ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!

author-image
Gopal Kulkarni
Updated On
ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!
Advertisment
  • ನಿತ್ಯ ಜೀವನದಲ್ಲಿ ಎದುರಾಗುವ ನೂರಾರು ಒತ್ತಡಗಳನ್ನು ದಾಟುವುದು ಹೇಗೆ?
  • ದೈನಂದಿನ ಕೆಲಸಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರೆ ಈ 4 ನಿಯಮ ಪಾಲಿಸಿ
  • ಧ್ಯಾನ, ವ್ಯಾಯಾಮ, ಪ್ರಾಣಾಯಾಮದ ಜೊತೆ ಈ 4 ಮಾರ್ಗಗಳಲ್ಲಿ ನಡೆಯಿರಿ

ಒತ್ತಡ, ಮನಸ್ಸಿನ ಶಾಂತತೆಯಯನ್ನು ಕಳೆದುಕೊಳ್ಳುವುದ ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೂಪದಲ್ಲಿ ಬಂದು ಕಾಡುತ್ತದೆ. ಅನೇಕ ಸನ್ನಿವೇಶಗಳಲ್ಲಿ ನಮ್ಮ ಮನಸ್ಸಿನ ತಿಳಿಗೋಳ ಕಲುಕಿದಂತಾಗಿ ಏನೇನೋ ಘಟಿಸಿಬಿಡುತ್ತವೆ. ಇಂದಿನ ಕಾಲಮಾನದಲ್ಲಿ, ಬದಲಾದ ಜೀವನ ಪದ್ಧತಿ, ಆಹಾರ ಪದ್ಧತಿಗಳು ನಮ್ಮನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತಿವೆ. ಸ್ಪರ್ಧಾತ್ಮಕ ಯುಗ. ಎಲ್ಲಿ ನೋಡಿದರು ಓಡುವ ಧಾವಂತ. ಟಾರ್ಗೆಟ್​, ಱಂಕ್ ಒಂದಾ ಎರಡಾ ನೂರಾರು ಒತ್ತಡಗಳ ಕೂಪದಲ್ಲಿ ಈಗ ಮನುಷ್ಯರು ಬಿದ್ದಿದ್ದಾರೆ. ಹಾಗಂತ ಅದನ್ನು ಹಾಗೆ ಬಿಡುವ ಹಾಗೆಯೂ ಇಲ್ಲ. ಒತ್ತಡಗಳಿಂದ ನಾವು ಹೊರಗೆ ಬರಲೇಬೇಕು.

ನಿಮ್ಮನ್ನು ನೀವು ಸರಿಯಾಗಿ ಕಾಳಜಿವಹಿಸಿಕೊಂಡು ನಿಮ್ಮ ಒತ್ತಡದ ಹಂತವನ್ನು ನಿರ್ವಹಣೆ ಮಾಡಬೇಕೆಂದುಕೊಂಡಿದ್ದರೆ ನಿಮ್ಮ ನಿತ್ಯದ ಲೈಫ್​ನಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಕಲಿಯಲೇಬೇಕು. ಕೆಲವೊಂದಿಷ್ಟು ಚಟುವಟಿಕೆಗಳನ್ನು ತಪ್ಪದೇ ನಿತ್ಯ ಮಾಡಬೇಕು ಉದಾಹರಣೆಗೆ ದೀರ್ಘ ಪ್ರಾಣಾಯಾಮ, ಧ್ಯಾನ ಈ ರೀತಿಯ ದಿನದ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಇನ್ನು ಕೆಲವು ಮಾರ್ಗಗಳನ್ನು ನಿಮ್ಮದಾಗಿಸಿಕೊಳ್ಳಬೇಕು.

ಬೇರೆಯವರ ಸಹಾಯಕ್ಕೆ ನಿಲ್ಲಿ
ಇನ್ನೊಬ್ಬರಿಗೆ ಸಹಾಯ ಮಾಡುವುದು ಅದು ಮಾನಸಿಕವಾಗಿಯೇ ಇರಲಿ, ಭಾವನಾತ್ಮಕವಾಗಿಯೇ ಇರಲಿ, ಮಾನವೀಯ ನೆಲಗಟ್ಟಿನಲ್ಲಿಯೇ ಇರಲಿ. ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ನೀವು ನಿಮ್ಮನ್ನು ಒತ್ತಡದಿಂದ ಚೇತರಿಸಿಕೊಳ್ಳಲು ದಾರಿ ಮಾಡ ಕೊಟ್ಟಂತಾಗುತ್ತದೆ. ಸಣ್ಣದೊಂದು ಸಹಾಯ. ಪುಟ್ಟದೊಂದ ಉಪಕಾರ ನಿಮ್ಮ ಮಾನಸಿಕ ಚೈತನ್ಯವನ್ನು ಬೇರೆಯದ್ದೇ ಎತ್ತರಕ್ಕೆ ಒಯ್ಯುತ್ತದೆ. ಧನಾತ್ಮಕ ಚಿಂತನೆಗಳತ್ತ ಅವು ನಿಮ್ಮನ್ನು ಕರೆದುಕೊಂಡು ಹೋಗುತ್ತವೆ.

publive-image

ಜಾಣತನದಿಂದ ಕೆಲಸ ಮಾಡಿ 
ಹಾರ್ಡ್​ ವರ್ಕ್ ಹಾಗೂ ಸ್ಮಾರ್ಟ್ ವರ್ಕ್​ಗೂ ತುಂಬಾ ವ್ಯತ್ಯಾಸವಿದೆ. ತುಂಬಾ ಒತ್ತಡ ತೆಗೆದುಕೊಂಡು ಕೊಂಚ ವಿರಾಮವನ್ನೇ ತೆಗೆದುಕೊಳ್ಳದೇ ಕೆಲಸ ಮಾಡುವುದಿದೆಯಲ್ಲ, ಯಾವುದೋ ಪ್ರಮೋಷನ್​​ಗಾಗಿ, ಹೈಕ್​ಗಾಗಿ ಇದು ನಿಮ್ಮನ್ನು ಮಾನಸಿಕವಾಗಿ ಹೈರಾಣು ಮಾಡಿ ಹಾಕುತ್ತದೆ. ಅಂತಹ ಕೆಲಸಗಳನ್ನು ಆದಷ್ಟು ಸರಳವಾಗಿ ಮಾಡಿಕೊಂಡು ಅಷ್ಟೇ ಜಾಣತನದಿಂದ ಅವುಗಳನ್ನು ಮುಗಿಸಿ ಹಾಕುವುದರತ್ತ ಗಮನ ಹರಿಸಿದರೆ ನೀವು ಒತ್ತಡಗಳಿಂದ ಆಚೆ ಬರುತ್ತೀರಿ.

ಎಲ್ಲ ಸಂದರ್ಭಗಳಲ್ಲಿಯೂ ಕೂಡ ಧನಾತ್ಮಕ ಚಿಂತನೆ ಇರಲಿ
ಮನಸ್ಸನ್ನು ನಾವು ಧನಾತ್ಮಕ ಚಿಂತೆನೆಯತ್ತ ಹೊರಳಿಸುವುದೇ ಒತ್ತಡದಿಂದ ಆಚೆ ಬರುವ ಮೊದಲ ಹೆಜ್ಜೆ. ಕಠಿಣ ಸಂದರ್ಭದಲ್ಲಿಯೂ ಮನಸ್ಸನ್ನು ವಿಚಲಿತಗೊಳ್ಳಲು ಬಿಡಬೇಡಿ. ಬದುಕಿನಲ್ಲಿ ಕೆಲವೊಮ್ಮೆ ಅಂತಹ ಸಂದರ್ಭಗಳು ಬದುಕಿನಲ್ಲಿ ಒದಗಿ ಬರುತ್ತವೆ. ಅವುಗಳನ್ನು ತುಂಬಾ ಧೈರ್ಯವಾಗಿ ಎದುರಿಸಿಕೊಂಡು ಇದು ಕೊನೆಯವರೆಗೆ ಇರುವಂತದ್ದಲ್ಲ ಎಂದು ನಿಮ್ಮ ಮನಸ್ಸಿಗೆ ನೀವೇ ಹೇಳಿ ಧೈರ್ಯದಿಂದ ಮುನ್ನುಗ್ಗುವ ಛಾತಿಯನ್ನು ಬೆಳೆಸಿಕೊಳ್ಳಿ

ಎದುರಾದ ಸಂದರ್ಭವನ್ನು ಒಪ್ಪಿಕೊಳ್ಳಿ
ಅನೇಕರು ಅಂದುಕೊಳ್ಳುತ್ತಾರೆ. ಬದುಕಿನಲ್ಲಿ ಬರುವ ಎಲ್ಲಾ ಸನ್ನಿವೇಶಗಳನ್ನು ನಾನು ನಿಯಂತ್ರಣ ಮಾಡಬಲ್ಲೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ ಅಸಲಿಗೆ ಅದು ಹಾಗೆ ಇರುವುದಿಲ್ಲ. ಅದು ಪ್ರತಿಬಾರಿಯೂ ಸಾಧ್ಯವೂ ಇಲ್ಲ. ಆದ್ದರಿಂದ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ನೋಡಿ. ಬಂದ ಸಂದರ್ಭವನ್ನು ತುಂಬಾ ಪ್ರೀತಿಯಿಂದಲೇ ಸ್ವೀಕಾರ ಮಾಡಿ. ಶಾಂತ ರೀತಿಯಿಂದ ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ಎಂದು ವಿಚಾರ ಮಾಡಿಕೊಂಡು ಮುಂದುವರಿಯಿರಿ.

ಈ ರೀತಿಯಾಗಿ ನೀವು ಮಾಡಿಕೊಂಡರೆ ಒತ್ತಡವನ್ನು ತುಂಬಾ ಸರಳವಾಗಿ ದಾಟಬಲ್ಲಿರಿ. ತುಂಬಾ ಸರಳವಾಗಿ ಅದನ್ನು ನಿಯಂತ್ರಣ ಮಾಡಬಲ್ಲಿರಿ. ಈ ನಾಲ್ಕು ನಿಯಮಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಪಾಲನೆ ಮಾಡುತ್ತಲೇ ಬಂದರೆ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಆರೋಗ್ಯದಿಂದ ಇರುತ್ತೀರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment