ಕರಾಳ ಭಾನುವಾರ.. ಭೀಕರ ಸರಣಿ ಅಪಘಾತಕ್ಕೆ ಸಾಕ್ಷಿಯಾದ ಸೆಪ್ಟೆಂಬರ್ 15, ತುಂಬಾ ಸಾವು ನೋವು

author-image
Veena Gangani
Updated On
ಕರಾಳ ಭಾನುವಾರ.. ಭೀಕರ ಸರಣಿ ಅಪಘಾತಕ್ಕೆ ಸಾಕ್ಷಿಯಾದ ಸೆಪ್ಟೆಂಬರ್ 15, ತುಂಬಾ ಸಾವು ನೋವು
Advertisment
  • ಬೆಳಗಾವಿಯ ಕೃಷ್ಣದೇವರಾಯ ವೃತ್ತದಲ್ಲಿ ಭೀಕರ ಆಕ್ಸಿಡೆಂಟ್
  • ಮಧುಗಿರಿ ಬಳಿ ಬೈಕ್ ಮುಖಾಮುಖಿ ಡಿಕ್ಕಿ 2 ಸ್ಥಳದಲ್ಲೇ ಸಾವು
  • ದೇಗುಲಕ್ಕೆ ಡಿಕ್ಕಿ ಹೊಡೆದು ಭಕ್ತನ ಜೀವ ತೆಗೆದ ಟೆಂಪೋ

ಭಾನುವಾರ ಅಂತ ಮನೆಯಿಂದ ಆಚೆ ಬಂದವರು ಮಸಣ ಸೇರಿದ್ದಾರೆ. ಒಂದಲ್ಲ ಎರಡಲ್ಲ ಹಲವಾರು ಜಿಲ್ಲೆಗಳಲ್ಲಿ ಸಾಲು ಸಾಲು ಅಪಘಾತಗಳು ನಿನ್ನೆ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಸರಣಿ ಅಪಘಾತಕ್ಕೆ ಸಾಕ್ಷಿ ಆಗಿದೆ. 3 ಕಾರು, 2 ಲಾರಿ, 1 ಕಂಟೇನರ್ ಹಾಗೂ ಬೈಕ್​ಗಳಿಗೆ ಮತ್ತೊಂದು ಕಂಟೇನರ್ ಗುದ್ದಿದೆ. ಹೀಗೆ 8 ವಾಹನಗಳ ನಡುವಿನ ಈ ಸರಣಿ ಅಪಘಾತದಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ದೇವರ ಪೂಜೆಗೆ ಬಳಸುವ ಹಿತ್ತಾಳೆ ಪಾತ್ರೆ ಜಿಡ್ಡನ್ನು ತೆಗೆಯುವುದು ಹೇಗೆ? ಇಲ್ಲಿವೆ ಸುಲಭ ಟ್ರಿಕ್ಸ್​!

publive-image

ಬೆಳಗಾವಿಯಲ್ಲಿ ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಕಾರಿಗೆ ಬೈಕ್​ಗುದ್ದಿದೆ. ಈ ರಭಸಕ್ಕೆ ಸವಾರ ಜಂಪ್ ಹೊಡೆದಿದ್ದಾನೆ. ಶ್ರೀಕೃಷ್ಣ ದೇವರಾಯ ವೃತ್ತದ ಬಳಿ ಈ ಘಟನೆ ನಡೆದಿದ್ದು, ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದ್ರೆ, ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

publive-image

ಮಧುಗಿರಿ KSRTC ಡಿಪೋ ಹಾಗೂ ಜಡಗಗೊಂಡನಹಳ್ಳಿ ಮಧ್ಯೆ ಬೈಕ್​​​ಗಳು ಮುಖಾಮುಖಿ ಡಿಕ್ಕಿ ಆಗಿದೆ. ಘಟನೆಯಲ್ಲಿ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ. ಮೃತರನ್ನ ಗೌತಮ್ ಹಾಗೂ ಅನಿಲ್ ಅಂತ ಗುರುತಿಸಲಾಗಿದೆ. ಇನ್ನು, ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಕಾರೊಂದು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಪರಿಭಾಮ ಏಳು ವರ್ಷದ ಶಾಲಿನಿ ಎಂಬ ಬಾಲಕಿ ಮೃತ ಪಟ್ಟಿದೆ. ಬಸವೇಶ್ ಎಂಬ ಬಾಲಕ ಗಂಭೀರ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.

ಇದನ್ನೂ ಓದಿ:​ದರ್ಶನ್​​ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ​.. ನೋ ಎಂದ ಜೈಲು ಅಧಿಕಾರಿಗಳು; ಏನದು?

publive-image

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಬಳಿಯ ಹಸಾಂಡಹಳ್ಳಿಯಲ್ಲಿ ಮುನೇಶ್ವರಸ್ವಾಮಿ ದೇಗುಲಕ್ಕೆ ಟೆಂಪೋ ಡಿಕ್ಕಿ ಹೊಡೆದಿದೆ. ದೇಗುಲದಲ್ಲಿ ಪೂಜೆಗೆ ಬಂದಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.

publive-image

ಈ ಸಾವು-ನೋವುಗಳ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಅಪಘಾತವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನ ತಮ್ಮದೇ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment