ಓಮನ್ ದೇಶದಲ್ಲಿ ಬೆಳಗಾವಿ ಮೂಲದ 4 ಮಂದಿ ದಾರುಣ ಸಾವು; ಆಗಿದ್ದೇನು?

author-image
admin
Updated On
ಓಮನ್ ದೇಶದಲ್ಲಿ ಬೆಳಗಾವಿ ಮೂಲದ 4 ಮಂದಿ ದಾರುಣ ಸಾವು; ಆಗಿದ್ದೇನು?
Advertisment
  • ಬೆಳಗಾವಿ ಜಿಲ್ಲೆ ಗೋಕಾಕ ನಗರದ ನಿವಾಸಿಗಳ ದುರಂತ ಅಂತ್ಯ
  • ಭಾರತಕ್ಕೆ ಮೃತದೇಹ ತರಲು ವಿದೇಶಾಂಗ ಇಲಾಖೆಗೆ ಮನವಿ
  • ಓಮನ್‌ನ ಹೈಮಾ ನಗರದ ಬಳಿ ಸಂಭವಿಸಿದ ಭೀಕರ ದುರಂತ

ಬೆಳಗಾವಿ: ಓಮನ್ ದೇಶದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಗೋಕಾಕ್‌ ಮೂಲದ ನಾಲ್ವರು ಸಜೀವ ದಹನವಾಗಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮೃತ ದೇಹಗಳನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಜೋಡಿ.. ವಿಚ್ಛೇದನದ ಬಳಿಕ ಹೊಸ ಜೀವನ ಆರಂಭ 

ಬೆಳಗಾವಿ ಜಿಲ್ಲೆ ಗೋಕಾಕ ನಗರದ ಪವನ್‌ ಕುಮಾರ್ ತಹಶೀಲ್ದಾರ್, ಪೂಜಾ ತಹಶೀಲ್ದಾರ್, ವಿಜಯಾ ತಹಶೀಲ್ದಾರ್, ಆದಿಶೇಷ ಬಸವರಾಜ್ ಮೃತರು.

publive-image

ನಾಲ್ವರು ಕಾರಿನಲ್ಲಿ ಓಮನ್‌ಗೆ ತೆರಳುವಾಗ ಬೃಹತ್ ಗಾತ್ರದ ಲಾರಿಗೆ ಡಿಕ್ಕಿಯಾಗಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಹೊತ್ತಿ ಉರಿದಿದ್ದು ಕಾರಿನಲ್ಲಿದ್ದ ನಾಲ್ವರು ಸುಟ್ಟು ಹೋಗಿದ್ದಾರೆ.

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ! 

ಓಮನ್‌ನ ಹೈಮಾ ನಗರದ ಬಳಿ ಈ ಭೀಕರ ದುರಂತ ಸಂಭವಿಸಿದೆ. ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಸಜೀವ ದಹನವಾದ ನಾಲ್ವರ ಶವವನ್ನು ಇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment