/newsfirstlive-kannada/media/post_attachments/wp-content/uploads/2025/01/bgm-death-2.jpg)
ಬೆಳಗಾವಿ: ಮೌನಿ ಅಮಾವಾಸ್ಯೆಯಂದು ಭಕ್ತರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ಕು ಮಂದಿ ಉಸಿರು ಚಲ್ಲಿದ್ದಾರೆ.
ಇದನ್ನೂ ಓದಿ:ಪ್ರಯಾಗರಾಜ್ ಕಾಲ್ತುಳಿತದಲ್ಲಿ 17 ಜನ ಜೀವ ಬಿಟ್ಟ ಕೇಸ್ಗೆ ಟ್ವಿಸ್ಟ್; ಮೊದಲೇ ಸೂಚನೆ ನೀಡಿದ್ದ ಕಮಿಷನರ್!
/newsfirstlive-kannada/media/post_attachments/wp-content/uploads/2025/01/bgm-death-1.jpg)
ಹೌದು, ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಯಾತ್ರಿಕರು ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದರು. ಏಕಾಏಕಿ ಕೋಟ್ಯಾಂತರ ಭಕ್ತರು ಬಂದಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ. ಅಲ್ಲದೇ ಇದೇ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಿಗೆ ಡಿಸಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಅದರಲ್ಲಿ ತಾಯಿ ಹಾಗೂ ಮಗಳು ಕೂಡ ಬಲಿಯಾಗಿದ್ದಾರೆ. ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠನ ಹಾಗೂ ಮೇಘಾ ಹತ್ತರವಾಠ ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. 13 ಜನರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಇನ್ನೂ ಬೆಳಗಾವಿಯ ನಗರದ ಶೆಟ್ಟಿಗಲ್ಲಿ ನಿಚಾಸಿ ಅರುಣ ಗೋರ್ಪಡೆ ಎಂಬುವವರು ಮೃತಪಟ್ಟಿದ್ದಾರೆ. ಅಲ್ಲದೇ ಬೆಳಗಾವಿ ಶಿವಾಜಿ ನಗರದ ನಿವಾಸಿ ಮಹಾದೇವಿ ಕೂಡ ಬಲಿಯಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅರಣು ಹಾಗೂ ಮಹಾದೇವಿ ಕುಟುಂಬಸ್ಥರಿಗೆ ಶಾಸಕ ಶಾಸಕ ರಾಜು ಸೇಠ್ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ವಾಪಸ್ಸು ತರಲು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಇನ್ನೂ, ಹೆಂಡತಿ ಜ್ಯೋತಿ ಹಾಗೂ ಮಗಳು ಮೇಘಾಳನ್ನು ಕಳೆದುಕೊಂಡ ತಂದೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. 13 ಜನರ ಜೊತೆ ನನ್ನ ಹೆಂಡತಿ, ಮಗಳು ಹೋಗಿದ್ದರು. ನನ್ನೆ ರಾತ್ರಿ ಕೂಡ ನನ್ನ ಜೊತೆಗೆ ಮಾತಾಡಿದ್ರೂ, ಆದ್ರೆ ನ್ಯೂಸ್ ನೋಡಿ ನನಗೆ ಶಾಕ್ ಆಯ್ತು. ನಿನ್ನೆ ರಾತ್ರಿ ತುಂಬಾ ಮಾತಾಡಿದ್ರೂ, ಆದ್ರೆ ಬೆಳ್ಳಗೆ ಈ ವಿಚಾರ ಗೊತ್ತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ