/newsfirstlive-kannada/media/post_attachments/wp-content/uploads/2025/05/Pakistan-Prime-minister-1.jpg)
ನವದೆಹಲಿ: ಕದನ ವಿರಾಮ ಒಪ್ಪಿಕೊಂಡ 3 ಗಂಟೆಯಲ್ಲೇ ಪಾಕ್ ಕಿಡಿಗೇಡಿತನ ಮೆರೆದಿದೆ. ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಪಾಕ್‌ನಿಂದ 100ಕ್ಕೂ ಹೆಚ್ಚು ಡ್ರೋನ್‌ಗಳಿಂದ ದಾಳಿಗೆ ಪ್ರಯತ್ನಿಸಿದೆ. ಶ್ರೀನಗರ, ಜಮ್ಮು, ರಜೌರಿ ಸೇರಿ LoC ಉದ್ದಕ್ಕೂ ಅತಿ ದೊಡ್ಡ ದಾಳಿಗೆ ಮುಂದಾಗಿದೆ.
ಇದನ್ನೂ ಓದಿ: ನಾಯಿ ಬಾಲ ಡೊಂಕೆ.. ಕದನ ವಿರಾಮಕ್ಕೆ ಪಾಕ್ ಸೇನೆ ಕಳ್ಳಾಟ; ಭಾರತದ ಮೇಲೆ ಅತಿ ದೊಡ್ಡ ದಾಳಿ!
ಕದನ ವಿರಾಮ ಉಲ್ಲಂಘಿಸಿ ಮೊಂಡುತನ ಪ್ರದರ್ಶಿಸಿದ್ರೂ ಪಾಕಿಸ್ತಾನದ ಪ್ರಧಾನಿ ಶಹಬಾಜ್​​ ಷರೀಫ್​ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ನಮ್ಮ ದಾಳಿಯಿಂದ ವೈರಿಗಳ ಏರ್ ಬೇಸ್ ನಾಶವಾಗಿದೆ. ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ ಅನ್ನೋ ಸುಳ್ಳಿನ ಕತೆ ಕಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/05/PAK-PM.jpg)
ಷರೀಫ್ ಸುಳ್ಳಿನ ಸರಮಾಲೆ!
ಸುಳ್ಳು 01: ಭಾರತದ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಿದ್ದೇವೆ
ಸುಳ್ಳು 02: ನಮ್ಮ ದಾಳಿಯಿಂದ ವೈರಿಗಳ ಏರ್ ಬೇಸ್ ನಾಶವಾಗಿದೆ
ಸುಳ್ಳು 03: ನಾವು ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ
ಸುಳ್ಳು 04: ಅರಬ್​ ದೇಶಗಳ ಬೆಂಬಲ ಪಾಕಿಸ್ತಾನದ ಜೊತೆಗಿದೆ
/newsfirstlive-kannada/media/post_attachments/wp-content/uploads/2025/04/raffale-fighter-jet.jpg)
ಪಾಕ್ ಪ್ರಧಾನಿ ಶಹಬಾಜ್​​ ಷರೀಫ್ ಅವರು ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ ಅನ್ನೋ ಕಟ್ಟು ಕತೆ ಕಟ್ಟಿದ್ದಾರೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಷ್ಟೇ ಅಲ್ಲದೇ ಭಾರತದ ವಿರುದ್ಧ ನಾವು ಗೆದ್ದಿದ್ದೇವೆಂದು ಶೆಹಬಾಜ್ ಷರೀಫ್ ಸುಳ್ಳುಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಭಾರತದ ದಾಳಿಯಿಂದ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿರೋದು, ಪಾಕಿಸ್ತಾನಕ್ಕಾದ ನಷ್ಟವನ್ನ ಶಹಬಾಜ್​​ ಷರೀಫ್​ ಒಪ್ಪಿಕೊಂಡಿದ್ದಾರೆ. ಮೊಂಡುತನ ಮಾಡಿ ಬೆನ್ನು ತಟ್ಟಿಕೊಂಡ ಪಾಕ್​ ಪ್ರಧಾನಿ, ತನ್ನ ಪ್ರಾಣ ಮಿತ್ರ ಚೀನಾಗೆ ವಿಶೇಷ ಧನ್ಯವಾದ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us