಲಾ ಕಟ್ಟಡ
  • ಅಂದು ರಕ್ಷಣೆಯಲ್ಲಿ ಸ್ವಲ್ಪ ಹೊತ್ತು ತಡವಾಗಿದ್ದರೂ ದೊಡ್ಡ ಅನಾಹುತ
  • ತಮ್ಮ ಜೀವ ಪಣಕ್ಕಿಟ್ಟು ಮಕ್ಕಳನ್ನು ರಕ್ಷಿಸಿದವರಿಗೆ ಸಿಂಗಾಪುರದಲ್ಲಿ ಗೌರವ

ಸಿಂಗಾಪುರ ಶಾಲೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಾಯಗಳಾಗಿವೆ. ಕಟ್ಟಡದ ಬೆಂಕಿ ಅನಾಹುತದಲ್ಲಿ ಪವನ್ ಕಲ್ಯಾಣ್ ಮಗ ಮಾರ್ಕ್ ಶಂಕರ್ ಗಾಯಗೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ನಡೆದ ದಿನವೇ ಪವನ್ ಕಲ್ಯಾಣ್ ಅವರು ಸಿಂಗಾಪುರಕ್ಕೆ ತೆರಳಿ ಮಗನ ಆರೋಗ್ಯ ವಿಚಾರಿಸಿದ್ದರು.

ಪವನ್ ಕಲ್ಯಾಣ್ ಅವರ ಮಗ ಓದುತ್ತಿದ್ದ ಶಾಲಾ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿಯನ್ನು ರಕ್ಷಿಸಲು ಹರಸಾಹಸ ಪಡಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪವನ್ ಕಲ್ಯಾಣ್ ಮಗನನ್ನು ರಕ್ಷಿಸಿದ್ದು ನಾಲ್ವರು ಭಾರತೀಯ ಮೂಲದ ಕಾರ್ಮಿಕರು ಅನ್ನೋ ಮಾಹಿತಿ ಲಭ್ಯವಾಗಿದೆ.

ಶಾಲಾ ಕಟ್ಟಡ ಹೊತ್ತಿ ಉರಿಯುವಾಗ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಕಟ್ಟಡದ ಒಳಗೆ ಸಿಲುಕಿದ್ದವರನ್ನು ಕಿಟಕಿಯಿಂದ ರಕ್ಷಿಸೋದು ಬಹಳ ದೊಡ್ಡ ಸವಾಲಾಗಿತ್ತು. ಅಂದು ಸ್ವಲ್ಪ ಹೊತ್ತು ತಡವಾಗಿದ್ದರು ಹೆಚ್ಚಿನ ಸಾವು-ನೋವು ಸಂಭವಿಸುವ ಅವಕಾಶಗಳಿತ್ತು. ಆದರೆ ರಕ್ಷಣಾ ಸಿಬ್ಬಂದಿ ತಮ್ಮ ಜೀವ ಪಣಕ್ಕಿಟ್ಟು ಮಕ್ಕಳು ಹಾಗೂ ಶಾಲಾ ಸಿಬ್ಬಂದಿಯನ್ನು ಕಿಟಕಿಯ ಮೂಲಕ ರಕ್ಷಣೆ ಮಾಡಿದ್ದಾರೆ.

publive-image

ಅಗ್ನಿ ಅವಘಡದಲ್ಲಿ ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ ನಾಲ್ವರು ಭಾರತೀಯ ವಲಸೆ ಕಾರ್ಮಿಕರನ್ನು ಸಿಂಗಾಪುರ ಸರ್ಕಾರ ಸನ್ಮಾನಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಇವರು ಬಹಳ ಅಪಾಯದ ಪರಿಸ್ಥಿತಿಯಲ್ಲಿ 16 ಅಪ್ರಾಪ್ತರು ಮತ್ತು 6 ಮಂದಿಯನ್ನು ಸುರಕ್ಷಿತವಾಗಿ ಹೊರಗಡೆ ಕರೆದುಕೊಂಡು ಬಂದಿದ್ದರು. ಇದರಲ್ಲಿ ಪವನ್ ಕಲ್ಯಾಣ್ ಮಗ ಮಾರ್ಕ್ ಶಂಕರ್ ಕೂಡ ಒಬ್ಬರು.

ಇದನ್ನೂ ಓದಿ: ಪವನ್ ಕಲ್ಯಾಣ್ ಕಿರಿಯ ಮಗನಿಗೆ ಗಾಯ.. ಸಿಂಗಪೂರ್​ಗೆ ಆಂಧ್ರ ಡಿಸಿಎಂ ದಿಢೀರ್​ ಪ್ರಯಾಣ 

ಸಿಂಗಾಪುರದ ಮಾನವಶಕ್ತಿ ಸಚಿವಾಲಯ (ACE) ಭಾರತೀಯ ಮೂಲದ ಇಂದರ್‌ಜಿತ್ ಸಿಂಗ್, ಸುಬ್ರಮಣಿಯನ್ ಸರನ್‌ರಾಜ್, ನಾಗರಾಜನ್ ಅನ್ಬರಸನ್ ಮತ್ತು ಶಿವಸಾಮಿ ವಿಜಯರಾಜ್ ಅವರಿಗೆ ACE ನಾಣ್ಯವನ್ನು ಕೊಟ್ಟು ಸನ್ಮಾನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment