newsfirstkannada.com

ಅಹಮದಾಬಾದ್ ಏರ್‌ಪೋರ್ಟ್‌​​ನಲ್ಲಿ ನಾಲ್ವರು ಐಸಿಸ್ ಶಂಕಿತ ಉಗ್ರರ ಅರೆಸ್ಟ್​​; ಏನಿದು ಕೇಸ್​?

Share :

Published May 20, 2024 at 4:32pm

Update May 20, 2024 at 5:11pm

    ಬಂಧಿತ ಉಗ್ರರು ಉಪಯೋಗಿಸುತ್ತಿದ್ದ ಫೋನ್‌ಗಳು ಪೊಲೀಸ್​ ವಶಕ್ಕೆ

    ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆಯ ಇಮೇಲ್‌

    ಬಂಧಿತ ನಾಲ್ವರು ಭಯೋತ್ಪಾದಕರು ಶ್ರೀಲಂಕಾದ ನಾಗರಿಕರು ಎಂದು ಪತ್ತೆ

ಗಾಂಧಿನಗರ: ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಇಂದು 4 ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ (ATS) ತಂಡ ಬಂಧಿಸಿದೆ. ಬಂಧಿತ ನಾಲ್ವರು ಭಯೋತ್ಪಾದಕರು ಶ್ರೀಲಂಕಾ ಮೂಲದವರು ಎಂದು ತಿಳಿದು ಬಂದಿದೆ. ಗುಜರಾತ್ ಎಟಿಎಸ್ ತಂಡವು ವಿಮಾನ ನಿಲ್ದಾಣದಲ್ಲಿ ನಾಲ್ವರು ಉಗ್ರರು ಕೂಡಲೇ ಬಂಧಿಸಿದ್ದಾರೆ. ಸದ್ಯ ಬಂಧಿತ ಉಗ್ರರು ಉಪಯೋಗಿಸುತ್ತಿದ್ದ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ​ಫ್ಯಾನ್ಸ್​​ಗೆ ಗುಡ್​ನ್ಯೂಸ್​; ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಬೆಡಗಿ ನಟಿ ಸಿರಿ

ಮೂಲಗಳ ಪ್ರಕಾರ, ಪಾಕಿಸ್ತಾನದ ಏಜೆಂಟರು ದಾಳಿಯಲ್ಲಿ ಬಳಸಬಹುದಾದ ಕೆಲವು ಶಸ್ತ್ರಾಸ್ತ್ರಗಳನ್ನು ಈ ಉಗ್ರರಿಗೆ ನೀಡುವುದಾಗಿ ಭರವಸೆ ನೀಡಿದ್ದರಂತೆ. ಆದರೆ ಅದಕ್ಕೂ ಮೊದಲೇ ಈ ನಾಲ್ಕು ಭಯೋತ್ಪಾದಕರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಯೋತ್ಪಾದಕರು ಶ್ರೀಲಂಕಾದಿಂದ ಚೆನ್ನೈ ಮೂಲಕ ಅಹಮದಾಬಾದ್ ತಲುಪಿದ್ದಾರೆ ಎನ್ನಲಾಗಿದೆ. ಅವರು ತಮ್ಮ ತಮ್ಮ ಸ್ಥಳವನ್ನು ತಲುಪುವ ಮೊದಲೇ ಗುಜರಾತ್ ಎಟಿಎಸ್‌ ತಂಡದವರು ಬಂಧಿಸಿದ್ದಾರೆ. ಮೇ 12ರಂದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು.

ಇದಾದ ಬಳಿಕ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣದ ಎಲ್ಲಾ ಕಡೆ ಪರಿಶೀಲನೆ ನಡೆಸಿದ ಬಳಿಕ ಅದು ಸುಳ್ಳು ಇಮೇಲ್​ ಎಂದು ತಿಳಿದುಬಂದಿತ್ತು. ಆದರೆ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಇಮೇಲ್ ಐಡಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಇದಾದ ನಂತರ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನು ಸ್ಕ್ಯಾನ್ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಹೇಳಿದ್ದಾರೆ. ಸದ್ಯ 4 ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ (ATS) ತಂಡ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಹಮದಾಬಾದ್ ಏರ್‌ಪೋರ್ಟ್‌​​ನಲ್ಲಿ ನಾಲ್ವರು ಐಸಿಸ್ ಶಂಕಿತ ಉಗ್ರರ ಅರೆಸ್ಟ್​​; ಏನಿದು ಕೇಸ್​?

https://newsfirstlive.com/wp-content/uploads/2024/05/Terrorists.jpg

Load More