4 ತಿಂಗಳಿಗೆ ಟ್ರಂಪ್‌ರಿಂದ ಎಲಾನ್ ಮಸ್ಕ್‌ ದೂರ ಸರಿಯಲು ಪ್ರಮುಖ 4 ಕಾರಣಗಳು; ಏನದು?

author-image
admin
Updated On
4 ತಿಂಗಳಿಗೆ ಟ್ರಂಪ್‌ರಿಂದ ಎಲಾನ್ ಮಸ್ಕ್‌ ದೂರ ಸರಿಯಲು ಪ್ರಮುಖ 4 ಕಾರಣಗಳು; ಏನದು?
Advertisment
  • ಡೊನಾಲ್ಡ್‌ ಟ್ರಂಪ್ ನಿರ್ಧಾರಗಳಿಗೆ ಮುನಿಸಿಕೊಂಡ ಎಲಾನ್ ಮಸ್ಕ್
  • ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾಗುವ ಬಗ್ಗೆಯೂ ಚರ್ಚೆ
  • ಎಲಾನ್ ಮಸ್ಕ್‌ಗೆ ಬರೋಬ್ಬರಿ 159 ಬಿಲಿಯನ್ ಡಾಲರ್‌ ನಷ್ಟ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ನಡುವೆ ಭಿನ್ನಾಭಿಪ್ರಾಯ ಜೋರಾಗಿದೆ. ಟ್ರಂಪ್ ಏಕಪಕ್ಷೀಯ ನಿರ್ಧಾರಗಳಿಗೆ ಮುನಿಸಿಕೊಂಡ ಎಲಾನ್ ಮಸ್ಕ್ ಅವರು ಅಧ್ಯಕ್ಷರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್ ಅವರ ಈ ಮುಸುಕಿನ ಗುದ್ದಾಟ ಇಡೀ ವಿಶ್ವದಾದ್ಯಂತ ಚರ್ಚೆಯಾಗುವಂತೆ ಮಾಡಿದೆ. ಅಸಲಿಗೆ ಇಬ್ಬರು ದಿಗ್ಗಜರು ದೂರಾಗಲು ಅನೇಕ ಕಾರಣಗಳಿವೆ.

publive-image

ಎಲಾನ್ ಮಸ್ಕ್‌ ದೂರಾಗಲು 4 ಕಾರಣಗಳು! 

1. ಡೊನಾಲ್ಡ್ ಟ್ರಂಪ್ ಅವರು ಬಿಗ್ ಬ್ಯೂಟಿಫುಲ್ ಬಿಲ್ ಮೂಲಕ EV ವೆಹಿಕಲ್ ಸಬ್ಸಿಡಿ ರದ್ದುಗೊಳಿಸಿದ್ದರು. ಇದರಿಂದ ಎಲಾನ್ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯ ಕಾರುಗಳ ಮಾರಾಟ ಕುಸಿದಿತ್ತು.

2. ಎಲಾನ್ ಮಸ್ಕ್ ಅವರು ತಮ್ಮ ಆಪ್ತ ಜರೀದ್ ಇಸಾಕ್ ಮನ್‌ರನ್ನು ನಾಸಾದ ಆಡಳಿತಾಧಿಕಾರಿಯಾಗಿ ನೇಮಿಸಲು ಒತ್ತಾಯಿಸಿದ್ದರು. ಆದರೆ ಜರೀದ್ ಇಸಾಕ್ ಮನ್‌ರನ್ನು ನಾಸಾದ ಆಡಳಿತಾಧಿಕಾರಿಯಾಗಿ ನೇಮಿಸಲು ಟ್ರಂಪ್ ನಿರಾಕರಿಸಿದ್ದರು.

3. ಡೊನಾಲ್ಡ್ ಟ್ರಂಪ್ ಸರ್ಕಾರದ ವೆಚ್ಚ ಕಡಿತದ ಮುಖ್ಯಸ್ಥನಾಗಿ ಎಲಾನ್‌ ಮಸ್ಕ್ ನೇಮಕವಾಗಿದ್ದರು. DOGE ಮುಖ್ಯಸ್ಥರಾದ ಬಳಿಕ ಮಸ್ಕ್ ಅವರ ಉದ್ಯಮ ಹಿತಾಸಕ್ತಿಗೆ ಧಕ್ಕೆಯಾಗಿತ್ತು. ಎಲಾನ್ ಮಸ್ಕ್ ಅವರ ಟೆಸ್ಲಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತವಾಗಿದ್ದು, ಕಾರುಗಳಿಗೆ ಬೆಂಕಿ ಬಿದ್ದಿತ್ತು. ಹೀಗಾಗಿ DOGE ಮುಖ್ಯಸ್ಥ ಸ್ಥಾನಕ್ಕೆ ಎಲಾನ್ ಮಸ್ಕ್‌ ಅವರು ರಾಜೀನಾಮೆ ನೀಡಿದ್ದರು.

4. ಎಪಿಸ್ಟನ್ ಫೈಲ್ಸ್ ಹಗರಣದಲ್ಲಿ ಡೊನಾಲ್ಡ್ ಟ್ರಂಪ್ ಹೆಸರಿದೆ ಎಂದು ಎಲಾನ್ ಮಸ್ಕ್ ಹೇಳುತ್ತಿದ್ದಾರೆ. ಎಪಿಸ್ಟನ್ ಫೈಲ್ಸ್ ಅಂದ್ರೆ ಅಮೆರಿಕಾದ ಶ್ರೀಮಂತರು, ಉದ್ಯಮಿಗಳು ನಡೆಸಿದ ಲೈಂಗಿಕ ಹಗರಣ. ಈ ಫೈಲ್ಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಇದ್ದಾರೆ. ಹೀಗಾಗಿ ಎಪಿಸ್ಟನ್ ಫೈಲ್ಸ್ ವಿವರಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದ ಎಲಾನ್ ಮಸ್ಕ್ ಹೇಳಿದ್ದಾರೆ.

publive-image

ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಎಲಾನ್ ಮಸ್ಕ್‌ ಅಸಮಾಧಾನಗೊಂಡಿದ್ದರು. ಹೀಗಾಗಿ ಡೋನಾಲ್ಡ್ ಟ್ರಂಪ್‌ರಿಂದ ದೂರ ಸರಿಯಲು ಮಸ್ಕ್‌ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ! 

ಎಲಾನ್ ಮಸ್ಕ್‌ಗೆ ಭಾರೀ ನಷ್ಟ!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ದೂರ ಸರಿದ ಬಳಿಕವೂ ಎಲಾನ್ ಮಸ್ಕ್ ಕಂಪನಿಗಳ ಷೇರುಗಳ ಬೆಲೆ ಕುಸಿತಗೊಂಡಿದೆ. ಎಲಾನ್ ಮಸ್ಕ್‌ಗೆ ಈಗ ಬರೋಬ್ಬರಿ 159 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗಿದೆ.

ಡೊನಾಲ್ಡ್ ಟ್ರಂಪ್‌, ಎಲಾನ್ ಮಸ್ಕ್ ಭಿನ್ನಾಭಿಪ್ರಾಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಈಗ ಇಬ್ಬರು ಮತ್ತೆ ಒಂದಾಗಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಮತ್ತೆ ಒಂದಾಗಬೇಕು ಅನ್ನೋ ಟ್ವೀಟ್‌ಗೆ ಎಲಾನ್ ಮಸ್ಕ್ ಅವರು ನೀವು ಹೇಳಿದ್ದು ತಪ್ಪಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಎಲಾನ್ ಮಸ್ಕ್ ಅವರ ಈ ಪ್ರತಿಕ್ರಿಯೆ ಇಂದ ಇವರಿಬ್ಬರು ಮತ್ತೆ ಭಿನ್ನಾಭಿಪ್ರಾಯ ಮರೆತು ಒಂದಾಗುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment