ಭಾರತಕ್ಕೆ 4 ಸೂಪರ್ ಸ್ಟಾರ್ಸ್ ಪವರ್.. ಈ ನಾಲ್ವರು ಸಿಡಿದೆದ್ರೆ ಪಾಕಿಸ್ತಾನ ನೆಲ ಕಚ್ಚೋದು ಪಕ್ಕಾ!

author-image
admin
Updated On
ಭಾರತಕ್ಕೆ 4 ಸೂಪರ್ ಸ್ಟಾರ್ಸ್ ಪವರ್.. ಈ ನಾಲ್ವರು ಸಿಡಿದೆದ್ರೆ ಪಾಕಿಸ್ತಾನ ನೆಲ ಕಚ್ಚೋದು ಪಕ್ಕಾ!
Advertisment
  • ಏಕದಿನ ಕ್ರಿಕೆಟ್​​ನ ನಂಬರ್ ಒನ್ ತಂಡಕ್ಕೆ ಬದ್ಧವೈರಿ ಪಾಕ್ ಎದುರಾಳಿ
  • ಈ ಬಾರಿಯೂ ಪಾಕ್​​​​​, ಕೊಚ್ಚಿ ಹೋಗೋದು ಖಚಿತ ಹೇಗೆ ಗೊತ್ತಾ?
  • ಬಾಂಗ್ಲಾ ಎದುರು ಫೇಲ್​ ಆದ ವಿರಾಟ್ ಕೊಹ್ಲಿ ಇಂದು ಅಸಲಿ ಯುದ್ಧ!

ಪಾಕ್​​​​​​​​​ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ರೋಹಿತ್ ಪಡೆ ಪಂದ್ಯ ಗೆಲ್ಲೋ ಕ್ಲಿಯರ್ ಫೇವರಿಟ್ಸ್​. ಯಾಕಂದ್ರೆ ಟೀಮ್ ಇಂಡಿಯಾದಲ್ಲಿ ಪಾಕ್ ತಂಡವನ್ನ ಸೋಲಿಸೋಕೆ, ಆ ನಾಲ್ವರು ರೆಡಿಯಾಗಿದ್ದಾರೆ. ಈಗಾಗಲೇ ಬದ್ಧವೈರಿಗಳನ್ನ ಸಿಕ್ಕಾಪಟ್ಟೆ ಕಾಡಿರುವ ಇವರು, ದುಬೈನಲ್ಲೂ ವೈರಿಗಳ ವಿರುದ್ಧ ದರ್ಬಾರ್ ನಡೆಸೋಕೆ ರೆಡಿಯಾಗಿದ್ದಾರೆ.

ಏಕದಿನ ಕ್ರಿಕೆಟ್​​ನ ನಂಬರ್ ಒನ್ ತಂಡಕ್ಕೆ, ಬದ್ಧವೈರಿ ಪಾಕ್ ಎದುರಾಳಿ. ಈ ಬಾರಿಯೂ ಪಾಕ್​​​​​, ಕೊಚ್ಚಿ ಹೋಗೋದು ಖಚಿತ. ಯಾಕಂದ್ರೆ, ಟೀಮ್ ಇಂಡಿಯಾಕ್ಕೆ ಅನುಭವಿಗಳ ಜೊತೆಗೆ ಸೂಪರ್ ​ಸ್ಟಾರ್ಸ್​​ ಪವರ್ ಇದೆ. ಇದಲ್ಲದೇ ಮ್ಯಾಚ್ ವಿನ್ನರ್ಸ್, ತಂಡದ ಬಲ ಹೆಚ್ಚಿಸಿದ್ದಾರೆ. ಈ ಹಿಂದೆ ಪಾಕ್ ತಂಡವನ್ನ, ಚಿಂದಿ ಉಡಾಯಿಸಿದ್ದಾರೆ.

publive-image

ಬಾಂಗ್ಲಾ ಎದುರು ವಿರಾಟ್‌ ಕೊಹ್ಲಿ ಫೇಲ್​ ಆಗಿರಬಹುದು. ಆದ್ರೆ, ಪಾಕ್​ ವಿರುದ್ಧ ಕಿಂಗ್​ ಕೊಹ್ಲಿ ಕೊಹ್ಲಿ ಘರ್ಜನೆ ಪಕ್ಕಾ. ಬದ್ಧವೈರಿಗಳ ವಿರುದ್ಧದ ಕದನ ಎಂದಾಗಲೆಲ್ಲಾ ಬೌಲರ್​ಗಳನ್ನ ಚಿಂದಿ ಉಡಾಯಿಸಿದ್ದಾರೆ. ಈ ಆಟವೇ ರಿಜ್ವಾನ್ ಪಡೆಗೆ ಇನ್ನಿಲ್ಲದ ನಡುಕ ಹುಟ್ಟಿಸಿದೆ.

publive-image

ಪಾಕ್​​ಗೆ 'ವಿರಾಟ' ದರ್ಶನ..!
ಪಂದ್ಯ- 16
ರನ್- 678
ಸರಾಸರಿ- 52.15
50/100- 2/3

ಕಿಂಗ್ ಕೊಹ್ಲಿ ಪಾಕ್ ತಂಡಕ್ಕೆ ವಿರಾಟ ದರ್ಶನ ಮಾಡಿಸಿದ್ದಾರೆ. ಬದ್ಧವೈರಿಗಳ ವಿರುದ್ಧ ಆಡಿರೋ 16 ಪಂದ್ಯಗಲ್ಲಿ 678 ರನ್​​ ಕಲೆ ಹಾಕಿದ್ದಾರೆ. 52ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್​ಗಳಿಸಿರೋ ಕೊಹ್ಲಿ, 2 ಅರ್ಧಶತಕ ಮತ್ತು 3 ಭರ್ಜರಿ ಶತಕಗಳನ್ನ ಸಿಡಿಸಿದ್ದಾರೆ.

ಕ್ಯಾಪ್ಟನ್ ರೋಹಿತ್ ಶರ್ಮಾಗೂ, ಪಾಕ್​​​​​​​​​​​​​​​​​​​​​​​​​​​​​​​​​​​​​​​​ ಅಂದ್ರೆ ಫೇವರಿಟ್. ಪಾಕ್ ಬೌಲರ್​ಗಳನ್ನ ಹಿಗ್ಗಾಮುಗ್ಗಾ ಜಾಡಿಸಿರುವ ರೋಹಿತ್, ಸೂಪರ್ ಹಿಟ್ ಪರ್ಫಾಮೆನ್ಸ್ ನೀಡಿದ್ದಾರೆ.

publive-image

ಪಾಕ್ ವಿರುದ್ಧ ರೋ'ಹಿಟ್'..!​​​
ಪಂದ್ಯ- 19
ರನ್- 873
ಸರಾಸರಿ- 51.35
50/100- 8/2

ಪಾಕ್ ಎದುರು 19 ಪಂದ್ಯಗಳನ್ನಾಡಿರುವ ಹಿಟ್​ಮ್ಯಾನ್​ 873 ರನ್​​ ಬಾರಿಸಿದ್ದಾರೆ. 51.35 ಬ್ಯಾಟಿಂಗ್ ಌವರೇಜ್ ಹೊಂದಿರುವ ಮುಂಬೈಕರ್, 8 ಬಾರಿ 50ರ ಗಡಿ ದಾಟಿದ್ದಾರೆ. 2 ಶತಕಗಳನ್ನೂ ಬಾರಿಸಿದ್ದಾರೆ.

ಕನ್ನಡಿಗ ಕೆ.ಎಲ್.ರಾಹುಲ್​​​ ಸಹ, ಪಾಕ್ ತಂಡಕ್ಕೆ ವಿಲನ್ ಆಗಿ ಕಾಡಿದ್ದಾರೆ. ಆಡಿದ್ದು ಬೆರಳೆಣಿಯಷ್ಟು ಪಂದ್ಯಗಳಾದ್ರೂ, ರಾಹುಲ್ ಹೆಸರನ್ನ ಎದುರಾಳಿಗಳು ಪದೇ ಪದೇ ನೆನಪಿಸಿಕೊಳ್ತಾರೆ.

publive-image

ಪಾಕ್​ಗೆ ಕೆ.ಎಲ್.'ರಾಹು'ಲ್..!
ಪಂದ್ಯ- 03
ರನ್- 187
ಸರಾಸರಿ- 187
50/100- 1/1
3 ಪಂದ್ಯಗಳಲ್ಲಿ 1 ಅರ್ಧಶತಕ ಮತ್ತು 1 ಶತಕ ದಾಖಲಿಸಿರುವ ರಾಹುಲ್, 187 ರನ್​​ ಪೇರಿಸಿದ್ದಾರೆ. ರಾಹುಲ್ ಬ್ಯಾಟಿಂಗ್ ಸರಾಸರಿ 187 ದಾಟಿದೆ.

ಬೌಲಿಂಗ್​ನಲ್ಲೂ ಪಾಕ್ ಬ್ಯಾಟ್ಸ್​ಮನ್​​ಗಳು, ಚೈನಾಮನ್ ಕುಲ್ದೀಪ್ ಯಾದವ್ ಸ್ಪಿನ್​ಗೆ ಸ್ಟನ್ ಆಗಿದ್ದಾರೆ. ಇದನ್ನ ಕುಲ್ದೀಪ್ ದಾಖಲೆಗಳೇ ಹೇಳುತ್ತವೆ..!

publive-image

ಕುಲ್ದೀಪ್ 'ಸ್ಪಿನ್'​ಗೆ ಪಾಕ್ 'ಸ್ಟನ್'..!
ಪಂದ್ಯ- 06
ವಿಕೆಟ್- 12
ಎಕಾನಮಿ- 3.77
ಬೆಸ್ಟ್ ಬೌಲಿಂಗ್- 5/25

6 ಪಂದ್ಯಗಳಲ್ಲಿ 45 ಓವರ್ ಬೌಲ್ ಮಾಡಿರುವ ಕುಲ್ದೀಪ್, 12 ವಿಕೆಟ್ ಪಡೆದಿದ್ದಾರೆ. ಓವರ್​ಗೆ ಕೇವಲ 3.77ರಂತೆ ರನ್ ನೀಡಿರುವ ಚೈನಾಮನ್ ಸ್ಪಿನ್ನರ್, ಪಂದ್ಯವೊಂದರಲ್ಲಿ 25 ರನ್​ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಇದು ಪಾಕ್ ವಿರುದ್ಧ ಕುಲ್ದೀಪ್ ಬೆಸ್ಟ್ ಬೌಲಿಂಗ್ ಸ್ಪೆಲ್ ಆಗಿದೆ.

ಇದನ್ನೂ ಓದಿ: ಇಂದು ಭಾರತಕ್ಕೆ ದೊಡ್ಡ ಅಗ್ನಿ ಪರೀಕ್ಷೆ.. ಪ್ಲಸ್​, ಮೈನಸ್‌ಗಳು ಏನು? ರೋಹಿತ್ ಪಡೆಗೆ ವರದಾನವಾಗುತ್ತಾ ಪಾಕ್​ ಕಳಪೆ ಬೌಲಿಂಗ್​? 

ಕೊಹ್ಲಿ, ರೋಹಿತ್, ರಾಹುಲ್ ಮತ್ತು ಕುಲ್ದೀಪ್ ಅಷ್ಟೇ ಅಲ್ಲ. ಟೀಮ್ ಇಂಡಿಯಾದ 11 ಮಂದಿ ಆಟಗಾರರೂ, ಮ್ಯಾಚ್​ ವಿನ್ನರ್​ಗಳೇ. ಅದ್ರಲ್ಲೂ ಪಾಕ್ ವಿರುದ್ಧದ ಪಂದ್ಯ ಅಂದ್ರೆ, ಒಬ್ಬರಿಬ್ಬರಲ್ಲ. ಪ್ರತಿಯೊಬ್ಬ ಆಟಗಾರನೂ 100ಕ್ಕೆ ನೂರರಷ್ಟು ಗೆಲ್ಲೋಕೆ ಸೈನಿಕನಂತೆ ಹೋರಾಡ್ತಾನೆ. ಹೀಗಾಗಿ ಬದ್ಧವೈರಿ ಪಾಕ್ ವಿರುದ್ಧ ಸೋಲೋ ಮಾತೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment